Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇರಾನ್ ಕಡೆಗೆ ಕೆಂಪು ಬಾಣಗಳಿರುವ ನಕ್ಷೆ ಪೋಸ್ಟ್ ಮಾಡಿದ ಡೊನಾಲ್ಡ್ ಟ್ರಂಪ್; ಜಾಗತಿಕ ವಲಯದಲ್ಲಿ ತಲ್ಲಣ!

Spread the love

ವಾಷಿಂಗ್ಟನ್: ಮಧ್ಯಪ್ರಾಚ್ಯದ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಕುರಿತ ಚರ್ಚೆಗಳ ಮಧ್ಯೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ರತ್ ಸೋಶಿಯಲ್‌ನಲ್ಲಿ ಮಾಡಿರುವ ಪೋಸ್ಟ್ ಊಹಾಪೋಹಕ್ಕೆ ಕಾರಣವಾಗಿದೆ.
ಯಾವುದೇ ಶೀರ್ಷಿಕೆಯನ್ನು ನೀಡದೆ ಟ್ರಂಪ್ ಟೂತ್‌ ಸೋಶಿಯಲ್‌ನಲ್ಲಿ ಮಧ್ಯಪ್ರಾಚ್ಯದ ನಕ್ಷೆಯನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಕೆಂಪು ಬಾಣಗಳು ಇರಾನ್ ಕಡೆಗೆ ಕೇಂದ್ರೀಕೃತವಾಗಿರುವುದು ಕಂಡು ಬಂದಿದೆ. ಈ ಗಮನಾರ್ಹ ದೃಶ್ಯ ಇರಾನ್ ಅನ್ನು ಸುತ್ತುವರಿದಿರುವುದು ಮತ್ತು ಹೆಚ್ಚುತ್ತಿರುವ ಅಮೆರಿಕದ ಒತ್ತಡದ ಕುರಿತ ಸಂದೇಶವೆಂದು ವಿಶ್ಲೇಷಿಸಲಾಗುತ್ತಿದೆ.

ಮಧ್ಯಪ್ರಾಚ್ಯದಲ್ಲಿ ಶಾಂತಿ ಮಾತುಕತೆ ಕುರಿತ ಇತ್ತೀಚಿನ ಪ್ರಸ್ತಾಪಗಳನ್ನು ಅಮೆರಿಕ, ಇರಾನ್ ಪರಸ್ಪರ ತಿರಸ್ಕರಿಸುತ್ತಿರುವುದರಿಂದ ಟ್ರಂಪ್ ಪೋಸ್ಟ್ ಮಹತ್ವವನ್ನು ಪಡೆದುಕೊಂಡಿದೆ. ಟ್ರಂಪ್ ಅವರು ಪೋಸ್ಟ್‌ನಲ್ಲಿ ಏನೂ ಬರೆದಿಲ್ಲದಿದ್ದರೂ ಮಾತುಕತೆಗಳು ವಿಫಲವಾದರೆ ಇರಾನ್ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಠಿಣ ಎಚ್ಚರಿಕೆ ನೀಡಿರುವಂತೆ ಕಂಡು ಬಂದಿದೆ ಎಂದು ವರದಿಯಾಗಿದೆ.
ಟ್ರಂಪ್ ಹಂಚಿಕೊಂಡಿರುವ ಪೋಟೊ ಬಲವಾದ ಸಾಂಕೇತಿಕ ಸಂದೇಶವನ್ನು ಹೊಂದಿದೆ. ಮಧ್ಯಪ್ರಾಚ್ಯದ ಸಂಪೂರ್ಣ ಪ್ರದೇಶದ ಮೇಲೆ ಅಮೆರಿಕದ ಧ್ವಜವು ಹರಡಿರುವುದು ಆ ಪ್ರದೇಶಗಳಲ್ಲಿ ಅಮೆರಿಕದ ಪ್ರಭುತ್ವವನ್ನು ಸೂಚಿಸುವಂತಿದೆ.ಇರಾನ್ ಕಡೆಗೆ ತೋರಿಸಿರುವ ಬಾಣಗಳು ಆರ್ಥಿಕ ಮತ್ತು ರಾಜತಾಂತ್ರಿಕ ಸೇನಾ ಸೇರಿದಂತೆ ಹಲವು ರೀತಿಯ ಒತ್ತಡ ಹೆಚ್ಚುತ್ತಿರುವುದನ್ನು ಸೂಚಿಸುತ್ತವೆ.

ಭೌಗೋಳಿಕ ರಾಜಕೀಯ ತಜ್ಞರ ಪ್ರಕಾರ, ಈ ಚಿತ್ರವು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿನ ಅಮೆರಿಕದ ನೌಕಾಪಡೆಯ ನಿಯೋಜನೆ, ನೆರೆಯ ಇರಾಕ್ ಮತ್ತು ಸಿರಿಯಾದಲ್ಲಿನ ಕಾರ್ಯಾಚರಣೆಗಳು ಹಾಗೂ ಇರಾನ್ ವಿರುದ್ಧದ ಅಮೆರಿಕದ ತಂತ್ರಗಳಿಗೆ ಪ್ರಾದೇಶಿಕ ಮಿತ್ರ ರಾಷ್ಟ್ರಗಳ ಬೆಂಬಲವನ್ನು ಸೂಚಿಸುತ್ತದೆ.


Spread the love
Share:

administrator

Leave a Reply

Your email address will not be published. Required fields are marked *