Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಫಾರಿ ಜೀಪ್ ಮೇಲೆ ಮುನ್ನುಗ್ಗಿ ಬಂದ ದೈತ್ಯ ರೈನೋ; ವಾಹನ ಉರುಳಿಸಲು ಯತ್ನಿಸಿದ ಭೀಕರ ದೃಶ್ಯ ವೈರಲ್!

Spread the love

ಗುವಾಹತಿ : ಅಸ್ಸಾಂನ ಪ್ರಸಿದ್ಧ ಮಾನಸ್ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಸಫಾರಿ ನಡೆಸುತ್ತಿದ್ದ ಮುಗ್ಧ ಪ್ರವಾಸಿಗರ ಜೀಪ್ ಮೇಲೆ ಖಡ್ಗಮೃಗವೊಂದು (ರೈನೋ) ಆಕ್ರಮಣಕಾರಿ ದಾಳಿ ನಡೆಸಿ, ವಾಹನವನ್ನೇ ಉರುಳಿಸಲು ಯತ್ನಿಸಿದ ಘಟನೆ ನಡೆದಿದೆ. ಈ ಭೀಕರ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.ಉದ್ಯಾನವನದ ಬನ್ಸ್‌ಬಾರಿ ವಲಯದಲ್ಲಿ ಪ್ರವಾಸಿಗರು ಓಪನ್ ಜೀಪ್‌ನಲ್ಲಿ ವನ್ಯಜೀವಿ ವೀಕ್ಷಣೆ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಸಫಾರಿ ಮಾರ್ಗ ಮಧ್ಯೆ ವಾಹನ ನಿಂತಿದ್ದಾಗ ಅಲ್ಲಿಗೆ ಧಾವಿಸಿ ಬಂದ ದೈತ್ಯ ಖಡ್ಗಮೃಗವೊಂದು ಏಕಾಏಕಿ ಜೀಪ್‌ಗೆ ತನ್ನ ಕೊಂಬಿನಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ರೈನೋ ಹೊಡೆದ ರಭಸಕ್ಕೆ ಜೀಪ್‌ನ ಟೈರ್ ಸ್ಥಳದಲ್ಲೇ ಛಿದ್ರಗೊಂಡಿದೆ.

ವೈರಲ್ ವಿಡಿಯೋದಲ್ಲಿ ಖಡ್ಗಮೃಗವು ಇಡೀ ಜೀಪನ್ನು ತನ್ನ ಬಲದಿಂದ ತಳ್ಳುತ್ತಾ, ಮೇಲಕ್ಕೆತ್ತಿ ಉರುಳಿಸಲು ಹರಸಾಹಸ ಪಡುತ್ತಿರುವುದು ಸೆರೆಯಾಗಿದೆ. ಈ ವೇಳೆ ಜೀಪ್‌ನಲ್ಲಿದ್ದ ಪ್ರವಾಸಿಗರು ಭಯದಿಂದ ಕಿರುಚಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ಸಫಾರಿ ಚಾಲಕ ಧೈರ್ಯ ಕಳೆದುಕೊಳ್ಳದೆ, ಜೀಪನ್ನು ನಿಧಾನವಾಗಿ ರೈನೋದಿಂದ ದೂರ ಚಲಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.


Spread the love
Share:

administrator

Leave a Reply

Your email address will not be published. Required fields are marked *