Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ: ಡಿವಿ ಸಹಾಯಕ ಪ್ರೊಫೆಸರ್ ಅಪಾರ್ಟ್‌ಮೆಂಟ್‌ನಲ್ಲಿ ಭೀಕರ ಹ*ತ್ಯೆ; ಬೆಡ್ ಮೇಲೆ ಪತ್ತೆಯಾಯ್ತು ರಕ್ತಸಿಕ್ತ ಶವ!

Spread the love

ಹೊಸದಿಲ್ಲಿ: ದೆಹಲಿ ವಿಶ್ವವಿದ್ಯಾನಿಲಯದ ಸಹಾಯಕ ಪ್ರೊಫೆಸರ್, 42 ವರ್ಷ ವಯಸ್ಸಿನ ಮಹಿಳೆಯನ್ನು ಪೂರ್ವ ದೆಹಲಿಯಲ್ಲಿರುವ ಅವರ ವಸುಂಧರಾ ಎನ್ನೇವ್ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಮಧ್ಯಾಹ್ನ ಭೀಕರವಾಗಿ ಹತ್ಯೆ ಮಾಡಲಾಗಿದೆ.
ದೇವೊಸ್ಮಿತಾ ಪಾಲ್ (42) ಇಲ್ಲಿನ ಶಿವಾಜಿ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಬೋಧನೆ ಮಾಡುತ್ತಿದ್ದರು. ಸತ್ಯಂ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿ ಅವರು ವಾಸವಿದ್ದರು.
ಸಂತ್ರಸ್ತೆಯ ಸಹೋದರಿ ದೇವರತಿ ಪಾಲ್ (49) 2.35ಕ್ಕೆ ಹೊಸ ಅಶೋಕನಗರ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಮಾಡಿ ಮಾಹಿತಿ ನೀಡಿದ್ದಾರೆ. “ತಮ್ಮ ಸಹೋದರಿಯನ್ನು ಅಪಾರ್ಟ್‌ಮೆಂಟ್‌ನಲ್ಲಿ ಹತ್ಯೆ ಮಾಡಲಾಗಿದೆ. ಇಡೀ ದಿನ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡುತ್ತಿದ್ದೆ. ಆದರೆ ಕರೆಗಳಿಗೆ ಉತ್ತರಿಸುತ್ತಿಲ್ಲ” ಎಂದು ದೇವರತಿ ಹೇಳಿದ್ದಾಗಿ ಪೊಲೀಸರು ವಿವರಿಸಿದ್ದಾರೆ.

ಆತಂಕದಿಂದ ಸಹೋದರಿ ಅಪಾರ್ಟ್‌ಮೆಂಟ್‌ಗೆ ತೆರಳಿ ನೋಡಿದಾಗ ಫ್ಲಾಟ್‌ಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಸಂಶಯದಿಂದ ಬಾಗಿಲು ಪಡೆದು ನೋಡಿದಾಗ ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಬೆಡ್ ಮೇಲೆ ಸಂತ್ರಸ್ತೆಯ ಶವ ಕಂಡುಬಂದಿದೆ ಹಾಗೂ ತಲೆಗೆ ತೀವ್ರ ಗಾಯಗಳಾಗಿದ್ದವು. ಹರಿತವಲ್ಲದ ಆಯುಧಗಳಿಂದ ಹೊಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ತಲೆಯ ಮೇಲಿನ ಗಾಯಗಳನ್ನು ನೋಡಿದಾಗ ದಾಳಿಯಲ್ಲಿ ಹರಿತ ಆಯುಧಗಳನ್ನು ಬಳಸಿರುವುದೂ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶ ವಿಭಜನೆ ಕುರಿತ ಅಧ್ಯಯನ, ಭಾರತೀಯ ಭಾಷೆ, ಸಾಮ್ರಾಜ್ಯಶಾಹಿ ಆಡಳಿತ ಬಳಿಕದ ಸಾಹಿತ್ಯ ಮತ್ತು ಭಾಷಾಂತರ ಅಧ್ಯಯನ ಬಗ್ಗೆ ಅಧ್ಯಯನ ಮಾಡುತ್ತಿದ್ದ ಅವರು ಉತ್ತಮ ಶಿಕ್ಷಣ ತಜ್ಞೆ ಎನಿಸಿಕೊಂಡಿದ್ದರು ಎಂದು ಕಾಲೇಜು ವೆಬ್‌ಸೈಟ್ ಮಾಹಿತಿಯಿಂದ ತಿಳಿದುಬಂದಿದೆ. ಇವರು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯಿಂದ 2016ರಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದರು.


Spread the love
Share:

administrator

Leave a Reply

Your email address will not be published. Required fields are marked *