Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: HDFC ಲೈಫ್ ಇನ್ಸೂರೆನ್ಸ್ ಪಾಲಿಸಿ ಹೆಸರಲ್ಲಿ ಕನ್ನ – 2 ಲಕ್ಷ ರೂಪಾಯಿ ಹಣ ಸೈಬರ್ ವಂಚಕರ ಪಾಲು!

Spread the love

ಮಂಗಳೂರು : ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್ (HDFC Life Insurance) ಹೆಸರಿನಲ್ಲಿ ನಂಬಿಸಿ 45 ವರ್ಷದ ವ್ಯಕ್ತಿಯೊಬ್ಬರಿಂದ ಒಟಿಪಿ (OTP) ಹಾಗೂ ವಂಚನೆಯ ಲಿಂಕ್ ಮೂಲಕ ಬರೋಬ್ಬರಿ ₹2,00,000/- (ಎರಡು ಲಕ್ಷ ರೂಪಾಯಿ) ಹಣವನ್ನು ವಂಚಿಸಿರುವ ಘಟನೆ ವರದಿಯಾಗಿದೆ. ವಂಚನೆಗೆ ಒಳಗಾದ ಸಂತ್ರಸ್ತರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಸಿಎನ್‌ಇ (CEN) ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.ಸಂತ್ರಸ್ತರು ಕಳೆದ ಆಗಸ್ಟ್ ತಿಂಗಳ ಕೊನೆಯ ವಾರದಲ್ಲಿ  ಕೇರಳ ಬ್ರ್ಯಾಂಚ್‌ನಲ್ಲಿರುವ ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್‌ನಲ್ಲಿ ತಮ್ಮ ತಂದೆಯ ಹೆಸರಿನಲ್ಲಿದ್ದ ಪಾಲಿಸಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಲು ಅಗತ್ಯ ದಾಖಲೆಗಳೊಂದಿಗೆ ಕೋರಿಕೆ ಅರ್ಜಿ ಸಲ್ಲಿಸಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು, ಸೆಪ್ಟೆಂಬರ್ 5 , 2026 ರಂದು ಬೆಳಿಗ್ಗೆ 11:05 ಕ್ಕೆ ‘ರವಿ ಕುಮಾರ್’ ಎಂದು ಪರಿಚಯಿಸಿಕೊಂಡು ಕರೆ ಮಾಡಿದ್ದಾರೆ. “ಇನ್ಶೂರೆನ್ಸ್ ವೆರಿಫಿಕೇಶನ್‌ಗಾಗಿ ನಿಮ್ಮ ಮೊಬೈಲ್‌ಗೆ ಒಟಿಪಿ ಬಂದಿದ್ದು, ಅದನ್ನು ತಿಳಿಸಿ” ಎಂದು ನಂಬಿಸಿ ಅವರಿಂದ ಒಟಿಪಿ ಪಡೆದುಕೊಂಡಿದ್ದಾರೆ.

ಬಳಿಕ ಸೆಪ್ಟೆಂಬರ್ 7 ರಂದು ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ‘ನವೀನ್ ಜೆ’ ಎಂಬಾತ ತಾನು ಹೆಚ್‌ಡಿಎಫ್‌ಸಿ ಲೈಫ್ ಇನ್ಶೂರೆನ್ಸ್‌ನ ಸೀನಿಯರ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ವೈಯಕ್ತಿಕ ದಾಖಲಾತಿಗಳನ್ನು ವಾಟ್ಸಪ್ ಮುಖಾಂತರ ಪಡೆದುಕೊಂಡ ವಂಚಕ, “ಹೊಸ ಇನ್ಶೂರೆನ್ಸ್ ಮಾಡಲು ₹2,00,000 ಹಣವನ್ನು ಮೊದಲು ಪಾವತಿಸಬೇಕಾಗುತ್ತದೆ. ಆ ಹಣವನ್ನು ಬಳಿಕ ಪ್ರೀಮಿಯಂನಲ್ಲಿ ವಾಪಸ್ ನೀಡಲಾಗುವುದು” ಎಂದು ನಂಬಿಸಿದ್ದಾನೆ. ಅದರಂತೆ ಆತ ಕಳುಹಿಸಿದ ಆನ್‌ಲೈನ್ ಲಿಂಕ್ (Phishing Link) ಮೂಲಕ ಸಂತ್ರಸ್ತರು ₹2 ಲಕ್ಷ ರೂಪಾಯಿ ಹಣವನ್ನು ಪಾವತಿಸಿದ್ದಾರೆ. ಹೆಸರು ಬದಲಾವಣೆಗೆ 45 ದಿನಗಳ ಕಾಲಾವಕಾಶ ಬೇಕಾಗುತ್ತದೆ ಎಂದು ನಂಬಿಸಿದ್ದ ಸೈಬರ್ ಕಳ್ಳರು, ಬಳಿಕ ಪದೇ ಪದೇ ಕರೆ ಮಾಡಿ ಇನ್ನು ಹೆಚ್ಚಿನ ಹಣವನ್ನು ತೊಡಗಿಸುವಂತೆ ಒತ್ತಾಯಿಸಿದ್ದಾರೆ.

ಪದೇ ಪದೇ ಹಣಕ್ಕಾಗಿ ಕರೆ ಬಂದಾಗ ಅನುಮಾನಗೊಂಡ ಸಂತ್ರಸ್ತರು ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP Portal) ನಲ್ಲಿ ನವೆಂಬರ್ 1, 2026 ರಂದು ಅಧಿಕೃತ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸೈಬರ್ ಅಪರಾಧ ಪೊಲೀಸರು BNS 2023 (ಭಾರತೀಯ ನ್ಯಾಯ ಸಂಹಿತೆ) ರ ಕಲಂ 318(4) (ವಂಚನೆ) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act 2000) ಯ ಕಲಂ 66(C) ಮತ್ತು 66(D) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಂಚಕರ ಮೊಬೈಲ್ ಸಂಖ್ಯೆಗಳು ಹಾಗೂ ಬ್ಯಾಂಕ್ ಖಾತೆಗಳ ಸಿಡಿಆರ್ (CDR) ಆಧರಿಸಿ ತನಿಖೆ ಚುರುಕುಗೊಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *