Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಾರ್ಖಂಡ್: ನೆರವಿಗೆ ಬಂದ ಜನರ ಗುಂಪಿನ ಮೇಲೆ ಹರಿದ 18 ಚಕ್ರಗಳ ಟ್ರಕ್ – 7 ಮಂದಿ ದಾರುಣ ಸಾ*ವು, ಮಗು ಗಂಭೀರ!

Spread the love

ಜಾರ್ಖಂಡ್ : ಅಪಘಾತಕ್ಕೀಡಾಗಿದ್ದ ಸ್ಕೂಟರ್ ಸವಾರನ ನೆರವಿಗೆ ಧಾವಿಸಿ ರಸ್ತೆಬದಿಯಲ್ಲಿ ಜಮಾಯಿಸಿದ್ದ ಜನರ ಗುಂಪಿನ ಮೇಲೆ ಟ್ರಕ್ ಹರಿದ ಪರಿಣಾಮ ಏಳು ಮಂದಿ ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟು, ಮಗುವೊಂದು ತೀವ್ರವಾಗಿ ಗಾಯಗೊಂಡಿರುವ ಭೀಕರ ಘಟನೆ ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಸಂಭವಿಸಿದೆ. ಜಿಲ್ಲೆಯ ಕರ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ರಾ-ತೊರ್ಪಾ ರಸ್ತೆಯ ಜೋನ್-ಲುಡ್ರು ಮೋರ್ಹ್ ಬಳಿ ಈ ದುರಂತ ಸಂಭವಿಸಿದೆ.ಪ್ರತ್ಯಕ್ಷದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಗುರುವಾರ ರಾತ್ರಿ ಸುಮಾರು 9:30 ರ ವೇಳೆಗೆ ಕರ್ರಾ ರೈಲು ನಿಲ್ದಾಣ-ತೊರ್ಪಾ ರಸ್ತೆಯ ವಸಾಹತು ಬಳಿ ಸ್ಕೂಟರ್‌ ಒಂದಕ್ಕೆ ಅಪಘಾತ ಸಂಭವಿಸಿತ್ತು. ಅಪಘಾತದ ಶಬ್ದ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯ ಕಾಲೋನಿ ನಿವಾಸಿಗಳು ಹಾಗೂ ದಾರಿಹೋಕರು ರಸ್ತೆಬದಿಯಲ್ಲಿ ಜಮಾಯಿಸಿದ್ದರು. ಈ ವೇಳೆ ತೊರ್ಪಾ ಕಡೆಯಿಂದ ಅತಿವೇಗವಾಗಿ ಬಂದ 18 ಚಕ್ರಗಳ ಭಾರಿ ಟ್ರಕ್ ಚಾಲಕನ ನಿಯಂತ್ರಣ ತಪ್ಪಿದೆ. ಚಾಲಕನ ನಿರ್ಲಕ್ಷ್ಯದಿಂದ ನುಗ್ಗಿದ ಟ್ರಕ್ ರಸ್ತೆಬದಿಯಲ್ಲಿ ನಿಂತಿದ್ದ ಜನರ ಗುಂಪಿನ ಮೇಲೆ ಸೀದಾ ಹರಿದು, ಬಳಿಕ ರಸ್ತೆಬದಿಯ ಕಲ್ವರ್ಟ್‌ಗೆ ಭೀಕರವಾಗಿ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದೆ.ಟ್ರಕ್ ಹರಿದ ತೀವ್ರತೆಗೆ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಗುವನ್ನು ತಕ್ಷಣವೇ ಕರ್ರಾ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕರೆದೊಯ್ಯಲಾಯಿತಾದರೂ, ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಖುಂಟಿ ಸದರ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ನಡೆದ ತಕ್ಷಣವೇ ಟ್ರಕ್ ಚಾಲಕ ಹಾಗೂ ಆತನ ಸಹಾಯಕ (ಕ್ಲೀನರ್) ವಾಹನವನ್ನು ತೊರೆದು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ವಿಷಯ ತಿಳಿದ ತಕ್ಷಣವೇ ಕರ್ರಾ ಪೊಲೀಸ್ ಠಾಣಾಧಿಕಾರಿ ರಾಜು ಕುಮಾರ್ ಹಾಗೂ ಸಿಬ್ಬಂದಿ ಆರೋಗ್ಯ ಕಾರ್ಯಕರ್ತರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಮೃತಪಟ್ಟ ಏಳೂ ಮಂದಿಯ ಗುರುತು ಪತ್ತೆ ಹಚ್ಚುವ ಕಾರ್ಯ ಪ್ರಸ್ತುತ ನಡೆಯುತ್ತಿದ್ದು, ತಲೆಮರೆಸಿಕೊಂಡಿರುವ ಟ್ರಕ್ ಚಾಲಕ ಮತ್ತು ಸಹಾಯಕನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *