ವಿಚ್ಛೇದನ ಅರ್ಜಿ ಹರಿದು, ನ್ಯಾಯಾಲಯದಲ್ಲೇ ಒಂದಾದ ದಂಪತಿ!

ನವದೆಹಲಿ: ಕೋಪ, ಅಹಂಕಾರ ಮತ್ತು ತಪ್ಪು ತಿಳಿವಳಿಕೆಗಳ ಮಧ್ಯೆ ಮುರಿದು ಬೀಳುವ ಹಂತ ತಲುಪಿರುವ ಸಂಬಂಧಗಳನ್ನು ಕೇವಲ ಒಂದು ಸಣ್ಣ ಗುಣ ಹೇಗೆ ಮರುಜೋಡಣೆ ಮಾಡಬಲ್ಲದು ಎಂಬುದಕ್ಕೆ ದೆಹಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ಅಪರೂಪದ, ಘಟನೆಯೇ ಸಾಕ್ಷಿ. ವಿಚ್ಛೇದನ(Divorce) ನೀಡಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ನ್ಯಾಯಾಧೀಶರ ಮುಂದೆಯೇ ಪರಸ್ಪರ ಅಪ್ಪಿಕೊಂಡು ಒಂದಾದ ಸುಂದರ ಘಟನೆ ಇಲ್ಲಿದೆ.
2020 ರ ಮದುವೆ ಮತ್ತು ಕೌಟುಂಬಿಕ ಬಿರುಗಾಳಿ ದೊಡ್ಡ ಕನಸುಗಳೊಂದಿಗೆ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ನಡುವೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಜಗಳ ತಾರಕಕ್ಕೇರಿ ಪ್ರಕರಣ ಕೋರ್ಟ್ ತಲುಪಿತು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ತೀವ್ರ ಕಾನೂನು ಹೋರಾಟ ನಡೆಯುತ್ತಿತ್ತು.
ಆದರೆ, ಮಗಳ ಸಂಸಾರ ಹಳಸುತ್ತಿರುವುದನ್ನು ಕಂಡು ಆಕೆಯ ವಯಸ್ಸಾದ ತಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮಗಳ ದುಃಖವನ್ನು ಸಹಿಸಲಾಗದೆ ಅವರು ಕೊನೆಗೊಂದು ದಿನ ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯ ಐಸಿಯು (ICU) ಸೇರಿದರು.
ದ್ವೇಷ ಮರೆತು ಮಾವನಿಗೆ ‘ಮಗ’ನಾದ ಅಳಿಯ ಮಾವನ ಅನಾರೋಗ್ಯ ಮತ್ತು ಇಡೀ ಕುಟುಂಬದ ಕಷ್ಟದ ಪರಿಸ್ಥಿತಿಯ ವಿಷಯ ತಿಳಿದ ತಕ್ಷಣ, ಆ ಅಳಿಯ ಕೋರ್ಟ್, ಕೇಸ್ ಮತ್ತು ಎಲ್ಲಾ ದ್ವೇಷಗಳನ್ನು ಸಂಪೂರ್ಣವಾಗಿ ಬದಿಗಿಟ್ಟರು. ಒಂದು ಕ್ಷಣವೂ ವ್ಯರ್ಥ ಮಾಡದೆ ಆಸ್ಪತ್ರೆಗೆ ಧಾವಿಸಿದ ಆತ, ಬಿಕ್ಕಟ್ಟಿನ ಸಮಯದಲ್ಲಿ ಅಳಿಯನಾಗಿ ಅಲ್ಲ, ಒಬ್ಬ ಜವಾಬ್ದಾರಿಯುತ ಮಗನಾಗಿ ನಿಂತರು.ನವದೆಹಲಿ, ಜೂನ್ 12: ಕೋಪ, ಅಹಂಕಾರ ಮತ್ತು ತಪ್ಪು ತಿಳಿವಳಿಕೆಗಳ ಮಧ್ಯೆ ಮುರಿದು ಬೀಳುವ ಹಂತ ತಲುಪಿರುವ ಸಂಬಂಧಗಳನ್ನು ಕೇವಲ ಒಂದು ಸಣ್ಣ ಗುಣ ಹೇಗೆ ಮರುಜೋಡಣೆ ಮಾಡಬಲ್ಲದು ಎಂಬುದಕ್ಕೆ ದೆಹಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ಅಪರೂಪದ, ಘಟನೆಯೇ ಸಾಕ್ಷಿ. ವಿಚ್ಛೇದನ(Divorce) ನೀಡಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ನ್ಯಾಯಾಧೀಶರ ಮುಂದೆಯೇ ಪರಸ್ಪರ ಅಪ್ಪಿಕೊಂಡು ಒಂದಾದ ಸುಂದರ ಘಟನೆ ಇಲ್ಲಿದೆ.
2020 ರ ಮದುವೆ ಮತ್ತು ಕೌಟುಂಬಿಕ ಬಿರುಗಾಳಿ ದೊಡ್ಡ ಕನಸುಗಳೊಂದಿಗೆ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ನಡುವೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಜಗಳ ತಾರಕಕ್ಕೇರಿ ಪ್ರಕರಣ ಕೋರ್ಟ್ ತಲುಪಿತು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ತೀವ್ರ ಕಾನೂನು ಹೋರಾಟ ನಡೆಯುತ್ತಿತ್ತು.
ಆದರೆ, ಮಗಳ ಸಂಸಾರ ಹಳಸುತ್ತಿರುವುದನ್ನು ಕಂಡು ಆಕೆಯ ವಯಸ್ಸಾದ ತಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮಗಳ ದುಃಖವನ್ನು ಸಹಿಸಲಾಗದೆ ಅವರು ಕೊನೆಗೊಂದು ದಿನ ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯ ಐಸಿಯು (ICU) ಸೇರಿದರು.
ದ್ವೇಷ ಮರೆತು ಮಾವನಿಗೆ ‘ಮಗ’ನಾದ ಅಳಿಯ ಮಾವನ ಅನಾರೋಗ್ಯ ಮತ್ತು ಇಡೀ ಕುಟುಂಬದ ಕಷ್ಟದ ಪರಿಸ್ಥಿತಿಯ ವಿಷಯ ತಿಳಿದ ತಕ್ಷಣ, ಆ ಅಳಿಯ ಕೋರ್ಟ್, ಕೇಸ್ ಮತ್ತು ಎಲ್ಲಾ ದ್ವೇಷಗಳನ್ನು ಸಂಪೂರ್ಣವಾಗಿ ಬದಿಗಿಟ್ಟರು. ಒಂದು ಕ್ಷಣವೂ ವ್ಯರ್ಥ ಮಾಡದೆ ಆಸ್ಪತ್ರೆಗೆ ಧಾವಿಸಿದ ಆತ, ಬಿಕ್ಕಟ್ಟಿನ ಸಮಯದಲ್ಲಿ ಅಳಿಯನಾಗಿ ಅಲ್ಲ, ಒಬ್ಬ ಜವಾಬ್ದಾರಿಯುತ ಮಗನಾಗಿ ನಿಂತರು.ಚಿಕಿತ್ಸೆಗೆ ಅಗತ್ಯವಿದ್ದ ಭಾರಿ ಮೊತ್ತದ ಹಣವನ್ನು ತಾನೇ ಸ್ವತಃ ವ್ಯವಸ್ಥೆ ಮಾಡಿದ್ದಲ್ಲದೆ, ಹಗಲಿರುಳು ಆಸ್ಪತ್ರೆಯಲ್ಲೇ ಇದ್ದು ವೈದ್ಯರೊಂದಿಗೆ ಮಾತನಾಡಿ ಮಾವನಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಕೋರ್ಟಿನಲ್ಲಿ ಎದುರಾಳಿಯಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ತಮ್ಮ ಪಾಲಿನ ದೇವದೂತನಂತೆ ಮಗನಾಗಿ ನಿಂತದ್ದನ್ನು ಕಂಡು ಹುಡುಗಿ ಮತ್ತು ಆಕೆಯ ಕುಟುಂಬದ ಕಣ್ಣುಗಳು ತೇವವಾದವು.ಆಸ್ಪತ್ರೆಯ ಐಸಿಯುನಲ್ಲಿ ಬರೆಯಲಾದ ಈ ಪ್ರೀತಿಯ ಅಧ್ಯಾಯ, ಮರುದಿನ ಕೋರ್ಟ್ ರೂಮಿನಲ್ಲಿ ಒಂದು ಅದ್ಭುತ ದೃಶ್ಯಕ್ಕೆ ಕಾರಣವಾಯಿತು. ಪ್ರಕರಣದ ಮುಂದಿನ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಫೈಲ್ ಬಂದಾಗ, ಇಡೀ ಕೋರ್ಟ್ ಬೆರಗಾಗುವಂತಹ ಘಟನೆ ನಡೆಯಿತು.
ವಕೀಲರು ತಮ್ಮ ವಾದ ಮಂಡಿಸಲು ಸಿದ್ಧರಾಗುತ್ತಿದ್ದಂತೆಯೇ, ಆ ಮಹಿಳೆ ಇದ್ದಕ್ಕಿದ್ದಂತೆ ಮುಂದೆ ಬಂದು, ತನ್ನ ಕೈಯಲ್ಲಿದ್ದ ವಿಚ್ಛೇದನ ಅರ್ಜಿ ಪತ್ರಗಳನ್ನು ಎಲ್ಲರ ಮುಂದೆಯೇ ಹರಿದು ಹಾಕಿದಳು. ಅಲ್ಲದೆ, ಓಡಿಹೋಗಿ ಕಣ್ಣೀರ ನಡುವೆಯೇ ತನ್ನ ಗಂಡನನ್ನು ಎಲ್ಲರ ಮುಂದೆ ಗಟ್ಟಿಯಾಗಿ ಅಪ್ಪಿಕೊಂಡಳು.