Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೊಲಂಬಿಯಾ ವಿಮಾನ ದುರಂತ: ಸಾವಿನ ಸಂಖ್ಯೆ 66ಕ್ಕೆ ಏರಿಕೆ; ಅಮೆಜಾನ್ ಅಡವಿಯಲ್ಲಿ ಸುಟ್ಟು ಭಸ್ಮವಾದ ಹರ್ಕ್ಯುಲಸ್

Spread the love

ಬೊಗೊಟಾ: 125 ಯೋಧರು ಹಾಗೂ ವಿಮಾನ ಸಿಬ್ಬಂದಿಗಳನ್ನು ಕೊಂಡೊಯ್ಯುತ್ತಿದ್ದ ಕೊಲಂಬಿಯಾ ಸೇನಾ ವಿಮಾನ ಟೇಕಾಫ್ ಆಗುತ್ತಿದ್ದಂತೆಯೇ ಪತನಗೊಂಡು, ಕನಿಷ್ಠ 66 ಮಂದಿ ಮೃತಪಟ್ಟು ಹತ್ತಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈಕ್ವೆಡಾರ್ ಮತ್ತು ಪೆರು ಬಳಿ ದಕ್ಷಿಣ ಗಡಿ ಹಂಚಿಕೊಂಡಿರುವ ಪುಯೆರ್ಟೊ ಲೆಗ್ನಿಝಾಮೊನಿಂದ ನಿರ್ಗಮಿಸುತ್ತಿದ್ದಂತೆಯೇ ಸಿ-130 ಹರ್ಕ್ಯುಲಸ್ ವಿಮಾನ ಪತನಗೊಂಡಿದ್ದು, ಅರಣ್ಯದ ತಳದಲ್ಲಿ ಉರಿಯುತ್ತಿರುವ ವಿಮಾನದ ಅವಶೇಷಗಳು ಕಂಡು ಬಂದಿವೆ.
ಈ ಘಟನೆಯಲ್ಲಿ ಆರು ಮಂದಿ ವಾಯು ಪಡೆ ಸಿಬ್ಬಂದಿಗಳು ಹಾಗೂ ಇಬ್ಬರು ಪೊಲೀಸ್ ಅಧಿಕಾರಿಗಳೊಂದಿಗೆ 58 ಯೋಧರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲವೊಂದು ತಿಳಿಸಿದೆ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪತನದ ಕಾರಣವನ್ನು ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಈ ಘಟನೆಯ ವಿಡಿಯೊ ದೃಶ್ಯಾವಳಿಯನ್ನು ಕೊಲಂಬಿಯಾ ಅಧ್ಯಕ್ಷ ಗುಸ್ತವೊ ಪೆಟ್ರೊ ಹಂಚಿಕೊಂಡಿದ್ದು, ವಿಮಾನವು ಪತನಗೊಳ್ಳುವುದಕ್ಕೂ ಮುನ್ನ ಮೇಲೇರಲು ಯತ್ನಿಸುತ್ತಿರುವುದು ಈ ವಿಡಿಯೊದಲ್ಲಿ ಸೆರೆಯಾಗಿದೆ.


Spread the love
Share:

administrator

Leave a Reply

Your email address will not be published. Required fields are marked *