Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ ಬಜೆಟ್ ಮಂಡನೆ ವೇಳೆ ಬಾಂಬ್ ಆತಂಕ: ವಿಧಾನಸಭೆ ಹಾಗೂ ಸ್ಪೀಕರ್ ಕಚೇರಿಗೆ ಬೆದರಿಕೆ ಇಮೇಲ್

Spread the love

ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಸಂಕೀರ್ಣ ಮತ್ತು ಸ್ಪೀಕರ್ ವಿಜೇಂದರ್ ಗುಪ್ತಾ ಅವರ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಬಗ್ಗೆ ವರದಿಯಾಗಿದೆ.
ದಿಲ್ಲಿ ವಿಧಾನಸಭೆ ಸಂಕೀರ್ಣಕ್ಕೆ ಬೆಳಿಗ್ಗೆ 7.28ರ ಸುಮಾರಿಗೆ ಮೊದಲ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಇದರ ಜೊತೆಗೆ ಸ್ಪೀಕ‌ರ್ ವಿಜೇಂದ‌ರ್ ಗುಪ್ತಾ ಅವರ ಅಧಿಕೃತ ಇಮೇಲ್ ಗೂ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದೆ. ಸಂದೇಶದಲ್ಲಿ ವಿಧಾನಸಭಾ ಮೆಟ್ರೋ ನಿಲ್ದಾಣದ ಹೆಸರನ್ನು ಕೂಡ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಇದರ ಬೆನ್ನಲ್ಲೆ ವಿಧಾನಸಭೆ ಆವರಣ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ದಿಲ್ಲಿಯಾದ್ಯಂತ ಪ್ರಮುಖ ಸ್ಥಳಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.
ಇಮೇಲ್‌ಗಳ ಮೂಲದ ಬಗ್ಗೆ ಭದ್ರತಾ ಸಂಸ್ಥೆಗಳು ತನಿಖೆಯನ್ನು ನಡೆಸುತ್ತಿದೆ.
ಮಂಗಳವಾರ ದಿಲ್ಲಿ ವಿಧಾನಸಭೆಯಲ್ಲಿ ಬಜೆಟ್ ಮಂಡನೆ ನಡೆಯಲಿದೆ. ಇದೇ ದಿನ ಬಾಂಬ್ ಬೆದರಿಕೆ ಸಂದೇಶ ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *