Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಕ್ಕುಗಳ ಜಗಳಕ್ಕೆ ಎರಡು ಕುಟುಂಬಗಳ ನಡುವೆ ಮಾರಾಮಾರಿ; 20 ಜನರ ವಿರುದ್ಧ ಕೇಸ್ ದಾಖಲು!

Spread the love

ತೀರ್ಥಹಳ್ಳಿ(ಶಿವಮೊಗ್ಗ : ಬೆಕ್ಕುಗಳ ನಡುವೆ ಜಗಳವಾಗಿದ್ದಕ್ಕೆ ಅಕ್ಕಪಕ್ಕದ ಮನೆಯವರ ಮಧ್ಯೆ ಮಾತಿನ ಚಕಮಕಿ ನಡೆದು ಒಬ್ಬರಿಗೊಬ್ಬರು ಹೊಡೆದಾಡಿಕೊಂಡು ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ಮಂಗಳವಾರ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿಯಲ್ಲಿ ನಡೆದಿದೆ. 

ನಾಗಪಾತ್ರಿ ರಾಜಶೇಖರ್‌(Nagapatri Rajashekhar) ಅವರಿಗೆ ಸೇರಿದ್ದ ವಿದೇಶಿ ಬೆಕ್ಕಿಗೆ ನಾಗರಾಜ ಅವರ ಮನೆಯ ಬೆಕ್ಕು ಕಚ್ಚಿದ ವಿಚಾರದಲ್ಲಿ ಎರಡು ಮನೆಯವರ ನಡುವೆ ಮಾತಿನ ಚಕಮಕಿ ನಡೆದು ಜಗಳವಾಗಿದೆ. ಘಟನೆಯಲ್ಲಿ ನಾಗಪಾತ್ರಿ ರಾಜಶೇಖರ್‌ ಮತ್ತು ನೆರೆಮನೆಯ ಮೇಘನಾ ಎಂಬ ಯುವತಿಗೆ ಪೆಟ್ಟು ಬಿದ್ದಿದ್ದು ಇಬ್ಬರನ್ನೂ ಪಟ್ಟಣದ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ 20 ಜನರ ವಿರುದ್ಧ ದೂರು ದಾಖಲಾಗಿದೆ.
ನಾಗಪಾತ್ರಿ ರಾಜಶೇಖರ ಅವರು 16 ಜನರ ವಿರುದ್ಧ ದೂರು ನೀಡಿದ್ದಾರೆ. ಇದರ ಪ್ರತಿಯಾಗಿ ನಾಗರಾಜ ಅವರೂ 4 ಮಂದಿ ವಿರುದ್ಧ ದೂರು ನೀಡಿದ್ದಾರೆ. ಘಟನೆ ಸಂಬಂಧ ನಾಗರಾಜ ಎಂಬುವವರನ್ನು ಪೊಲೀಸರು ಬಂಧಿಸಿದ್ದು ಉಳಿದವರು ತಪ್ಪಿಸಿಕೊಂಡಿದ್ದಾರೆ. ಘಟನೆ ಸಂಬಂಧ 2 ಮನೆಯವರ ವಿರುದ್ಧ ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *