Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಲಂಚ ಪ್ರಕರಣದಲ್ಲಿ ಸಿಕ್ಕಿಬಿದ್ದ CGST ಅಧಿಕಾರಿ: ಮನೆಯಲ್ಲಿ ₹1.86 ಕೋಟಿ ಮೌಲ್ಯದ ನಗದು, ಚಿನ್ನಾಭರಣ ಪತ್ತೆ!

Spread the love

ನವದೆಹಲಿ: ನವೆಂಬರ್ 19 ರಂದು ಲಂಚ ಪ್ರಕರಣದಲ್ಲಿ (Bribery Case) ಬಂಧಿಸಲಾಗಿದ್ದ ಹರಿಯಾಣದ ಪಂಚಕುಲದಲ್ಲಿರುವ ಕೇಂದ್ರ ಸರಕು ಮತ್ತು ಸೇವಾ ತೆರಿಗೆ (CGST) ಸೂಪರಿಂಟೆಂಡೆಂಟ್ ನಿವಾಸದಲ್ಲಿ ಭಾರೀ ಪ್ರಮಾಣದ ಸಂಪತ್ತು ಪತ್ತೆಯಾಗಿದೆ. ದಾಳಿಯಲ್ಲಿ ಸುಮಾರು 1.86 ಕೋಟಿ ರೂ. ಮೌಲ್ಯದ ನಗದು, ವಿದೇಶಿ ಕರೆನ್ಸಿ, ಚಿನ್ನ ಮತ್ತು ಬೆಳ್ಳಿಯನ್ನ ಕೇಂದ್ರೀಯ ತನಿಖಾ ದಳ (CBI) ವಶಪಡಿಸಿಕೊಂಡಿದೆ.

ಖಾಸಗಿ ಕಂಪನಿಯ ವಿರುದ್ಧದ ಜಿಎಸ್‌ಟಿ (GST) ಪ್ರಕ್ರಿಯೆಗಳಲ್ಲಿ ಸಹಾಯ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಬಿಐ (CBI), ಪ್ರಕರಣ ದಾಖಲಿಸಿತ್ತು. ಪಂಚಕುಲದಲ್ಲಿ ಬೀಸಿದ ಬಲೆಯಲ್ಲಿ ದೂರುದಾರರಿಂದ 10 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಆರೋಪಿಯನ್ನು ರೆಡ್ ಹ್ಯಾಂಡಾಗಿ ಬಂಧಿಸಲಾಗಿತ್ತು.

ಬಳಿಕ ನವೆಂಬರ್‌ 20 ರಂದು ಶೋಧ ಕಾರ್ಯಾಚರಣೆಯಲ್ಲಿ 24.2 ಲಕ್ಷ ರೂ. ಭಾರತೀಯ ಕರೆನ್ಸಿ, ಸುಮಾರು 15.6 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಹಾಗೂ 1.4 ಕೋಟಿ ರೂ. ಮೌಲ್ಯದ ಚಿನ್ನಾಭರಣ, ಚಿನ್ನದ ಗಟ್ಟಿ ಮತ್ತು ಬೆಳ್ಳಿಯನ್ನ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಒಟ್ಟು 1.86 ಕೋಟಿ ರೂ.ಗಳಷ್ಟಿದೆ ಎಂದು ಸಿಬಿಐ ಅಂದಾಜಿಸಿದೆ.

ಅಷ್ಟೇ ಅಲ್ಲದೇ, ಆರು ಬ್ಯಾಂಕ್ ಖಾತೆಗಳು, ಹೂಡಿಕೆ ಬಂಡವಾಳ, ಜೀವ ವಿಮಾ ಪಾಲಿಸಿ ಮತ್ತು ಬಹು ಸ್ಥಿರ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಜೊತೆಗೆ ಆರೋಪಿ ಮತ್ತು ಅವರ ಕುಟುಂಬ ಸದಸ್ಯರ ವಾಹನ, ಹಣಕಾಸು ವಹಿವಾಟುಗಳಿಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಆರೋಪಿ ಹಾಗೂ ಕುಟುಂಬದ ವಹಿವಾಟು ಮೂಲವನ್ನು ಖಚಿತಪಡಿಸಿಕೊಳ್ಳಲು, ಹಣಕಾಸು ಹಾಗೂ ಆಸ್ತಿಗೆ ಸಂಬಂದಿಸಿದ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.


Spread the love
Share:

administrator

Leave a Reply

Your email address will not be published. Required fields are marked *