ಸೆಲೆಬ್ರಿಟಿ ಕ್ರೇಜ್: ಇಷ್ಟದ ಆಟಗಾರನ ಸಹಿಗಾಗಿ ಹಠ ಹಿಡಿದು ಕಣ್ಣೀರಿಟ್ಟ ಪುಟಾಣಿ

ಭಾರತದಲ್ಲಿ ಸಿನಿಮಾ ನಟರು ಹಾಗೂ ಕ್ರಿಕೆಟ್ ಆಟಗಾರರೆಂದರೆ ಎಲ್ಲಿಲ್ಲದ ಹುಚ್ಚು ಪ್ರೀತಿ. ಇಷ್ಟದ ನಟ ಅಥವಾ ಆಟಗಾರರನ್ನು ಭೇಟಿಯಾಗಿ ಅವರ ಫೋಟೊ ತೆಗೆಸಿಕೊಳ್ಳುವುದು ಹಾಗೂ ಆಟೋಗ್ರಾಫ್ ಪಡೆದುಕೊಳ್ಳುವುದು ಒಂದು ರೀತಿಯ ಕ್ರೇಜಿ ಹವ್ಯಾಸ.
ಕೆಲವರು ಇದನ್ನು ಒಮ್ಮೆ ಮಾಡಿ ಒಂದೊಳ್ಳೆ ನೆನಪು ಎಂದು ಜೊತೆಯಲ್ಲಿಟ್ಟುಕೊಂಡರೆ ಇನ್ನೂ ಕೆಲವರು ಅನೇಕ ಬಾರಿ ಫೋಟೊ, ಆಟೋಗ್ರಾಫ್ ಪಡೆದುಕೊಳ್ಳುವ ಹುಚ್ಚು ಅಭಿಮಾನ ಹೊಂದಿರುತ್ತಾರೆ.

ಇದು ಕೆಲವೊಮ್ಮೆ ಸೆಲೆಬ್ರಿಟಿಗಳಿಗೂ ಸಹ ಅತಿರೇಕವೆನಿಸಿ ಕಡೆಗಣಿಸಲು ಆರಂಭಿಸಿಬಿಡುತ್ತಾರೆ. ಇದರಿಂದ ಅಭಿಮಾನಿಗಳು ಬೇಸರಕ್ಕೊಳಗಾಗಿ ಕಣ್ಣೀರು ಹಾಕಿರುವ ಅನೇಕ ಘಟನೆಗಳನ್ನು ನಾವೆಲ್ಲ ನೋಡಿದ್ದೇವೆ.
ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಪುಟ್ಟ ಬಾಲಕ ವಿರಾಟ್ ಕೊಹ್ಲಿಯ ಆಟೋಗ್ರಾಫ್ ಸಿಗದ ಕಾರಣ ನೆಲಕ್ಕೆ ಬ್ಯಾಟ್ ಎಸೆದು ಗೋಳಿಟ್ಟಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಆ ಬಾಲಕ ಹೊಟೇಲ್‌ವೊಂದರಲ್ಲಿ ಬ್ಯಾಟ್‌ಗೆ ಕೊಹ್ಲಿ ಸಹಿ ಪಡೆದುಕೊಳ್ಳಲು ಮುಂದಾಗಿ ಕೊಹ್ಲಿ, ಕೊಹ್ಲಿ ಎಂದು ಕೂಗಿದ್ದ. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದೇ ತನ್ನ ಪಾಡಿಗೆ ತಾನು ತೆರಳಿದ ಕೊಹ್ಲಿ ಕಡೆಗಣಿಸಿದ್ದಾರೆ.
ಇತ್ತ ಹತಾಶನಾದ ಬಾಲಕ ಬ್ಯಾಟ್ ಬಿಸಾಡಿ ಕಿರುಚಿ ಕಣ್ಣೀರಿಟ್ಟಿದ್ದಾನೆ