Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉದ್ಯಮಿ ಚರಣ್ ಕೊಲೆ ಕೇಸ್: ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಹಂತಕರು ಸೇರಿ ಐವರು ಅರೆಸ್ಟ್!

Spread the love

ಬೆಂಗಳೂರು: ಆಫೀಸ್ ಹೊರಭಾಗದಲ್ಲಿ ಹೆಂಡತಿ ಮುಂದೆಯೇ ರಿಯಲ್ ಎಸ್ಟೇಟ್ ಉದ್ಯಮಿಯನ್ನ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಈಡೀ ಏರಿಯಾದ ಜನ ಆ ಕೊಲೆ ಕಂಡು ಬೆಚ್ಚಿಬಿದ್ದಿದ್ರು. ಕೊಲೆ ಮಾಡಿ ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದ ಹಂತಕರು ಸೇರಿ ಐವರು ಬಂಧನಕ್ಕೆ ಒಳಗಾಗಿದ್ದಾರೆ.ಕಳೆದ 13 ರಂದು ಯಲಹಂಕ ನ್ಯೂಟೌನ್‌ನಲ್ಲಿ ನಡೆದಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ ಕೊಲೆ ಪ್ರಕರಣದಲ್ಲಿ ಪೊಲೀಸರು ಐವರನ್ನ ಬಂಧಿಸಿದ್ದಾರೆ. ಚರಣ್ ಮತ್ತು ಆತನ ಪತ್ನಿ ಆಫೀಸ್ ಬಳಿ ಬಂದಾಗ ಬೈಕ್‌ನಲ್ಲಿ ಬಂದ ಇಬ್ಬರು, ಪತ್ನಿ ಮುಂದೆಯೇ ಚರಣ್ ಮೇಲೆ ಅಟ್ಯಾಕ್ ಮಾಡಿ ಮನೋಸೋ ಇಚ್ಚೇ ಕೊಚ್ಚಿ ಎಸ್ಕೇಪ್ ಆಗಿದ್ದರು. ಈ ಭೀಕರ ಹತ್ಯೆಯ ಬೆನ್ನತ್ತಿದ ಯಲಹಂಕ ನ್ಯೂಟೌನ್ ಪೊಲೀಸರಿಗೆ ಸಿಕ್ಕಿದ್ದು, ಬರೋಬ್ಬರಿ 30 ಲಕ್ಷ ರೂಪಾಯಿಯ ಸುಪಾರಿ ಕಹಾನಿ.ಅಸಲಿಗೆ ಮೃತ ಚರಣ್ ಮತ್ತು ಸುಪಾರಿ ನೀಡಿದ ಆರೋಪಿ ಕಿರಣ್ ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು. ಆದರೆ, ವ್ಯವಹಾರದಲ್ಲಿ ಚರಣ್ ತನಗೆ ಮೋಸ ಮಾಡಿದ್ದಾನೆ ಅಂತ ಕಿರಣ್ ದ್ವೇಷ ಸಾಧಿಸುತ್ತಿದ್ದ. ಚರಣ್‌ನನ್ನು ಮುಗಿಸಲು ನಿರ್ಧರಿಸಿದ ಕಿರಣ್, ರುದ್ರೇಶ್ ಅಲಿಯಾಸ್ ರೂಪೇಶ್ ಎಂಬಾತನಿಗೆ 30 ಲಕ್ಷ ರೂಪಾಯಿಗೆ ಸುಪಾರಿ ನೀಡಿ, 15 ಲಕ್ಷ ಅಡ್ವಾನ್ಸ್ ಕೂಡ ಕೊಟ್ಟಿದ್ದ. ಆದರೆ, ಒಂದೂವರೆ ವರ್ಷ ಕಳೆದರೂ ರುದ್ರೇಶ್ ಕೊಲೆ ಮಾಡಿರಲಿಲ್ಲ. ಇತ್ತ ಗೌರಿಬಿದನೂರು ಸುತ್ತಮುತ್ತ ಚರಣ್ ಕೊಲೆಗೆ ಕಿರಣ್ ಸುಪಾರಿ ಕೊಟ್ಟಿದ್ದಾನೆ ಎಂಬ ಸುದ್ದಿ ಹಬ್ಬಿತ್ತು. ಇದರಿಂದ ಹೆದರಿದ ಕಿರಣ್, ನನ್ನ ಹೆಸರು ಹೊರಗೆ ಬರುತ್ತೆ, ಕೊಲೆ ಬೇಡ ಅಂತ ರುದ್ರೇಶ್‌ಗೆ ಹೇಳಿದ್ದನಂತೆ. ಆದರೆ, ಅಷ್ಟರಲ್ಲೇ 15 ಲಕ್ಷ ಅಡ್ವಾನ್ಸ್ ಪಡೆದಿದ್ದ ರುದ್ರೇಶ್‌ಗೆ ಹಣ ವಾಪಸ್ ಕೊಡಲು ಮನಸ್ಸಿರಲಿಲ್ಲ. ಕೊಲೆ ಮಾಡಿ ಮುಗಿಸಿದರೆ, ಇನ್ನುಳಿದ 15 ಲಕ್ಷವನ್ನೂ ಪಡೆಯಬಹುದು ಅಂತ ಲೆಕ್ಕಾಚಾರ ಹಾಕಿ ಮುಂದೆ ಘೋರ ಕೃತ್ಯ ಎಸಗಿದ್ದಾನೆ.ರುದ್ರೇಶ್ ತನ್ನ ಸ್ನೇಹಿತ, ಲೋಕೇಶ್ ಎಂಬಾತನಿಗೆ ಅಲ್ಪಸ್ವಲ್ಪ ಹಣ ಕೊಟ್ಟು ಚರಣ್‌ನನ್ನು ಮುಗಿಸಲು ಹೇಳಿದ್ದ. ಸುಪಾರಿ ಪಡೆದ ಲೋಕೇಶ್, ತನ್ನ ಮಗ ಕಿರಣ್‌ಗೆ ಚರಣ್‌ನನ್ನು ಕೊಲೆ ಮಾಡುವಂತೆ ಪ್ರೇರೇಪಿಸಿದ್ದ. ಈ ಕೆಲಸ ಮಾಡಿದರೆ ಒಳ್ಳೆ ಅಮೌಂಟ್ ಸಿಗುತ್ತೆ, ನಿನ್ನ ಲೈಫ್ ಸೆಟ್ಲ್ ಆಗುತ್ತೆ ಅಂತ ತಂದೆಯೇ ಮಗನ ತಲೆ ಕೆಡಿಸಿದ್ದ. ಅಪ್ಪನ ಮಾತು ಕೇಳಿದ ಮಗ ಕಿರಣ್, ತನ್ನ ಸ್ನೇಹಿತ ಆಕಾಶ್ ಜೊತೆ ಸೇರಿ ಚರಣ್ ಚಲನವಲನ ಗಮನಿಸಿದ್ದ. ಚರಣ್ ಆಫೀಸ್‌ಗೆ ಬರುತ್ತಿದ್ದಂತೆ ಲಾಂಗು-ಮಚ್ಚಿನಿಂದ ಅಟ್ಯಾಕ್ ಮಾಡಿ ಭೀಕರವಾಗಿ ಕೊಲೆ ಮಾಡಿ ಬಳಿಕ ಧರ್ಮಸ್ಥಳದಲ್ಲಿ ತಲೆಮರೆಸಿಕೊಂಡಿದ್ದರು. ​ಸದ್ಯ ಯಲಹಂಕ ನ್ಯೂಟೌನ್ ಪೊಲೀಸರು ಸುಪಾರಿ ನೀಡಿದ್ದ ಕಿರಣ್, ಮಧ್ಯವರ್ತಿ ರುದ್ರೇಶ್, ತಂದೆ ಲೋಕೇಶ್ ಹಾಗೂ ಕೃತ್ಯ ಎಸಗಿದ ಮಗ ಕಿರಣ್ ಮತ್ತು ಆಕಾಶ್ ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ


Spread the love
Share:

administrator

Leave a Reply

Your email address will not be published. Required fields are marked *