Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಟಾಕಿ ಹೊಗೆಯಿಂದ ಬೆಂಗಳೂರಿನಲ್ಲಿ ಉಸಿರಾಟದ ಸಮಸ್ಯೆ ಆತಂಕ: AQI 186ಕ್ಕೆ ಏರಿಕೆ!

Spread the love

ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮದ ಬೆನ್ನಲ್ಲೇ ರಾಜಧಾನಿ ಬೆಂಗಳೂರಿನಲ್ಲಿ (Bengaluru Airpallution) ವಾಯು ಮಾಲಿನ್ಯದ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ.
ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕರು ಭಾರಿ ಪ್ರಮಾಣದಲ್ಲಿ ಪಟಾಕಿ ಸಿಡಿಸಿರುವುದರಿಂದ ನಗರದ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿತ ಕಂಡಿದ್ದು, ಮಾಲಿನ್ಯದ ಪ್ರಮಾಣದಲ್ಲಿ ಸುಮಾರು ಶೇ. 30ರಷ್ಟು ಏರಿಕೆ ದಾಖಲಾಗಿದೆ.
ಸದ್ಯ ನಗರದ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 179 ಕ್ಕೆ ತಲುಪಿದ್ದು, ಸೋಮವಾರದಂದು ಇದು ಗರಿಷ್ಠ 186 ಕ್ಕೆ ಏರಿಕೆಯಾಗಿತ್ತು. ಪಟಾಕಿ ಹೊಗೆಯಿಂದಾಗಿ ನಗರದಾದ್ಯಂತ ದಟ್ಟವಾದ ಮಂಜಿನಂತಹ ವಾತಾವರಣ ನಿರ್ಮಾಣವಾಗಿದೆ.
ನಗರದ ವಿವಿಧ ವಲಯಗಳಲ್ಲಿ ದಾಖಲಾಗಿರುವ ವಾಯು ಗುಣಮಟ್ಟದ ವಿವರ ಈ ಕೆಳಗಿನಂತಿದೆ. ಕೋರಮಂಗಲದಲ್ಲಿ ಅತಿ ಹೆಚ್ಚು ಅಂದರೆ 186 AQI ದಾಖಲಾಗಿದ್ದರೆ, ಸರ್ಜಾಪುರದಲ್ಲಿ 181, ಲಾಲ್‌ಬಾಗ್ ವೆಸ್ಟ್ ಗೇಟ್‌ನಲ್ಲಿ 179 ಮತ್ತು ರಿಚರ್ಡ್ ಟೌನ್‌ನಲ್ಲಿ 170 ರಷ್ಟು ಮಾಲಿನ್ಯ ಕಂಡುಬಂದಿದೆ. ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 160 ಹಾಗೂ ವರ್ತೂರಿನಲ್ಲಿ 145 ರಷ್ಟು ಸೂಚ್ಯಂಕ ದಾಖಲಾಗಿದೆ. ಇನ್ನುಳಿದಂತೆ ಬಾಣಸವಾಡಿ (111), ಹೆಬ್ಬಾಳ (106), ಪೀಣ್ಯ (115), ಆರ್ ಆರ್ ನಗರ (117), ಮಲ್ಲಸಂದ್ರ (117), ಬಿಟಿಎಂ ಲೇಔಟ್ (114), ನಿಮ್ಹಾನ್ಸ್ ಆಸ್ಪತ್ರೆ ಡೈರಿ ಸರ್ಕಲ್ (114) ಮತ್ತು ಜಯನಗರ 5 ನೇ ಹಂತದಲ್ಲಿ (114) ಮಾಲಿನ್ಯದ ಪ್ರಮಾಣ ದಾಖಲಾಗಿದೆ. ಬೆಂಗಳೂರಿನ ಬಹುತೇಕ ಇತರೆ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ 110 ರಿಂದ 140 ರ ಆಸುಪಾಸಿನಲ್ಲಿದೆ.
ವಾಯು ಗುಣಮಟ್ಟ ಕುಸಿತ ಹಿನ್ನೆಲೆಯಲ್ಲಿ ಸಾರ್ವಜನಿಕರ ಆರೋಗ್ಯದ ಬಗ್ಗೆ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಮುಖವಾಗಿ ಚಿಕ್ಕ ಮಕ್ಕಳು, ವೃದ್ಧರು ಹಾಗೂ ಅಸ್ತಮಾ ಸೇರಿದಂತೆ ಇತರೆ ಉಸಿರಾಟದ ಸಮಸ್ಯೆ ಇರುವವರು ತೀವ್ರ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಅನಗತ್ಯವಾಗಿ ಮುಂಜಾನೆ ಮತ್ತು ತಡರಾತ್ರಿ ಹೊರಗೆ ಓಡಾಡುವುದನ್ನು ಕಡಿಮೆ ಮಾಡಬೇಕು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವಾಗ ಮಾಸ್ಕ್ ಧರಿಸುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *