Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

“ಬೆಂಗಳೂರು: ರಾಜ್‌ಕುಮಾರ್ ರಸ್ತೆ ಅಂಡರ್‌ಪಾಸ್‌ನಲ್ಲಿ ಸಿಲುಕಿದ ಗೂಡ್ಸ್ ಟ್ರಕ್ – ಎಲ್ಲಾ ಟಯರ್‌ಗಳು ಬ್ಲಾಸ್ಟ್, ವಾಹನ ಸವಾರರ ಪರದಾಟ!”

Spread the love

ಬೆಂಗಳೂರು: ಸಿಲಿಕಾನ್ ಸಿಟಿಯ ಅಂಡರ್ ಪಾಸ್‌ಗಳಲ್ಲಿ (Bengaluru Underpass) ಇತ್ತೀಚಿಗೆ ಬೃಹತ್ ಟ್ರಕ್‌ಗಳು ಸಿಲುಕೋದು ಮಾಮೂಲಿಯಾಗಿದೆ. ನಿನ್ನೆಯಷ್ಟೇ (ಸೆ.9) ಮಹಾರಾಣಿ ಕಾಲೇಜು ಬಳಿಯ ಅಂಡರ್ ಪಾಸ್‌ನಲ್ಲಿ ಟ್ರಕ್ ಸಿಲುಕಿತ್ತು. ಇಂದು (ಸೆ.10) ರಾಜ್‌ಕುಮಾರ್ ರಸ್ತೆ (Rajkumar Road) ಅಂಡರ್‌ಪಾಸ್‌ನಲ್ಲಿ ಬೃಹತ್ ಗೂಡ್ಸ್ ಟ್ರಕ್ (Goods Truck) ಸಿಲುಕಿ ಹೈಡ್ರಾಮಾ ಸೃಷ್ಟಿಯಾಗಿದೆ.

ಬೆಳಗಿನ ಜಾವ ಸುಮಾರು 3:30ರ ವೇಳೆಗೆ ಭಾರೀ ಲೋಡ್ ಹೊತ್ತ ಟ್ರಕ್ ಅಂಡರ್‌ಪಾಸ್‌ಗೆ ನುಗ್ಗಿದ್ದು, ಅಲ್ಲೇ ಸಿಲುಕಿಕೊಂಡಿದೆ. ಟ್ರಕ್ ಸಿಲುಕುತ್ತಿದ್ದಂತೆ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಅಂಡರ್‌ಪಾಸ್‌ನಲ್ಲಿ ಸಿಲುಕಿದ ಪರಿಣಾಮ ಭಾರೀ ಲೋಡ್‌ನ ಒತ್ತಡಕ್ಕೆ ಟ್ರಕ್‌ನ ಎಲ್ಲಾ ಟಯರ್‌ಗಳು ಬ್ಲಾಸ್ಟ್ ಆಗಿವೆ. ಇದರಿಂದ ಅಂಡರ್‌ಪಾಸ್‌ನಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದ್ದು, ಒರಿಯನ್ ಮಾಲ್ ಕೆಳಸೇತುವೆ ಭಾಗದಲ್ಲೂ ವಾಹನಗಳು ಸಾಲುಗಟ್ಟಿ ನಿಂತಿವೆ.

ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು (Traffic Police) ವಾಹನ ಸಂಚಾರವನ್ನು ಡೈವರ್ಟ್ ಮಾಡಿದ್ದಾರೆ. ಡಾ.ರಾಜ್‌ಕುಮಾರ್ 10ನೇ ಕ್ರಾಸ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿದ್ದು, ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಿದ್ದಾರೆ. ಸಾಧ್ಯವಾದಷ್ಟು ಪರ್ಯಾಯ ಮಾರ್ಗ ಬಳಸುವಂತೆ ಸಂಚಾರಿ ಪೊಲೀಸರು ಸಲಹೆ ನೀಡಿದ್ದಾರೆ. ಪದೇ ಪದೇ ಅಂಡರ್‌ಪಾಸ್‌ಗಳಲ್ಲಿ ಟ್ರಕ್‌ಗಳು ಸಿಲುಕೋದು ಸಂಚಾರಿ ಪೊಲೀಸರಿಗೆ ತಲೆನೋವಾಗಿದೆ.


Spread the love
Share:

administrator

Leave a Reply

Your email address will not be published. Required fields are marked *