Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಮ್, ಸಿಗ್ನಲ್‌ಗೆ ಕೇಂದ್ರದ ನೋಟಿಸ್: ಯೂಸರ್‌ನೇಮ್ ವ್ಯವಸ್ಥೆಯ ವಿವರಕ್ಕೆ ಆಗ್ರಹ!

Spread the love

ಹೊಸದಿಲ್ಲಿ: ವಾಟ್ಸಾಪ್ ನ ಪ್ರಸ್ತಾವಿತ ‘ಯೂಸರ್‌ನೇಮ್’ (ಬಳಕೆದಾರಹೆಸರು) ವೈಶಿಷ್ಟದ ಜಾರಿಗೆ ತಾತ್ಕಾಲಿಕ ವಿರಾಮ ನೀಡುವಂತೆ ಮೆಟಾ ಸಂಸ್ಥೆಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಒಂದು ದಿನದ ಬಳಿಕ, ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೂ ಅವುಗಳ ಈಗಿರುವ ಬಳಕೆದಾರಹೆಸರು ವ್ಯವಸ್ಥೆಗಳ ಕುರಿತು ನೋಟಿಸ್ ಜಾರಿಗೊಳಿಸಿದೆ.
ವಂಚನೆ, ಫಿಶಿಂಗ್, ಡಿಜಿಟಲ್ ಬಂಧನ ವಂಚನೆ ಹಾಗೂ ಗುರುತಿನ ಅನುಕರಣೆ (ಇಂಪರ್ಸನೇಷನ್ ಪ್ರಕರಣಗಳನ್ನು ತಡೆಯಲು ಈ ವೇದಿಕೆಗಳು ಯಾವ ಕ್ರಮಗಳನ್ನು ಕೈಗೊಂಡಿವೆ ಎಂಬ ಬಗ್ಗೆ ವಿವರ ನೀಡುವಂತೆ ಕೇಂದ್ರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳಿಗೆ ಉತ್ತರ ನೀಡಲು ಮೂರು ದಿನಗಳ ಕಾಲಾವಕಾಶ ನೀಡಲಾಗಿದೆ.

ಟೆಲಿಗ್ರಾಮ್‌ಗೆ ಕಳುಹಿಸಿರುವ ನೋಟಿಸ್‌ನಲ್ಲಿ ಬಳಕೆದಾರಹೆಸರು ವೈಶಿಷ್ಟ್ಯವನ್ನು ಮುಂದುವರಿಸಲು ಅವಕಾಶ ನೀಡಬೇಕಾದ ಕಾರಣಗಳನ್ನು ವಿವರಿಸುವಂತೆ ಸರ್ಕಾರ ಕೇಳಿದೆ ಎಂದು ತಿಳಿದುಬಂದಿದೆ.
ವಾಟ್ಸಾಪ್‌ನ ಪ್ರಸ್ತಾವಿತ ಬಳಕೆದಾರಹೆಸರು ವೈಶಿಷ್ಟದಿಂದ, ದುಷ್ಕರ್ಮಿಗಳು ಫೋನ್ ಸಂಖ್ಯೆಯನ್ನು ಬಹಿರಂಗಪಡಿಸದೇ ಬಳಕೆದಾರರನ್ನು ಸಂಪರ್ಕಿಸಲು ಸಾಧ್ಯವಾಗಬಹುದು. ಇದರಿಂದ ಸೈಬರ್ ಅಪರಾಧ, ವಂಚನೆ ಹಾಗೂ ಗುರುತಿನ ಅನುಕರಣೆ ಪ್ರಕರಣಗಳು ಹೆಚ್ಚಾಗುವ ಆತಂಕವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಸಮಾಲೋಚನೆಗಳು ಪೂರ್ಣಗೊಳ್ಳುವವರೆಗೆ ಹೊಸ ವೈಶಿಷ್ಟ್ಯದ ಬಿಡುಗಡೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಮೆಟಾಗೆ ಸೂಚಿಸಲಾಗಿದೆ.

ಟೆಲಿಗ್ರಾಮ್ ಮತ್ತು ಸಿಗ್ನಲ್ ಸಂಸ್ಥೆಗಳು ಬಳಕೆದಾರರ ಗುರುತನ್ನು ಹೇಗೆ ಪರಿಶೀಲಿಸುತ್ತವೆ, ಗುರುತಿನ ಅನುಕರಣೆ ಪ್ರಕರಣಗಳನ್ನು ಹೇಗೆ ನಿರ್ವಹಿಸುತ್ತವೆ ಹಾಗೂ ಬಳಕೆದಾರಹೆಸರುಗಳ ದುರುಪಯೋಗವನ್ನು ತಡೆಯಲು ಯಾವ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತವೆ ಎಂಬ ಕುರಿತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿವರಗಳನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಟೆಲಿಗ್ರಾಮ್ ಕೇಂದ್ರ ಸರ್ಕಾರದ ಪರಿಶೀಲನೆಗೆ ಒಳಪಟ್ಟಿದೆ. ಕಳೆದ ತಿಂಗಳು, ಸೋರಿಕೆಯಾದ ಮತ್ತು ನಕಲಿ ನೀಟ್ ಪ್ರಶ್ನೆಪತ್ರಿಕೆಗಳ ಪ್ರಸಾರಕ್ಕೆ ಸಂಬಂಧಿಸಿದ ಪ್ರಕರಣಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಟೆಲಿಗ್ರಾಮ್‌ ನ ಕೆಲವು ವೆಬ್ ಸೇವೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು. ಅಲ್ಲದೆ, ಅದರ ಮೆಸೇಜ್ ಎಡಿಟ್ ವೈಶಿಷ್ಟ್ಯದ ಬಳಕೆಯ ಮೇಲೂ ಜೂನ್ 30ರವರೆಗೆ ನಿರ್ಬಂಧ ಹೇರಲಾಗಿತ್ತು.


Spread the love
Share:

administrator

Leave a Reply

Your email address will not be published. Required fields are marked *