ಹಬ್ಬದ ಹೆಸರಿನಲ್ಲಿ ಮಧ್ಯರಾತ್ರಿ ಪಟಾಕಿ ಸಿಡಿಸುವುದಕ್ಕೆ ನಟಿ ರಮ್ಯಾ ಕಿಡಿ!

ಹಬ್ಬದ ಹೆಸರಿನಲ್ಲಿ ಮಧ್ಯರಾತ್ರಿ ವರೆಗೂ ಪಟಾಕಿ ಸಿಡಿಸುವುದಕ್ಕೆ ನಟಿ ರಮ್ಯಾ (Actress Ramya) ಕಿಡಿಕಾರಿದ್ದಾರೆ.

ರಾತ್ರಿ ಸುಮಾರು 3 ಗಂಟೆಯಾದ್ರೂ ಪಟಾಕಿ ಸಿಡಿಸಿದ್ದಾರೆ. ಪಟಾಕಿ ಸಿಡಿಸಿ, ಜೋರಾಗಿ ಸಾಂಗ್ಸ್ ಹಾಕಿ ಸಂಭ್ರಮಾಚರಣೆ ಮಾಡಿದ್ದಾರೆ ಎಂದು ಎಕ್ಸ್ ಖಾತೆಯಲ್ಲಿ ರಮ್ಯಾ ಅಸಮಾಧಾನ ಹೊರಹಾಕಿದ್ದಾರೆ.ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಪಟಾಕಿ ಸಿಡಿಸುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ವಿಶೇಷ ಅನುಮತಿ ಇದ್ದರೂ ಮಧ್ಯರಾತ್ರಿಯ ನಂತರ ಲೌಡ್ಸ್ಪೀಕರ್ ಬಳಸುವಂತಿಲ್ಲ. ವಿಶೇಷ ಸಂದರ್ಭಗಳಲ್ಲಿ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಎಲ್ಲಾ ಸಮಯದಲ್ಲೂ ಅಡ್ಜಸ್ಟ್ ಮಾಡಿಕೊಳ್ಳುವುದು ಖಂಡಿತವಾಗಿಯೂ ಅಲ್ಲ ಎಂದು ಬೇಸರಿಸಿದ್ದಾರೆ.ಇಲ್ಲಿ ಹತ್ತಿರದಲ್ಲೇ ಆಸ್ಪತ್ರೆಗಳಿವೆ, ಸುತ್ತಮುತ್ತ ಹಿರಿಯ ನಾಗರಿಕರು ಹಾಗೂ ಮಕ್ಕಳು ವಾಸಿಸುತ್ತಿದ್ದಾರೆ. ಹೀಗೆ, ಮಧ್ಯರಾತ್ರಿ ಪಟಾಕಿ ಸಿಡಿಸೋದು, ಜೋರಾಗಿ ಸಾಂಗ್ಸ್ ಹಾಕೋದು ಎಷ್ಟು ಸರಿ? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸರಿಗೆ ನಟಿ ರಮ್ಯಾ ಮನವಿ ಮಾಡಿದ್ದಾರೆ.