ಮೈಸೂರು ದಸರಾ ಪಂಜಿನ ಕವಾಯತು ರಿಹರ್ಸಲ್ ವೇಳೆ ಅವಘಡ: ಎರಡು ಬೈಕ್ಗಳ ಮುಖಾಮುಖಿ ಡಿಕ್ಕಿ, ಇಬ್ಬರಿಗೆ ಗಾಯ!

ಮೈಸೂರು: ನಾಡಹಬ್ಬ ದಸರಾದಲ್ಲಿ (Dasara) ಮತ್ತೊಂದು ಅವಘಡ ಸಂಭವಿಸಿದೆ. ಬನ್ನಿಮಂಟಪ ಮೈದಾನದಲ್ಲಿ ನಿನ್ನೆ (ಅ.19) ರಾತ್ರಿ ದಸರಾ ಅಂತಿಮ ಘಟ್ಟವಾದ ಪಂಜಿನ ಕವಾಯತು ರಿಹರ್ಸಲ್ ನಡೆಯುತ್ತಿದ್ದ ವೇಳೆ ಬೈಕ್ ಅಪಘಾತ (Bike Accident) ಸಂಭವಿಸಿದ್ದು, ಸಿಬ್ಬಂದಿ ಗಾಯಗೊಂಡಿದ್ದಾರೆ.
ಪಂಜಿನ ಕವಾಯತು ಮೈದಾನದಲ್ಲಿ ರಿಹರ್ಸಲ್ನಲ್ಲಿ ಕಸರತ್ತು ನಡೆಯುವ ವೇಳೆ ಪೊಲೀಸರ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಮೋಟಾರ್ ಸೈಕಲ್ನಲ್ಲಿ ಸಾಹಸ ಪ್ರದರ್ಶನದ ತಾಲೀಮು ನಡೆಸುತ್ತಿದ್ದ ವೇಳೆ ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿವೆ.ಪಂಜಿನ ಕವಾಯತು ಪ್ರಮುಖ ಭಾಗವಾದ ಟೊರ್ನಾಡೋಸ್ ಬೈಕ್ ಸ್ಟಂಟ್ ವೇಳೆ ಆರ್ಮಿ ಸರ್ವಿಸ್ ಕಾರ್ಪ್ಸ್ ತಂಡದ ಎರಡು ಬೈಕ್ಗಳು ವೇಗವಾಗಿ ಎಕ್ಸ್ ಆಕಾರದ ಕ್ರಾಸಿಂಗ್ ಸಾಹಸ ಮಾಡುವಾಗ ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಇಬ್ಬರು ಸಿಬ್ಬಂದಿ ಕೆಳಗೆ ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರತಿ ವರ್ಷ ಜಂಬೂ ಸವಾರಿ ಬಳಿಕ ಬನ್ನಿಮಂಟಪದಲ್ಲಿ ಕೊನೆಯ ಹಂತದ ಕಾರ್ಯಕ್ರಮ ನಡೆಯಲಿದ್ದು, ಕಳೆದ ಹಲವು ವರ್ಷಗಳಿಂದ ಪಂಜಿನ ಕವಾಯತಿನಲ್ಲಿ ಟೋರ್ನಾಡಸ್ ತಂಡವು ಸಾಹಸ ಪ್ರದರ್ಶನ ನೀಡುತ್ತಾ ಬಂದಿದೆ.
