Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಲ ಬಿಚ್ಚಿದ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಶಿಕ್ಷಕಿಯಿಂದ ಸಿಕ್ಕಿತು ನ್ಯಾಯದ ಉತ್ತರ

Spread the love

ಕೇರಳ :ಪೆಟ್ರೋಲ್‌ ಬಂಕ್‌ಗಳಲ್ಲಿ ನಿತ್ಯ ಕೋಟ್ಯಾಂತರ ಮಂದಿ ಇಂಧನಕ್ಕಾಗಿ ಭೇಟಿ ನೀಡುತ್ತಾರೆ. ಬಂಕ್‌ಗಳು ಕೂಡ ಸಾರ್ವಜನಿಕರಿಗಾಗಿ ಕೆಲವು ಸೇವೆಗಳನ್ನು ಒದಗಿಸಲು ಬದ್ಧವಾಗಿರುತ್ತವೆ. ಆದರೆ ಈ ಸೇವಗಳ ಬಗ್ಗೆ ಹಲವರಿಗೆ ಗೊತ್ತೇ ಇಲ್ಲ. ಭಾರತದ ಪೆಟ್ರೋಲ್ ಬಂಕ್‌ಗಳಲ್ಲಿ ಕೆಲವು ಉಚಿತ ಸೌಲಭ್ಯಗಳ ಲಾಭವನ್ನು ನೀವು ಕೂಡ ಪಡೆಯಬಹುದು. ಇವುಗಳಲ್ಲಿ ಒಂದು ಶೌಚಾಲಯದ ಬಳಕೆ. ಕೇವಲ ಇಂಧನಕ್ಕಾಗಿ ಬರುವವರು ಮಾತ್ರವಲ್ಲ, ಎಲ್ಲರೂ ಈ ಶೌಚಾಲಯವನ್ನು ಬಳಸಬಹುದು. ಒಂದು ವೇಳೆ ಇದಕ್ಕೆ ನಿರಾಕರಿಸುವ ಬಂಕ್ ಸಿಬ್ಬಂದಿ ವಿರುದ್ಧ ನೀವು ಪ್ರಶ್ನಿಸುವ ಹಕ್ಕನ್ನು ಹೊಂದಿದ್ದೀರ. ಪ್ರಸ್ತುತ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ಶೌಚಾಲಯವನ್ನು ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕರಿಗೆ ಇದನ್ನು ಮುಕ್ತವಾಗಿಸಲಾಗಿದ್ದರೂ, ಕೆಲವು ಪೆಟ್ರೋಲ್ ಬಂಕ್‌ಗಳು ಬೇಕಂತಲೇ ಶೌಚಾಲಯವನ್ನು ಮುಚ್ಚುವ ಅಭ್ಯಾಸವನ್ನು ಹೊಂದಿವೆ. ಇತ್ತೀಚೆಗೆ ಇಂಥಹದ್ದೇ ಘಟನೆ ಎದುರಾದಾಗ ಪ್ರಶ್ನಿಸಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಮಹಿಳೆ ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಬೆವರಿಳಿಸಿದ್ದಾರೆ. ಹೌದು, ಶೌಚಾಲಯಗಳನ್ನು ಮುಚ್ಚಿದ್ದ ಕೇರಳದ ಪೆಟ್ರೋಲ್ ಬಂಕ್‌ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಪಾಠ ಕಲಿಸಿ ಮಹಿಳೆಗೆ ನ್ಯಾಯ ದೊರಕಿಸಿದೆ. ಕೇರಳದ ಎಳಂಕುಲಂ ಮೂಲದ ಜಯಕುಮಾರಿ ಎಂಬ ಶಿಕ್ಷಕಿ ಮೇ 8, 2024 ರಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಕೋಝಿಕೋಡ್‌ನ ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಲು ಕಾರನ್ನು ನಿಲ್ಲಿಸಿದ್ದರು. ಆ ಸಮಯದಲ್ಲಿ, ಅವರು ಶೌಚಾಲಯ ಬಳಸಬೇಕಾಗಿತ್ತು.

ಆದರೆ ಅವರ ಶೌಚಾಲಯ ಬಳಕೆಗೆ ಅಡ್ಡಿಪಡಿಸಲಾಗಿತ್ತು, ಪೆಟ್ರೋಲ್ ಬಂಕ್‌ನಲ್ಲಿರುವ ಶೌಚಾಲಯವನ್ನು ಮುಚ್ಚಲಾಗಿತ್ತು. ಇದನ್ನು ಪ್ರಶ್ನಿಸಿ ಸಿಬ್ಬಂದಿಗೆ ಶೌಚಾಲಯವನ್ನು ತೆರೆಯಲು ಕೇಳಿಕೊಂಡಿದ್ದರು. ಆದರೂ ಪ್ರತಿಕ್ರಿಯಿಸದ ಸಿಬ್ಬಂದಿ ಜಯಕುಮಾರಿ ಅವರನ್ನು ನಿಂದಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರಿಂದ ದುಃಖಿತರಾದ ಶಿಕ್ಷಕಿ ಜಯಕುಮಾರಿ ಅವರು ಕೂಡಲೇ ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.

ಸ್ಥಳಕ್ಕೆ ಆಗಮಿಸಿ ವಿಷಯವನ್ನು ಪರಿಶೀಲಿಸಿದ ಪೊಲೀಸರು, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪೊಲೀಸರ ಖಡಕ್ ವಾರ್ನಿಂಗ್ ನಂತರವೇ ಸಿಬ್ಬಂದಿ ಶೌಚಾಲಯನ್ನು ತೆರೆದು ಸಹಕರಿಸಿದ್ದಾರೆ. ಎಲ್ಲಾ ತಿಳಿದ ಶಿಕ್ಷಕಿ ಜಯಕುಮಾರಿ ಅವರಿಗೆ ಇಂತಹ ಪರಿಸ್ಥಿತಿ ಇದ್ದರೇ, ಸಾಮಾನ್ಯ ಜನರ ಪರಿಸ್ಥಿತಿ ಏನು ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡ ಅವರು, ಪೆಟ್ರೋಲ್ ಬಂಕ್‌ಗಳಿಗೆ ಪಾಠ ಕಲಿಸಲು ಮುಂದಾಗಿಬಿಟ್ಟರು. ಈ ಘಟನೆಯ ಬಗ್ಗೆ ಜಯಕುಮಾರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಪಥನಂತಿಟ್ಟ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ನಡೆಸುತ್ತಿತ್ತು. ಸಂಪೂರ್ಣ ಘಟನೆಯ ಬಗ್ಗೆ ವಿಚಾರಿಸಿದ ನ್ಯಾಯಾಲಯ ಬಂಕ್ ಸಿಬ್ಬಂದಿಯ ವರ್ತನೆಗೆ ಆಗ್ರಹ ವ್ಯಕ್ತಪಡಿಸಿ, ಸರಿಯಾದ ದಂಡ ವಿಧಿಸಿ ಜಯಕುಮಾರಿ ಅವರಿಗೆ ನ್ಯಾಯ ದೊರಕಿಸಿಕೊಟ್ಟಿದೆ.

ಮಹಿಳಾ ಶಿಕ್ಷಕಿಗೆ ಶೌಚಾಲಯ ತೆರೆಯಲು ನಿರಾಕರಿಸಿದ್ದ ಪೆಟ್ರೋಲ್ ಪಂಪ್ ಮಾಲೀಕರಿಗೆ 1,65,000 ರೂ.ಗಳ ಪರಿಹಾರ ನೀಡುವಂತೆ ಪೆಟ್ರೋಲ್ ಪಂಪ್ ಮಾಲೀಕರಾದ ಫಾತಿಮಾ ಹನ್ನಾ ಅವರಿಗೆ ಆದೇಶಿಸಲಾಗಿದೆ. ಇದರಲ್ಲಿ 1.50 ಲಕ್ಷ ರೂ. ಪರಿಹಾರ ನೀಡಿ ಉಳಿದ 15,000 ರೂ.ಗಳನ್ನು ವ್ಯಾಜ್ಯ ವೆಚ್ಚಕ್ಕಾಗಿ ಪಾವತಿಸಬೇಕು ಎಂದು ಸೂಚಿಸಲಾಗಿದೆ. ಗ್ರಾಹಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಿರಾಕರಿಸುವ ಎಲ್ಲಾ ಪೆಟ್ರೋಲ್ ಬಂಕ್‌ಗಳಿಗೆ ಈ ತೀರ್ಪು ಒಂದು ಪಾಠವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Spread the love
Share:

administrator

Leave a Reply

Your email address will not be published. Required fields are marked *