ಪೆಟ್ರೋಲ್ನಲ್ಲಿ 20% ಮಿತಿಗಿಂತ ಹೆಚ್ಚು ಎಥೆನಾಲ್ ಮಿಶ್ರಣ ಆರೋಪ; ಐಒಸಿಎಲ್ಗೆ ಸರ್ಕಾರದ ಶೋಕಾಸ್ ನೋಟಿಸ್!

ಬೆಂಗಳೂರು: IOCL (Indian Oil Corporation Ltd) ದೇವನಗೊಂದಿ ಟರ್ಮಿನಲ್ನಲ್ಲಿ ಪೆಟ್ರೋಲ್ಗೆ ನಿಗದಿತ 20% ಗಿಂತ ಹೆಚ್ಚಿನ ಎಥೆನಾಲ್ ಬೆರೆಸುತ್ತಿರುವುದು ಬೆಳಕಿಗೆ ಬಂದ ಬೆನ್ನಲ್ಲೇ ರಾಜ್ಯ ಸರ್ಕಾರ ಶೋಕಾಸ್ ನೋಟಿಸ್ ಜಾರಿ ಮಾಡಿದೆ.ಕಾನೂನು ಮಾಪನಶಾಸ್ತ್ರ ಇಲಾಖೆಯು ಎಥೆನಾಲ್ ಬೆರೆಕೆ ನಡೆಯುವ ಒಎಂಸಿ ಟರ್ಮಿನಲ್ಗಳ ತಪಾಸಣೆ ನಡೆಸಿತ್ತು. ಈ ವೇಳೆ, ಬೆಂಗಳೂರಿನ ದೇವನಗೊಂದಿ ಐಒಸಿಎಲ್ ಟರ್ಮಿನಲ್ನಲ್ಲಿ ಪ್ರತಿ 3,000 ಲೀಟರ್ಗೆ 14 ಲೀಟರ್ ಎಥೆನಾಲ್ ಹೆಚ್ಚುವರಿಯಾಗಿ ಹೋಗುತ್ತಿರುವುದು ಹಾಗೂ 4 ರಿಂದ 6 ಲೀಟರ್ ಪೆಟ್ರೋಲ್ ಕಡಿಮೆ ಹೋಗುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಕಾನೂನು ಮಾಪನಶಾಸ್ತ್ರ ಕಾಯ್ದೆ 2009ರ ಅಡಿಯಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈ ಬಗ್ಗೆ ಸಚಿವ ರಿಜ್ವಾನ್ ಅರ್ಷದ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆಸರ್ಕಾರದ ಪರಿಶೀಲಿತ ಮಾಪಕದೊಂದಿಗೆ ಪರಿಶೀಲನೆಗೆ ಮಾಡಿದಾಗ ಅಕ್ರಮ ಸಾಬೀತಾಗಿದೆ ಎಂದು ಆರೋಪಿಸಲಾಗಿದೆ. 7 ದಿನದೊಳಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವಂತೆ ಮೈಸೂರು ಹಾಗೂ ಬೆಂಗಳೂರು ವಿಭಾಗದ ಕಾನೂನು ಮಾಪನ ಶಾಸ್ತ್ರ ಇಲಾಖೆ ನೋಟಿಸ್ ಜಾರಿ ಮಾಡಿದೆ
