Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಇನ್ಮುಂದೆ ವಿದ್ಯುತ್ ಬಿಲ್‌ನಲ್ಲಿ ಬದಲಾವಣೆ; ಹಗಲು-ರಾತ್ರಿ ಬಳಕೆಗೆ ಪ್ರತ್ಯೇಕ ದರ ನಿಗದಿ!

Spread the love

ನವದೆಹಲಿ: ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ವಿದ್ಯುತ್ ಶುಲ್ಕವನ್ನು ವಿಧಿಸುವ ನಿಟ್ಟಿನಲ್ಲಿ ಕೇಂದ್ರ ವಿದ್ಯುತ್ ಸಚಿವಾಲಯವು (Union Ministry of Power) ‘ಟೈಮ್ ಆಫ್ ದಿ ಡೇ’ (Time Of the day) ದರ ನಿಗದಿ ನಿಯಮಾವಳಿಯನ್ನು ಜಾರಿಗೆ ತರಲು ಮುಂದಾಗಿದೆ.ಗ್ರಾಹಕರು ದಿನದ ಯಾವ ಅವಧಿಯಲ್ಲಿ ವಿದ್ಯುತ್ ಬಳಸಿದ್ದಾರೆ ಎನ್ನುವ ಆಧಾರದ ಮೇಲೆ ವಿದ್ಯುತ್ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ. ಹೊಸ ನಿಯಮದ ಪ್ರಕಾರ ವಿದ್ಯುತ್ ಬೇಡಿಕೆಗನುಗುಣವಾಗಿ ದಿನದಲ್ಲಿ ಬೇರೆ ಬೇರೆ ಸ್ಲಾಟ್‌ಗಳನ್ನು ನಿಗದಿಪಡಿಸಿ, ಈ ಅವಧಿಯಲ್ಲಿ ಬೇರೆ ಬೇರೆ ಶುಲ್ಕಗಳನ್ನು ನಿಗದಿಪಡಿಸಲಾಗುತ್ತದೆ.ಇದರಿಂದ ರಾತ್ರಿ ವೇಳೆ ಬಳಸುವ ವಿದ್ಯುತ್‌ಗೂ ದಿನದ ಅವಧಿಯಲ್ಲಿ ಬಳಸುವ ವಿದ್ಯುತ್‌ಗೂ ವಿಧಿಸುವ ಶುಲ್ಕದಲ್ಲಿ ವ್ಯತ್ಯಾಸವಿರಲಿದೆ. ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ಹೆಚ್ಚು ಹಾಗೂ ಕಡಿಮೆ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್‌ಗೆ ಕಡಿಮೆ ಶುಲ್ಕ ವಿಧಿಸಲು ಈ ನಿಯಮ ಅವಕಾಶ ಮಾಡಿಕೊಡಲಿದೆ.ಈ ಕುರಿತ ಕರಡು ನಿಯಮಾವಳಿ ಈಗಾಗಲೇ ಸಿದ್ಧವಾಗಿದ್ದು, ಏ.1, 2027ರಿಂದ ಅನುಷ್ಠಾನಕ್ಕೆ ಬರಲಿದೆ. 2029ರ ಏಪ್ರಿಲ್‌ನಿಂದ ಬಹುತೇಕ ಎಲ್ಲಾ ಗ್ರಾಹಕರನ್ನು ಈ ನಿಯಮದಡಿ ತರುವ ಗುರಿ ಹೊಂದಲಾಗಿದೆಆರಂಭದಲ್ಲಿ 10 ಕಿ.ವ್ಯಾಟ್‌ಗಿಂತ ಹೆಚ್ಚು ಗರಿಷ್ಠ ಬೇಡಿಕೆಯ ಗ್ರಾಹಕರನ್ನು ಆ ದಿನದ ಶುಲ್ಕ ನಿಯಮದಡಿ ತರಲು ಉದ್ದೇಶಿಸಲಾಗಿದ್ದು, ಏ.1, 2028ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಇತರೆ ಗ್ರಾಹಕರು ಏ.1, 2029ರೊಳಗೆ ಈ ನಿಯಮದಡಿ ತರಲು ಉದ್ದೇಶಿಸಲಾಗಿದೆ. ಕೃಷಿಕ ಗ್ರಾಹಕರನ್ನು ಈ ನಿಯಮದಿಂದ ಹೊರಗಿಡಲಾಗಿದೆ. ದರ ನಿಗದಿ ಮತ್ತು ಸ್ಲಾಟ್‌ಗಳಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ರೂಪಿಸಲು ಹೊಣೆಗಾರಿಕೆ ರಾಜ್ಯದ ವಿದ್ಯುತ್ ಆಯೋಗಗಳಿಗೆ ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *