Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವೈರಲ್ ಆಡಿಯೋ ಬೆನ್ನಲ್ಲೇ ಕಮಿಷನರ್ ಕಾರು ಚಾಲಕನಿಗೆ ಅಮಾನತು ಶಿಕ್ಷೆ

Spread the love

ಮಂಗಳೂರು:ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇಲಿನ ಪೊಲೀಸರ ಕೃತ್ಯವೆಂದು ಅವಹೇಳನ ಮಾತು ; ತನ್ನ ಕಾರು ಚಾಲಕನನ್ನೇ ಅಮಾನತುಗೊಳಿಸಿದ ಕಮಿಷನ‌ರ್ !

ಮಹಿಳಾ ಪೊಲೀಸರು ಹಾಗೂ ಘಟ್ಟದ ಭಾಗದ ಪೊಲೀಸ್ ಸಿಬ್ಬಂದಿ ಕುರಿತು ಪೊಲೀಸ್ ಕಮಿಷನ‌ರ್ ಕಾರು ಚಾಲಕ ಅರುಣ್ ಆಳ್ವ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೊ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಕಾರು ಚಾಲಕನನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಪೊಲೀಸ್ ಕಮಿಷನ‌ರ್ ಸುಧೀರ್ ರೆಡ್ಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ವೈರಲ್ ಆಗಿರುವ ಆಡಿಯೋದಲ್ಲಿ ಚಾಲಕ ಅರುಣ್ ಮಾತನಾಡಿರುವುದು ದೃಢಪಟ್ಟಿದೆ. ಮೈದಾನದಲ್ಲಿ ವಾಯುವಿಹಾರ ನಡೆಸುತ್ತಿದ್ದ ಅಮಾಯಕರೊಬ್ಬರನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಕಾನ್‌ಸ್ಟೇಬಲ್‌ಗಳ ಕುರಿತು ಆತ ಫೋನ್‌ನಲ್ಲಿ ಚರ್ಚಿಸಿದ್ದು ಈ ಸಂದರ್ಭದಲ್ಲಿ ಅವಹೇಳನಕಾರಿ ಮಾತನಾಡಿದ್ದ. ಈ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಕಮಿಷನ‌ರ್ ಮಾಹಿತಿ ನೀಡಿದ್ದಾರೆ.

‘ವ್ಯಕ್ತಿಯೊಬ್ಬರಿಂದ ಈ ಹಿಂದೆ ಎರಡು ಬಾರಿ ಹಣ ಸುಲಿಗೆ ಮಾಡಿದ್ದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಆ ಮೂವರು ಕಾನ್‌ಸ್ಟೆಬಲ್‌ಗಳನ್ನು ಬಂಧಿಸಲಾಗಿತ್ತು. ಈ ವಿಷಯದ ಕುರಿತು ಫೋನ್ ಸಂಭಾಷಣೆ ನಡೆಸುವಾಗ ಚಾಲಕ ಅರುಣ್ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದು ಕಂಡುಬಂದಿದೆ. ಹೀಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಆತನನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.

ಇತ್ತೀಚಿಗೆ ನಗರದ ನೆಹರು ಮೈದಾನದಲ್ಲಿ ರಾತ್ರಿ ವೇಳೆ ವಾಕಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮೂವರು ಪೊಲೀಸರು ಹೊಯ್ಸಳ ಬೀಟ್ ನಡೆಸುತ್ತಿದ್ದ ಸಂದರ್ಭ ಹಲ್ಲೆ ನಡೆಸಿ ಹಣ ಪೀಕಿಸಿದ್ದಲ್ಲದೆ, ಆತನ ಎಟಿಎಂ ಕಾರ್ಡ್ಗಳನ್ನು ಪಡೆದು ಹಣ ಲೂಟಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆ ಮೂವರ ವಿರುದ್ಧ ಪ್ರಕರಣ ದಾಖಲಾಗಿ ಬಂಧನಕ್ಕೊಳಗಾಗಿದ್ದರು. ಅವರು ಘಟ್ಟದ ಮೇಲಿನರವರಾಗಿದ್ದು ಕರಾವಳಿಯ ಪೊಲೀಸರ ಮಾನ ಕಳೆದರು ಎನ್ನುವ ರೀತಿ ಮಾತುಗಳು ಕೇಳಿಬಂದಿದ್ದವು. ಇದೇ ವಿಚಾರದಲ್ಲಿ ಅರುಣ್ ಇತರ ಪೊಲೀಸ್ ಸಿಬಂದಿ ಜೊತೆಗೆ ಫೋನಿನಲ್ಲಿ ಮಾತನಾಡಿ ಸಿಕ್ಕಿಬೀಳುವಂತಾಗಿದೆ.


Spread the love
Share:

administrator

Leave a Reply

Your email address will not be published. Required fields are marked *