ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ: ಒಂದೇ ದಿನದಲ್ಲಿ ಚಿನ್ನಕ್ಕೆ ₹5,320, ಬೆಳ್ಳಿಗೆ ₹9,965 ಇಳಿಕೆ!

ಹೈದರಾಬಾದ್: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಶುಕ್ರವಾರ ಭಾರಿ ಇಳಿಕೆ ಕಂಡುಬಂದಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಅಪರಂಜಿ (24 ಕ್ಯಾರೆಟ್) ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹527 ಇಳಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ ₹9,965 ಕುಸಿತ ದಾಖಲಾಗಿದೆ. ದರ ಇಳಿಕೆಯಾಗಿರುವುದು ಹೊಸದಾಗಿ ಆಭರಣ ಖರೀದಿಸುವವರಿಗೆ ಮತ್ತು ಹೂಡಿಕೆದಾರರಿಗೆ ಉತ್ತಮ ಅವಕಾಶ ಕಲ್ಪಿಸಿದ್ದರೆ, ಈಗಾಗಲೇ ಹೆಚ್ಚಿನ ಬೆಲೆಗೆ ಹೂಡಿಕೆ ಮಾಡಿರುವವರಲ್ಲಿ ಕೊಂಚ ಆತಂಕ ಮೂಡಿಸಿದೆ.24 ಕ್ಯಾರೆಟ್ ಚಿನ್ನ: ಶುದ್ಧ 24 ಕ್ಯಾರೆಟ್ (99.9 ಪ್ಯೂರಿಟಿ) 1 ಗ್ರಾಂ ಚಿನ್ನದ ಬೆಲೆಯಲ್ಲಿ ₹527 ಇಳಿಕೆಯಾಗಿದ್ದು, ಇಂದಿನ ದರ ₹12,797ಕ್ಕೆ ತಲುಪಿದೆ. ‘ಕ್ಯಾಪ್ಸ್ ಗೋಲ್ಡ್’ (Caps Gold) ಮಾಹಿತಿಯ ಪ್ರಕಾರ, ಹೈದರಾಬಾದ್ನಲ್ಲಿ ಗುರುವಾರ ₹1,33,480 ಇದ್ದ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಶುಕ್ರವಾರ ₹5,320 ಇಳಿಕೆಯಾಗಿ ₹1,28,160ಕ್ಕೆ ತಲುಪಿದೆ. 22 ಕ್ಯಾರೆಟ್ ಚಿನ್ನ: ಆಭರಣ ತಯಾರಿಕೆಗೆ ಸಾಮಾನ್ಯವಾಗಿ ಬಳಸುವ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ₹1,19,800ರ ಆಸುಪಾಸಿನಲ್ಲಿದೆ.ಬೆಂಗಳೂರು, ಮುಂಬೈ, ವಿಶಾಖಪಟ್ಟಣಂ ಹಾಗೂ ವಿಜಯವಾಡ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿಯೂ ಇದೇ ಮಾದರಿಯ ದರ ಕುಸಿತ ಕಂಡುಬಂದಿದೆ. ಬಂಗಾರದ ಬೆನ್ನಲ್ಲೇ ಬೆಳ್ಳಿ ಬೆಲೆಯಲ್ಲೂ ಗಮನಾರ್ಹ ಕುಸಿತವಾಗಿದೆ. ಹೈದರಾಬಾದ್ನಲ್ಲಿ ಗುರುವಾರ ಪ್ರತಿ ಕೆಜಿಗೆ ₹1,64,865 ಇದ್ದ ಬೆಳ್ಳಿ ದರವು ಶುಕ್ರವಾರ ₹9,965 ಕಡಿಮೆಯಾಗಿ ₹1,54,900ಕ್ಕೆ ಬಂದು ನಿಂತಿದೆ.ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರಸ್ತುತ ಒಂದು ಔನ್ಸ್ ಚಿನ್ನದ ಬೆಲೆ $3,552 ಹಾಗೂ ಒಂದು ಔನ್ಸ್ ಬೆಳ್ಳಿಯ ಬೆಲೆ $41.93ರಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು, ಕಚ್ಚಾ ತೈಲ ಬೆಲೆ, ರೂಪಾಯಿ ವಿನಿಮಯ ದರ, ಪೂರೈಕೆ ಸರಪಳಿಯಲ್ಲಿನ ಬದಲಾವಣೆ, ಕೈಗಾರಿಕಾ ಬೇಡಿಕೆ ಹಾಗೂ ಹೂಡಿಕೆದಾರರ ನಡೆಯಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಈ ಏರಿಳಿತ ಉಂಟಾಗುತ್ತಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
