ಕೇಜ್ರಿವಾಲ್ ಮತ್ತು ಪುತ್ರಿಯನ್ನು ಕೊಲ್ಲುವುದಾಗಿ ಬೆದರಿಕೆ: ₹7 ಕೋಟಿ ಬೇಡಿಕೆ ಇಟ್ಟಿದ್ದಾಗಿ ಆರೋಪ!

ನವದೆಹಲಿ: ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಆಮ್ ಆದ್ಮ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜಿವಾಲ್ ಅವರಿಗೆ ಲಾರೆನ್ಸ್ ಬಿಷ್ಟೋಮ್ ಗ್ಯಾಂಗ್ ಹೆಸರಿನಲ್ಲಿ ಕೊಲೆ ಬೆದರಿಕೆ ಕರೆ ಬಂದಿದ್ದು, ಆರೋಪಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಿಲಕ್ ನಗರ ಶಾಸಕ ಜರ್ನೈಲ್ ಸಿಂಗ್ ಅವರು ದೆಹಲಿ ಪೊಲೀಸರಿಗೆ ಈ ಬೆದರಿಕೆಯ ಬಗ್ಗೆ ವರದಿ ಮಾಡಿದ್ದು, ವಿದೇಶಗಳಲ್ಲಿ ಸಂಪರ್ಕ ಹೊಂದಿರುವ ಗ್ಯಾಂಗ್ನ ಸದಸ್ಯ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ಫೋನ್ ಕರೆ ಮತ್ತು ವಾಟ್ಸಾಪ್ ಸಂದೇಶ ಬಂದಿದೆ ಎಂದು ಅವರು ತಿಳಿಸಿದ್ದಾರೆ.
ನವೆಂಬರ್ 6 ರಂದು ಪಂಜಾಬ್ನ ಮೊಹಾಲಿಯಲ್ಲಿ ಪೊಲೀಸರಿಗೆ ಸಲ್ಲಿಸಿದ ದೂರಿನಲ್ಲಿ ಸಿಂಗ್, ಕರೆ ಮಾಡಿದ ವ್ಯಕ್ತಿ 7 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಮತ್ತು ಹಣ ನೀಡದಿದ್ದರೆ ಕೇಜಿವಾಲ್ ಮತ್ತು ಅವರ ಪುತ್ರಿ ಹರ್ಷಿತಾ ಕೇಜಿವಾಲ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದು ಹೇಳಿದ್ದಾರೆ.
ಮೊಹಾಲಿಯ ಪೊಲೀಸರು ಬಿಎನ್ಎಸ್ ಮತ್ತು ಐಟಿ ಕಾಯ್ದೆ ಎರಡರ ಅಡಿಯಲ್ಲಿಯೂ ಪ್ರಕರಣ ದಾಖಲಿಸಿದ್ದಾರೆ ಮತ್ತು ಪ್ರಕರಣವನ್ನು ಸೈಬರ್ ಅಪರಾಧ ಘಟಕದ ಸುನಿಲ್ ಕುಮಾರ್ ಎಂಬ ಅಧಿಕಾರಿಗೆ ವಹಿಸಿದ್ದಾರೆ.ಬೆದರಿಕೆ ಹಾಕಲು ಬಳಸಲಾದ ಮೊಬೈಲ್ ಸಂಖ್ಯೆಗೆ ಲಿಂಕ್ ಮಾಡಲಾದ ಕರೆ ದಾಖಲೆಗಳು, ಇಂಟರ್ನೆಟ್ ಪ್ರೋಟೋಕಾಲ್ ಲಾಗ್ಗಳು ಮತ್ತು ಸ್ಥಳ ಡೇಟಾವನ್ನು ಪರಿಶೀಲಿಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಕೇಜ್ರವಾಲ್ ಮತ್ತು ಅವರ ಕುಟುಂಬಕ್ಕೆ ಸಾಕಷ್ಟು ಭದ್ರತೆಯನ್ನು ಸಿಂಗ್ ಕೋರಿದ್ದಾರೆ.
