Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಧರ್ಮದ ಗಡಿ ಮೀರಿದ ಮಾನವೀಯತೆ: ಹಿಂದೂ ವೃದ್ಧೆಯ ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಸಹೋದರರು!

Spread the love

ವಯನಾಡು: ರಕ್ತಸಂಬಂಧಗಳ ಆಳ ಹಾಗೂ ಧರ್ಮದ ಚೌಕಟ್ಟುಗಳನ್ನು ಮೀರಿ ಬೆಳೆದ ಬಾಂಧವ್ಯವೊಂದು, ಜಾತಿ-ಧರ್ಮಗಳ ಹೆಸರಿನಲ್ಲಿ ಒಡೆಯುತ್ತಿರುವ ಸಮಾಜಕ್ಕೆ ಕಣ್ಣು ತೆರೆಸುವಂತಹ ಮಾನವೀಯ ಸಂದೇಶವೊಂದನ್ನು ಸಾರಿದೆ. ಸಂಬಂಧಿಕರಿದ್ದೂ ಒಂಟಿಯಾಗಿ ಬದುಕುತ್ತಿದ್ದ 85 ವರ್ಷದ ವೃದ್ಧೆಯೊಬ್ಬರನ್ನು ಆಕೆಯ ಅಂತಿಮ ಕ್ಷಣದವರೆಗೂ ಸ್ವಂತ ಮಕ್ಕಳಂತೆ ಆರೈಕೆ ಮಾಡಿದ್ದಲ್ಲದೆ, ಆಕೆಯ ನಿಧನದ ಬಳಿಕ ಮುಸ್ಲಿಂ ಸಹೋದರರಿಬ್ಬರು ಹಿಂದೂ ಧಾರ್ಮಿಕ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿ ಸೌಹಾರ್ದತೆಗೆ ಹೊಸ ಭಾಷ್ಯ ಬರೆದಿದ್ದಾರೆ.ವಯನಾಡಿನ ಚಿತ್ರಗಿರಿಯ ಕ್ಲುಬುಮುತ್ತಂ ನಿವಾಸಿ ಕಲ್ಯಾಣಿಯಮ್ಮ (85) ಇಹಲೋಕ ತ್ಯಜಿಸಿದ ವೃದ್ಧೆ. ಆಕೆಯ ನೆರೆಹೊರೆಯವರಾದ ಕಪ್ಪನ್ ರಜಾಕ್ ಹಾಗೂ ಅವರ ಸಹೋದರ ಸುಲೈಮಾನ್ ಅಂತಿಮ ವಿಧಿಗಳನ್ನು ನೆರವೇರಿಸಿ, ತಾಯಿಯಂತಿದ್ದ ವೃದ್ಧೆಯ ಚಿತೆಗೆ ಬೆಂಕಿ ಸ್ಪರ್ಶ ಮಾಡಿದ ಕರುಣಾಮಯಿಗಳು. ಕಲ್ಯಾಣಿಯಮ್ಮ ಕಳೆದ ಐವತ್ತು ವರ್ಷಗಳಿಂದ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಆದರೆ ನೆರೆಹೊರೆಯ ಕಪ್ಪನ್ ರಜಾಕ್, ಸುಲೈಮಾನ್ ಮತ್ತು ಅವರ ಕುಟುಂಬದವರು ಕಲ್ಯಾಣಿಯಮ್ಮ ಅವರನ್ನು ಎಂದಿಗೂ ಅಪರಿಚಿತರಂತೆ ನೋಡಲಿಲ್ಲ. ಆಕೆಯನ್ನು ಅನಾಥ ಪ್ರಜ್ಞೆ ಕಾಡದಂತೆ ತಾಯಿಯಂತೆ ನೋಡಿದ್ದರು. ವೃದ್ಧಾಪ್ಯ ಹಾಗೂ ಅನಾರೋಗ್ಯದಿಂದ ಕಲ್ಯಾಣಿಯಮ್ಮ ಹಾಸಿಗೆ ಹಿಡಿದಾಗಲೂ, ರಜಾಕ್ ಕುಟುಂಬವೇ ಆಸ್ಪತ್ರೆಗೆ ಕರೆದೊಯ್ದು, ಸಮಯಕ್ಕೆ ಸರಿಯಾಗಿ ಔಷಧಿ ಮತ್ತು ಆಹಾರವನ್ನು ನೀಡಿ ಉಪಚರಿಸಿತ್ತು. ಅಸಹಾಯಕಳಾಗಿದ್ದ ವೃದ್ಧೆಗೆ ರಜಾಕ್ ಅವರ ಪತ್ನಿ ಸ್ವಂತ ಮಗಳಂತೆ ಸೇವೆಯನ್ನು ಸಲ್ಲಿಸಿದ್ದರು.

ಕಲ್ಯಾಣಿಯಮ್ಮ ಕೊನೆಯುಸಿರೆಳೆದಾಗಲೂ ಈ ಕುಟುಂಬವೇ ಮರಣಶಯ್ಯೆಯ ಬಳಿಯಿತ್ತು. ಅಂತಿಮ ವಿಧಿವಿಧಾನಗಳನ್ನು ಮಾಡಲು ರಕ್ತಸಂಬಂಧಿಗಳು ಯಾರೂ ಮುಂಚೂಣಿಗೆ ಬಾರದಿದ್ದಾಗ, ಈ ಮುಸ್ಲಿಂ ಸಹೋದರರೇ ಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಅಂಡೂರಿನ ಕುಟ್ಟಿಂಜಿಲಕಂನಲ್ಲಿರುವ ಹಿಂದೂ ಸ್ಮಶಾನದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ, ಐವರ್ ಮಠದ ಅರ್ಚಕರ ಸೂಚನೆಗಳು ಹಾಗೂ ಮಾರ್ಗದರ್ಶನವನ್ನು ಅಕ್ಷರಶಃ ಪಾಲಿಸಿದ ರಜಾಕ್ ಮತ್ತು ಸುಲೈಮಾನ್, ಹಿಂದೂ ಧಾರ್ಮಿಕ ವಿಧಿವಿಧಾನಗಳನ್ನು ಪೂರ್ಣಗೊಳಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಮಾನವೀಯತೆಗೆ ಯಾವುದೇ ಧರ್ಮದ ಎಲ್ಲೆಗಳಿಲ್ಲ, ಮನುಷ್ಯ ಮಣ್ಣಿಗೆ ಸೇರುವಾಗ ಜಾತಿ-ಧರ್ಮಗಳಿಗೆ ಸ್ಥಾನವಿಲ್ಲ ಎಂಬುದನ್ನು ಮಾತುಗಳಲ್ಲಲ್ಲ, ತಮ್ಮ ಕಾರ್ಯದ ಮೂಲಕ ಈ ಸಹೋದರರು ಸಮಾಜಕ್ಕೆ ಸಾರಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *