Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಟಾಕಿ ಸಿಡಿಸುತ್ತಿದ್ದ ಕುಸ್ತಿಪಟುವಿನ ಮೇಲೆ ಗುಂಡಿನ ಮಳೆ: ಪಂಜಾಬ್‌ನಲ್ಲಿ ಭೀಕರ ಹ*ತ್ಯೆ!

Spread the love

ಚಂಡೀಗಢ: ದೀಪಾವಳಿ (Diwali) ಹಬ್ಬ ಹಿನ್ನೆಲೆ ಮನೆಯ ಹೊರಗೆ ಪಟಾಕಿ ಸಿಡಿಸುತ್ತಿದ್ದ 27 ವರ್ಷದ ಕುಸ್ತಿಪಟುವನ್ನು (Wrestler) ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಪಂಜಾಬ್‌ನ (Punjab) ಕಪುರ್ತಲಾದಲ್ಲಿ (Kapurthala) ನಡೆದಿದೆ.

ಮೃತನನ್ನು ಕಪುರ್ತಲಾದ ಮೊಹಲ್ಲಾ ಮೆಹ್ತಾಬ್‌ಗಢ ನಿವಾಸಿ ಮಣಿ ಅಲಿಯಾಸ್ ಪೈಲ್ವಾನ್ ಎಂದು ಗುರುತಿಸಲಾಗಿದೆ. ಭಾನುವಾರ ಸಂಜೆ ಮನೆಯ ಹೊರಗೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಪಟಾಕಿ ಸಿಡಿಸುತ್ತಿದ್ದ ವೇಳೆ ದುಷ್ಕರ್ಮಿಗಳು ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿದ್ದ ಮಣಿಯನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಣಿಯ ತಂದೆ ಬಗ್ಗಾ ಅವರ ಪ್ರಕಾರ, ಇತ್ತೀಚೆಗಷ್ಟೇ ಮಣಿಗೆ ಮದುವೆಯಾಗಿತ್ತು. ಆತನಿಗೆ ಯಾರೊಂದಿಗೂ ಯಾವುದೇ ವೈಷಮ್ಯ ಅಥವಾ ಜಗಳ ಇರಲಿಲ್ಲ ಎಂದು ತಿಳಿಸಿದ್ದಾರೆ. ಘಟನೆ ಕುರಿತು ಸಂಜೆ ಸುಮಾರು 7:30ರ ವೇಳೆಗೆ ಪೊಲೀಸರಿಗೆ ಗುಂಡಿನ ದಾಳಿಯ ಮಾಹಿತಿ ಲಭಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗುಂಡೇಟಿನಿಂದ ಮಣಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಹಲವು ತಂಡಗಳನ್ನು ರಚಿಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ತನಿಖೆ ಮುಂದುವರಿದಿದೆ.


Spread the love
Share:

administrator

Leave a Reply

Your email address will not be published. Required fields are marked *