Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿಯಲ್ಲಿ ಉಸಿರಾಡುವುದೇ ಕಷ್ಟ: 395ಕ್ಕೆ ತಲುಪಿದ AQI, ಜನರ ಆರೋಗ್ಯಕ್ಕೆ ಆತಂಕ

Spread the love

ನವದೆಹಲಿ: ದೀಪಾವಳಿ ಹಿನ್ನೆಲೆ ಸೋಮವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ವಾಯುಮಾಲಿನ್ಯ ಪ್ರಮಾಣ ಏರಿಕೆಯಾಗಿತ್ತು. ಆದರೆ ಮಂಗಳವಾರ ಗಾಳಿಯ ವೇಗ ಹೆಚ್ಚಾದ ಹಿನ್ನೆಲೆಯಲ್ಲಿ ಮಾಲಿನ್ಯದ (Pollution) ಪ್ರಮಾಣದಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುವುದು ಸಾಮಾನ್ಯವಾಗಿದೆ. ನೆರೆಯ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದು ಸೇರಿದಂತೆ ಹಲವು ಕಾರಣಗಳಿಂದ ಮಾಲಿನ್ಯ ಹೆಚ್ಚಾಗುತ್ತಿದೆ. ಮಾಲಿನ್ಯ ನಿಯಂತ್ರಣಕ್ಕಾಗಿ ಸರ್ಕಾರ ಆ್ಯಂಟಿ ಸ್ಮಾಗ್ ಗನ್‌ಗಳ ಮೂಲಕ ನೀರು ಸಿಂಪಡಿಸುವ ಕ್ರಮವನ್ನೂ ಕೈಗೊಂಡಿದೆ.ದೆಹಲಿಯಲ್ಲಿ ಇಂದಿನ ಎಕ್ಯೂಐ ಎಷ್ಟಿದೆ?
ದೆಹಲಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ 300ರ ಗಡಿ ದಾಟಿ `ಅತ್ಯಂತ ಕಳಪೆ’ ವಿಭಾಗಕ್ಕೆ ತಲುಪಿದ ಹಿನ್ನೆಲೆಯಲ್ಲಿ ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆ್ಯಕ್ಷನ್ ಪ್ಲಾನ್ 2ನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇದರ ಭಾಗವಾಗಿ ನಿರ್ಮಾಣ ಚಟುವಟಿಕೆಗಳ ಮೇಲೂ ನಿರ್ಬಂಧ ವಿಧಿಸಲಾಗಿದೆ. ಆದರೂ ಮಾಲಿನ್ಯದ ಪ್ರಮಾಣದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ಮಂಗಳವಾರ ರಿಯಲ್ ಟೈಮ್ ಟ್ರ‍್ಯಾಕಿಂಗ್ ಪ್ಲಾಟ್‌ಫಾರ್ಮ್‌ಗಳ ಪ್ರಕಾರ ದೆಹಲಿಯಲ್ಲಿ ಸರಾಸರಿ 307 ಎಕ್ಯೂಐ ದಾಖಲಾಗಿದೆ.  ಯಾವ ಪ್ರದೇಶದಲ್ಲಿ ಎಷ್ಟು ಎಕ್ಯೂಐ ದಾಖಲು?
ದೆಹಲಿಯ ಪುಸಾ ಮತ್ತು ಚಾಂದನಿ ಚೌಕ್‌ನಲ್ಲಿ ಗರಿಷ್ಠ 395 ಎಕ್ಯೂಐ ದಾಖಲಾಗಿದೆ. ಎನ್‌ಎಸ್‌ಯುಟಿ ಜಾಫರ್‌ಪುರದಲ್ಲಿ 382 ಹಾಗೂ ಕಾಮನ್‌ವೆಲ್ತ್ ಕ್ರೀಡಾ ಸಂಕೀರ್ಣದಲ್ಲಿ 380 ಎಕ್ಯೂಐ ದಾಖಲಾಗಿದೆ. ಇತರ ಪ್ರದೇಶಗಳಲ್ಲಿಯೂ ವಾಯುಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಬುರಾರಿಯಲ್ಲಿ 303, ಕರಾಲಾದಲ್ಲಿ 236, ಘೋಗಾದಲ್ಲಿ 272, ನಾಂಗ್ಲೋಯಿಯಲ್ಲಿ 266, ಟಿಕ್ರಿ ಕಲಾನ್‌ನಲ್ಲಿ 293 ಹಾಗೂ ಜರೋಡಾ ಕಲಾನ್‌ನಲ್ಲಿ 303 ಎಕ್ಯೂಐ ದಾಖಲಾಗಿದೆ. ಎನ್‌ಐಹೆಚ್ ನರೇಲಾದಲ್ಲಿ 339, ಲೋಧಿ ರಸ್ತೆಯಲ್ಲಿ 327 ಹಾಗೂ ಥಾಲ್ ಕಟೋರಾ ಗಾರ್ಡನ್‌ನಲ್ಲಿ 370 ಎಕ್ಯೂಐ ವರದಿಯಾಗಿದೆ. ಅದೇ ರೀತಿ ಅಯಾ ನಗರದಲ್ಲಿ 349, ಪಂಜಾಬಿ ಬಾಗ್‌ನಲ್ಲಿ 348, ಶಾದಿಪುರದಲ್ಲಿ 312, ಸಿರಿಫೋರ್ಟ್ನಲ್ಲಿ 365, ಆರ್.ಕೆ. ಪುರಂನಲ್ಲಿ 329, ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ 323, ರೋಹಿಣಿಯಲ್ಲಿ 301 ಹಾಗೂ ಬವಾನಾದಲ್ಲಿ 314 ಎಕ್ಯೂಐ ದಾಖಲಾಗಿದೆ. ಸೋಮವಾರ ದೆಹಲಿಯ ಪರಿಸ್ಥಿತಿ ಹೇಗಿತ್ತು?
ಸೋಮವಾರ ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು. ಹಲವು ಪ್ರದೇಶಗಳಲ್ಲಿ ದಟ್ಟ ಹೊಗೆ ಆವರಿಸಿತ್ತು. ಸ್ವಿಸ್ ಮೂಲದ ವಾಯು ಗುಣಮಟ್ಟ ಮೇಲ್ವಿಚಾರಣಾ ವೇದಿಕೆ ಐಕ್ಯೂಏರ್ ಪ್ರಕಾರ, ದೆಹಲಿಯ ಗಾಳಿಯಲ್ಲಿ ಪಿಎಂ 2.5 ಮಾಲಿನ್ಯದ ಪ್ರಮಾಣ ಪ್ರತಿ ಘನ ಮೀಟರ್‌ಗೆ 170 ಮೈಕ್ರೋಗ್ರಾಂ ದಾಖಲಾಗಿತ್ತು. ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಮಿತಿಗಿಂತ ಸುಮಾರು 34 ಪಟ್ಟು ಹೆಚ್ಚಾಗಿದೆ. ವಾಯುಮಾಲಿನ್ಯದಿಂದ ಜನರ ಆರೋಗ್ಯದ ಮೇಲೂ ಪರಿಣಾಮ ಉಂಟಾಗುತ್ತಿದೆ. ಹಲವರು ತಲೆನೋವು, ಒಣ ಕೆಮ್ಮು, ಕಣ್ಣು ಮತ್ತು ಗಂಟಲಿನಲ್ಲಿ ಉರಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾಲಿನ್ಯದಿಂದ ರಕ್ಷಿಸಿಕೊಳ್ಳಲು ಎನ್95 ಮಾಸ್ಕ್ ಧರಿಸುವಂತೆ ಹಾಗೂ ಖಾಸಗಿ ವಾಹನಗಳ ಬದಲು ಸಾರ್ವಜನಿಕ ಸಾರಿಗೆ ಬಳಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *