Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮುಂಬೈನಲ್ಲಿ ರ‍್ಯಾಪಿಡೋ ಚಾಲಕನ ಬಂಧನ: ಉಗ್ರ ಸಂಘಟನೆಯೊಂದಿಗೆ ಸಂಪರ್ಕದ ಶಂಕೆ!

Spread the love

ಮುಂಬೈ: ಜೈಶ್ ಸಂಘಟನೆಯೊಂದಿಗೆ ನಂಟು ಹೊಂದಿರುವ ಶಂಕೆ ಹಾಗೂ ಪ್ರಧಾನಿಯ ವಿರುದ್ಧ ಹೇಳಿಕೆ ನೀಡಿದ ಆರೋಪದ ಮೇಲೆ ಮುಂಬೈನಲ್ಲಿ ರ‍್ಯಾಪಿಡೋ ಚಾಲಕನನ್ನು ಬಂಧಿಸಲಾಗಿದೆ.
ಮುಂಬೈನ ಮಾಹಿಮ್ ನಿವಾಸಿಯಾದ ಮೊಹಮ್ಮದ್ ಹಸನ್ ಅಬು ಸರ್ಮದ್ ಅಖ್ತರ್ ಎಂಬಾತನನ್ನು, ಖಚಿತ ಮಾಹಿತಿ ಮೇರೆಗೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳವು (ATS) ಮಾಹಿಮ್ ಮೆಟ್ರೋ ನಿಲ್ದಾಣದ ಬಳಿ ಪತ್ತೆಹಚ್ಚಿದೆ.
ಮುಂಬೈನಲ್ಲಿ ‘ರಾಪಿಡೋ’ (Rapido) ಚಾಲಕನಾಗಿ ಈತ ಕೆಲಸ ಮಾಡುತ್ತಿದ್ದ. ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ‘ಜೈಶ್-ಎ-ಮೊಹಮ್ಮದ್’ (JeM) ಜೊತೆಗೆ ಶಂಕಿತ ಸಂಪರ್ಕ ಹೊಂದಿದ್ದಕ್ಕಾಗಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಿವಾದಾತ್ಮಕ ಮತ್ತು ಉಗ್ರ ನಿಲುವುಳ್ಳ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಬಂಧಿಸಲಾಗಿದೆ.ಅಖ್ತರ್ ರ‍್ಯಾಪಿಡೋ ಚಾಲಕನಾಗಿ ಮತ್ತು ಸುಗಂಧ ದ್ರವ್ಯ ಮಾರಾಟಗಾರನಾಗಿ ಕೆಲಸ ಮಾಡುತ್ತಿದ್ದ. ಅದೇ ಸಮಯದಲ್ಲಿ ಮೂಲಭೂತ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದ. ಅವನು ಪಾಕಿಸ್ತಾನಿ ಗುಪ್ತಚರ ಕಾರ್ಯಾಚರಣೆಯೊಂದಿಗೆ ಸಂಪರ್ಕದಲ್ಲಿದ್ದ. ಆರೋಪಿಯು ಧಾರ್ಮಿಕ ದ್ವೇಷವನ್ನು ಉತ್ತೇಜಿಸುತ್ತಿದ್ದ. ಬಾಬರಿ ಮಸೀದಿಗೆ ಸಂಬಂಧಿಸಿದಂತೆ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಭಯೋತ್ಪಾದನಾ ಆಡಿಯೊ ತುಣುಕುಗಳನ್ನು ಟೆಲಿಗ್ರಾಮ್‌ನಲ್ಲಿ ‘ಇಂಡಿಯನ್ ಮುಸ್ಲಿಂ’ ಎಂಬ ಗುಂಪಿನಲ್ಲಿ ಹಂಚಿಕೊಂಡಿದ್ದ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಅಖ್ತರ್ ‘IBN E Qasim’ ಹೆಸರಿನ ಪಾಕಿಸ್ತಾನದ ಒಂದು ಉಗ್ರಗಾಮಿ ಟೆಲಿಗ್ರಾಮ್ ಚಾನೆಲ್‌ಗೆ ಚಂದಾದಾರನಾಗಿದ್ದನೆಂದು ತನಿಖೆಯಿಂದ ಬಹಿರಂಗವಾಗಿದೆ. ಅಧಿಕಾರಿಗಳು ಆರೋಪಿಯಿಂದ ರೆಡ್ಮಿ ನೋಟ್ 14 ಪ್ರೊ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ತನಿಖೆಗಾಗಿ ಆತನ ಆಕ್ಷೇಪಾರ್ಹ ಸಾಮಾಜಿಕ ಮಾಧ್ಯಮ ಚಟುವಟಿಕೆಯ 39 ಸ್ಕ್ರೀನ್‌ಶಾಟ್‌ಗಳನ್ನು ಪಡೆದುಕೊಂಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *