Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ವಿಜಯಲಕ್ಷ್ಮಿ–ಧನ್ವೀರ್ ನಡುವಿನ ಪೋಸ್ಟ್ ವಾರ್ ಪೊಲೀಸ್ ಠಾಣೆ ಮೆಟ್ಟಿಲೇರಿತು!

Spread the love

ಬೆಂಗಳೂರು: ನಟ ದರ್ಶನ್(Darshan) ಅವರ ಪತ್ನಿ ವಿಜಯಲಕ್ಷ್ಮಿ (Vijayalakshmi) ಹಾಗೂ ನಟ ಧನ್ವೀರ್ ಗೌಡ(Dhanveer Gowda) ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಹೊಗೆಯಾಡುತ್ತಿದ್ದ ಪರೋಕ್ಷ ಸಮರ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಎಂಬುವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪದ ಮೇಲೆ ನಟ ಧನ್ವೀರ್ ಗೌಡ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ (NCR) ದಾಖಲಾಗಿದೆ.
ನಟ ಧನ್ವೀರ್ ಗೌಡ ಅವರು ತಮಗೆ ಫೋನ್ ಕರೆ ಮಾಡಿ ಅತ್ಯಂತ ಕೆಟ್ಟ ಪದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್ ಪೊಲೀಸರಿಗೆ ದೂರು ನೀಡಿದ್ದಾರೆ. ಜೊತೆಗೆ ನಿಂದಿಸಿರುವ ಆಡಿಯೋ ಸಂಭಾಷಣೆಯನ್ನು ಸಾಕ್ಷ್ಯವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ದೂರು ಸ್ವೀಕರಿಸಿರುವ ಆರ್‌ಆರ್ ನಗರ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದು, ವಿಚಾರಣೆಗಾಗಿ ನಟ ಧನ್ವೀರ್‌ಗೆ ನೋಟಿಸ್ ನೀಡಿ ಠಾಣೆಗೆ ಕರೆಯಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.ಕಳೆದ ಕೆಲ ದಿನಗಳಿಂದ ವಿಜಯಲಕ್ಷ್ಮಿ ಹಾಗೂ ಧನ್ವೀರ್ ಗೌಡ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ವಾರ್ ನಡೆಯುತ್ತಿತ್ತು. “ಕೆಲವರು ದರ್ಶನ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಸ್ವಹಿತಾಸಕ್ತಿ ಸಾಧಿಸುತ್ತಿದ್ದಾರೆ” ಎಂದು ವಿಜಯಲಕ್ಷ್ಮಿ ಪೋಸ್ಟ್ ಹಂಚಿಕೊಂಡಿದ್ದರು.
ಇದಕ್ಕೆ ಕೌಂಟರ್ ಕೊಡುವ ರೀತಿಯಲ್ಲಿ ಪೋಸ್ಟ್ ಹಾಕಿದ್ದ ಧನ್ವೀರ್, “ಕೆಲವರು ‘ಶಕುನಿ’ಗಳಂತೆ ಇರುತ್ತಾರೆ. ಕೊನೆಯವರೆಗೂ ಆಟವಾಡಿ, ಅಂತಿಮವಾಗಿ ತಾವೇ ಸಂತ್ರಸ್ತರಂತೆ ನಟಿಸುತ್ತಾರೆ. ಅವರಿಗೆ ಹೆದರಿಸಿ ಅಭ್ಯಾಸ, ನಮಗೆ ಎದುರಿಸಿ ಅಭ್ಯಾಸ” ಎಂದು ತಿರುಗೇಟು ನೀಡಿದ್ದರು.
ಈ ಶೀತಲ ಸಮರ ತಾರಕಕ್ಕೇರಿದ ಬೆನ್ನಲ್ಲೇ ಮ್ಯಾನೇಜರ್‌ಗೆ ಕರೆ ಮಾಡಿ ಬೈಗುಳ ನೀಡಿರುವ ಆಡಿಯೋ ವಿವಾದಕ್ಕೆ ಕಾರಣವಾಗಿದ್ದು, ಪ್ರಕರಣ ಕಾನೂನು ಹೋರಾಟದ ಸ್ವರೂಪ ಪಡೆದುಕೊಂಡಿದೆ.


Spread the love
Share:

administrator

Leave a Reply

Your email address will not be published. Required fields are marked *