ಗ್ರೇಟರ್ ನೋಯ್ಡಾದಲ್ಲಿ ನೂಡಲ್ಸ್ ಸೇವಿಸಿ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾ*ವು!

ಲಕ್ನೋ: ಗ್ರೇಟರ್ ನೋಯ್ಡಾದ (Greater Noida) ನಂಗ್ಲಾ ಶ್ರೀಗೋಪಾಲ್ ಗ್ರಾಮದಲ್ಲಿ ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಮಹೇಶ್ (37), ಪತ್ನಿ ಲಲಿತಾ (35) ಮತ್ತು ಮಕ್ಕಳಾದ ಲಡ್ಡು (11), ಮಿಶ್ತಿ (7) ಮತ್ತು ಸಾಕ್ಷತ್ (3) ಎಂದು ಗುರುತಿಸಲಾಗಿದೆ.
ಕುಟುಂಬದ ಸದಸ್ಯರು ಕೊನೆಯದಾಗಿ ನೋಡಲ್ಸ್ ಸೇವಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆಹಾರದ ಮೂಲಕ ವಿಷ ದೇಹ ಸೇರಿರುವ ಶಂಕೆ ವ್ಯಕ್ತವಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರವಾದ ಕಾರಣ ತಿಳಿದುಬರಲಿದೆ. ಘಟನೆ ಕುರಿತು ಉತ್ತರ ಪ್ರದೇಶದ ರಬೂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.