ನಟ ಇಮ್ರಾನ್ ಖಾನ್ಗೆ ದೇಶ ತೊರೆಯುವಂತೆ ಮುಂಬೈ ಪೊಲೀಸರ ನೋಟಿಸ್!

ಮುಂಬೈ: ಬಾಲಿವುಡ್ ಸ್ಟಾರ್ ಆಮಿರ್ ಖಾನ್ ಅವರ ಸೋದರಳಿಯ ಹಾಗೂ ನಟ ಇಮ್ರಾನ್ ಖಾನ್ಗೆ (Imran Khan) ಮುಂಬೈ ಪೊಲೀಸರು (Mumbai Police) ನೋಟಿಸ್ ಜಾರಿ ಮಾಡಿದ್ದು, ಅಕ್ಟೋಬರ್ 28ರೊಳಗೆ ಭಾರತವನ್ನು ತೊರೆಯುವಂತೆ ಸೂಚಿಸಿದ್ದಾರೆ.ಮಾಹಿತಿಯ ಪ್ರಕಾರ, ಇಮ್ರಾನ್ ಖಾನ್ ಭಾರತೀಯ ಪ್ರಜೆಯಲ್ಲದಿದ್ದರೂ ಸಹ ಭಾರತದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂಬ ಕಾರಣಕ್ಕಾಗಿ ವಲಸೆ ಕಾಯ್ದೆಯಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಮುಂಬೈ ಪೊಲೀಸರು ನೋಟಿಸ್ ನೀಡಿದ್ದು, ಅ.28ರೊಳಗೆ ಭಾರತ ದೇಶವನ್ನು ತೊರೆಯುವಂತೆ ಸೂಚನೆ ನೀಡಿದ್ದಾರೆ.ಬಾಲಿವುಡ್ ನಟ ಇಮ್ರಾನ್ ಖಾನ್ ಅವರು ಅಮೆರಿಕದ ಪ್ರಜೆ ಆಗಿದ್ದು, ಭಾರತದಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಅನುಮತಿಸುವ ಸಾಗರೋತ್ತರ ಭಾರತೀಯ ನಾಗರಿಕ (OCI) ಕಾರ್ಡ್ ಹೊಂದಿದ್ದಾರೆ. 2026ರ ಅಕ್ಟೋಬರ್ನಲ್ಲಿ ನಡೆದ ವಿವಾದದ ಬಳಿಕ ಇವರ ಪೌರತ್ವದ ಬಗ್ಗೆ ಮಾಹಿತಿ ಹೊರಬಿದ್ದಿದೆ.ನೋಟಿಸ್ ನೀಡಿದ್ಯಾಕೆ?

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಮುಂಬೈನ ಆಗಸ್ಟ್ ಕ್ರಾಂತಿ ಮೈದಾನದಲ್ಲಿ ನಡೆದ ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆಯಲ್ಲಿ ನಟ ಇಮ್ರಾನ್ ಖಾನ್ ಪಾಲ್ಗೊಂಡಿದ್ದರು. ಇದರ ಬೆನ್ನಲ್ಲೇ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದರು. ವಶಕ್ಕೆ ಪಡೆದಿದ್ದ ಫೋಟೋವೊಂದನ್ನು ಇಮ್ರಾನ್ ಖಾನ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.