ಸುಳ್ಯ: ಕಲ್ಮಡ್ಕದಲ್ಲಿ ವಿದ್ಯುತ್ ಆಘಾತಕ್ಕೆ ಇಬ್ಬರು ಯುವಕರು ದಾರುಣ ಸಾ*ವು – ಮತ್ತೋರ್ವ ಬಾಲಕನಿಗೆ ಗಾಯ!

ಸುಳ್ಯ : ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಬೊಮ್ಮೆಟ್ಟಿ ಎಂಬಲ್ಲಿ ಸಂಭವಿಸಿದ ವಿದ್ಯುತ್ ಆಘಾತ ದುರಂತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಅಕ್ಟೋಬರ್ 12ರ ತಡರಾತ್ರಿ ನಡೆದಿದೆ.

ಬೊಮ್ಮೆಟ್ಟಿ ನಿವಾಸಿಗಳಾದ ಗಣೇಶ್ ಹಾಗೂ ಭರತ್ ಮೃತಪಟ್ಟ ದುರ್ದೈವಿಗಳು. ಈ ಅಪಘಾತದಲ್ಲಿ ಮತ್ತೋರ್ವ ಬಾಲಕ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಮವಾರ ತಡರಾತ್ರಿ ಬೊಮ್ಮೆಟ್ಟಿ ಪ್ರದೇಶದಲ್ಲಿ ಈ ಅನಾಹುತ ಸಂಭವಿಸಿದೆ. ಯುವಕರಿಬ್ಬರಿಗೆ ಯಾವ ಕಾರಣದಿಂದ ಮತ್ತು ಹೇಗೆ ವಿದ್ಯುತ್ ಪ್ರವಹಿಸಿದೆ ಎಂಬ ಕುರಿತು ನಿಖರವಾದ ಮಾಹಿತಿ ಇನ್ನೂ ಲಭ್ಯವಾಗಬೇಕಿದೆ.