Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೋಝಿಕ್ಕೋಡ್: ವಡಕರ ಪೊಲೀಸ್ ಠಾಣೆ ಬಳಿಯೇ ಮಾಜಿ ಶಿಕ್ಷಕಿ ಮೇಲೆ ಪತಿಯಿಂದ ಭೀಕರ ಚಾಕು ಇರಿತ – ಕೊಲೆಯತ್ನ!”

Spread the love

ಕೋಝಿಕ್ಕೋಡ್ : ಕೇರಳವನ್ನು ಬೆಚ್ಚಿಬೀಳಿಸಿದ್ದ ವಡಕರ ಎಂಡಿಎಂಎ (MDMA) ಮಾದಕವಸ್ತು ಜಾಲದ ಪ್ರಕರಣದ ಪ್ರಮುಖ ಆರೋಪಿಯೂ ಆಗಿರುವ ಬ್ಲಾಕ್ ರಿಸೋರ್ಸ್ ಸೆಂಟರ್ (BRC) ನ ಮಾಜಿ ದೈಹಿಕ ಶಿಕ್ಷಣ ಶಿಕ್ಷಕಿ ಕೀರ್ತನಾ ಕೆ.ಸಿ. ಅವರ ಮೇಲೆ ಆಕೆಯ ಪತಿ ವಡಕರ ಪೊಲೀಸ್ ಠಾಣೆಯ ಬಳಿಯೇ ಭೀಕರವಾಗಿ ಚಾಕುವಿನಿಂದ ಇರಿದು ಕೊಲೆಯತ್ನ ನಡೆಸಿದ್ದಾನೆ.

ದಾಳಿ ನಡೆಸಿದ ಕೀರ್ತನಾಳ ಸಂಗಾತಿ ಜಿನೀಶ್ (39) ಎಂಬಾತನನ್ನು ಪೊಲೀಸರು ತಕ್ಷಣವೇ ಬಂಧಿಸಿದ್ದಾರೆ. ಚಾಕು ಇರಿತದಿಂದಾಗಿ ಕೀರ್ತನಾ ಅವರ ಕುತ್ತಿಗೆಗೆ ಆಳವಾದ ಗಾಯವಾಗಿದ್ದು, ಕೈ-ಕಾಲುಗಳಿಗೂ ಗಂಭೀರ ಪೆಟ್ಟಾಗಿದೆ. ಅವರನ್ನು ತಕ್ಷಣವೇ ವಡಕರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೆರಂಬ್ರಾ ಬಿಆರ್‌ಸಿಯಲ್ಲಿ ಶಿಕ್ಷಕಿಯಾಗಿದ್ದ ಕೀರ್ತನಾಗೆ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಕೇರಳ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಹೈಕೋರ್ಟ್ ಷರತ್ತಿನಂತೆ ಕೀರ್ತನಾ ಪ್ರತಿ ಶನಿವಾರ ವಡಕರ ಪೊಲೀಸ್ ಠಾಣೆಗೆ ಹಾಜರಾಗಿ ರಿಜಿಸ್ಟರ್‌ನಲ್ಲಿ ಸಹಿ ಮಾಡಬೇಕಾಗಿತ್ತು. ಶನಿವಾರ ಪೊಲೀಸ್ ಠಾಣೆಗೆ ಆಗಮಿಸಿ ಸಹಿ ಹಾಕಿ ಹೊರಬರುತ್ತಿದ್ದ ವೇಳೆ, ಕಾದು ಕುಳಿತಿದ್ದ ಸಂಗಾತಿ ಜಿನೀಶ್ ದಿಢೀರ್ ದಾಳಿ ನಡೆಸಿ ಚಾಕುವಿನಿಂದ ಕುತ್ತಿಗೆಗೆ ಇರಿದಿದ್ದಾನೆ.

ಕಳೆದ ಜೂನ್ 28 ರಂದು ವಡಕರದಲ್ಲಿ ಆಟೋರಿಕ್ಷಾ ಚಾಲಕ ಸಫ್ವಾನ್ ಎಂಬಾತನಿಂದ ಎಂಡಿಎಂಎ ವಶಪಡಿಸಿಕೊಳ್ಳುವ ಮೂಲಕ ಈ ಬೃಹತ್ ಡ್ರಗ್ಸ್ ಜಾಲ ಬಯಲಿಗೆ ಬಂದಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಜುಲೈ 11 ರಂದು ಕೀರ್ತನಾಳನ್ನು ಹಾಗೂ ನಂತರದ ದಿನಗಳಲ್ಲಿ ಬಿಆರ್‌ಸಿ ಶಿಕ್ಷಕಿಯರಾದ ಕೆ. ಕಾವ್ಯ, ವಿ.ಪಿ. ನೀಶ್ಮಾ ಮತ್ತು ಇರಿಟ್ಟಿ ಮೂಲದ ಜಿಜಿನ್ ಕುರಿಯಾಕೋಸ್ ಎಂಬವರನ್ನು ಬಂಧಿಸಿದ್ದರು. ಕೃತ್ಯ ಬಯಲಾಗುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಮೂವರೂ ಶಿಕ್ಷಕಿಯರನ್ನು ಸೇವೆಯಿಂದ ವಜಾಗೊಳಿಸಿತ್ತು.

ಈ ಮಾಜಿ ಶಿಕ್ಷಕಿಯರು ಶಾಲಾ ಮುಗ್ಧ ಮಕ್ಕಳನ್ನೇ ಮಾದಕವಸ್ತು ಕಳ್ಳಸಾಗಣೆಯ ಕ್ಯಾರಿಯರ್‌ಗಳನ್ನಾಗಿ (Drug Carriers) ಬಳಸಿಕೊಳ್ಳುತ್ತಿದ್ದರು ಎಂಬ ಭೀಕರ ಸತ್ಯವನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಕಸ್ಟಡಿ ಅರ್ಜಿಯಲ್ಲಿ ತಿಳಿಸಿದ್ದರು.

ಕೀರ್ತನಾಳ ಬ್ಯಾಂಕ್ ಖಾತೆ ಹಾಗೂ ಮೊಬೈಲ್ ಫೋನ್ ಪರಿಶೀಲಿಸಿದಾಗ ಪ್ರಕರಣದ ಇತರ ಆರೋಪಿಗಳೊಂದಿಗೆ ನಡೆಸಿರುವ ಲಕ್ಷಾಂತರ ರೂಪಾಯಿಗಳ ‘ಗೂಗಲ್ ಪೇ’ (Google Pay) ವಹಿವಾಟುಗಳು ಹಾಗೂ ಮಾದಕದ್ರವ್ಯ ಜಾಲದ ಕ್ರಿಮಿನಲ್‌ಗಳೊಂದಿಗೆ ನಡೆಸಿದ ಚಾಟ್‌ಗಳು ಪತ್ತೆಯಾಗಿದ್ದವು. ಪ್ರಸ್ತುತ ಈ ಪ್ರಕರಣದ 3 ನೇ ಆರೋಪಿ ಕಾವ್ಯಾಳಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಪ್ರಕರಣದ ಸಮಗ್ರ ತನಿಖೆ ಮುಂದುವರಿದಿದೆ.


Spread the love
Share:

administrator

Leave a Reply

Your email address will not be published. Required fields are marked *