Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆದಿಲಾಬಾದ್: RIMS ಆಸ್ಪತ್ರೆಯ ಶಿಶು ವಾರ್ಡ್‌ನಲ್ಲಿ ಎಸಿ ಸ್ಫೋಟ – ಉಸಿರುಗಟ್ಟಿ ಇಬ್ಬರು ನವಜಾತ ಶಿಶುಗಳು ಸಾವು!

Spread the love

ಅದಿಲಾಬಾದ್: ಆದಿಲಾಬಾದ್​ನ​ RIMS ಆಸ್ಪತ್ರೆಯಲ್ಲಿ ಭಾರಿ ದುರಂತ ಸಂಭವಿಸಿದೆ. ಸೋಮವಾರ ಮಧ್ಯರಾತ್ರಿ ನವಜಾತ ಶಿಶುಗಳ ವಿಶೇಷ ಆರೈಕೆ ವಾರ್ಡ್​ನಲ್ಲಿ ಹವಾ ನಿಯಂತ್ರಕ ಯಂತ್ರ ಸ್ಫೋಟಗೊಂಡ ಪರಿಣಾಮ ಎರಡು ಶಿಶುಗಳು ಸಾವನ್ನಪ್ಪಿವೆ.ಇನ್ನುಳಿದಂತೆ ಎರಡು ಶಿಶುಗಳ ಸ್ಥಿತಿ ಗಂಭೀರವಾಗಿದೆ. ಈ ವಾರ್ಡ್​ನಲ್ಲಿ ಒಟ್ಟು 27 ಶಿಶುಗಳನ್ನು ದಾಖಲಿಸಲಾಗಿತ್ತು ಎಂದು ವರದಿಯಾಗಿದೆ. ಘಟನೆಯಿಂದ ನೋಡ ನೋಡುತ್ತಿದ್ದಂತೆ ವಾರ್ಡ್​ ದಟ್ಟವಾದ ಹೊಗೆಯಿಂದ ಆವೃತವಾಗಿತ್ತು. ಹೀಗಾಗಿ ಇನ್ಕ್ಯುಬೇಟರ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ಶಿಶುಗಳು ಉಸಿರುಗಟ್ಟುವಿಕೆಯಿಂದಾಗಿ ಪ್ರಾಣಾಪಾಯದ ಸ್ಥಿತಿಯನ್ನು ಎದುರಿಸುವಂತಾಯಿತು. ಈ ದುರ್ಘಟನೆಯಲ್ಲಿ ಎರಡು ಶಿಶುಗಳು ಮೃತಪಟ್ಟರೆ, ಎರಡು ಗಂಭೀರ ಸ್ಥಿತಿಯಲ್ಲಿವೆ. ಉಳಿದ 23 ಶಿಶುಗಳನ್ನು ತುರ್ತಾಗಿ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸುವ ಮೂಲಕ ಹೆಚ್ಚಿನ ಸಾವುನೋವುಗಳನ್ನು ತಪ್ಪಿಸಲಾಗಿದೆ.27 ಶಿಶುಗಳು ಆರೈಕೆ ಪಡೆಯುತ್ತಿದ್ದ SNCUನಲ್ಲಿ ಎಸಿ ಘಟಕವೊಂದು ಇದ್ದಕ್ಕಿದ್ದಂತೆ ಸ್ಫೋಟಗೊಂಡಿದ್ದರಿಂದ ಮಧ್ಯರಾತ್ರಿಯ ನಂತರ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಘಟನೆಯು ಸಿಬ್ಬಂದಿಯನ್ನು ಬೆಚ್ಚಿಬೀಳಿಸಿದೆ. ಜನರು ಆತಂಕದಿಂದ ಕೂಗಾಡಿದ್ದರಿಂದ ಭಯ ಮತ್ತು ಗೊಂದಲದ ವಾತಾವರಣ ಕಂಡುಬಂತು. ಆ ಸಮಯದಲ್ಲಿ ಆಸ್ಪತ್ರೆಯ ನಿರ್ದೇಶಕ ಜೈ ಸಿಂಗ್ ಅವರು ಪರಿಸ್ಥಿತಿಯ ಬಗ್ಗೆ ತಿಳಿದು, ಸಿಬ್ಬಂದಿ ಮತ್ತು ಆಂಬ್ಯುಲೆನ್ಸ್ ಚಾಲಕರೊಂದಿಗೆ SNCUಗೆ ದೌಡಾಯಿಸಿದಾಗ, ಆ ಘಟಕವು ದಟ್ಟ ಹೊಗೆಯಿಂದ ಆವೃತವಾಗಿರುವುದು ಕಂಡುಬಂದಿತ್ತು.ತಕ್ಷಣಕ್ಕೆ ಕಿಟಕಿ ಗಾಜುಗಳನ್ನು ಒಡೆದು ಶಿಶುಗಳನ್ನು ರಕ್ಷಿಸಲು ತಕ್ಷಣದ ಪ್ರಯತ್ನಗಳನ್ನು ನಡೆಸಲಾಯಿತಾದರೂ, ಇಚೋಡಾದ ಐದು ದಿನದ ಶಿಶುವೊಂದು (ಸಲೀಂ ಎಂಬುವರ ಮಗು) ಆಗಲೇ ಮೃತಪಟ್ಟಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಮೂವರು ಶಿಶುಗಳು ಸೇರಿದಂತೆ ಶಿಶುಗಳನ್ನು ಆಂಬ್ಯುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು; ಗಂಭೀರ ಸ್ಥಿತಿಯಲ್ಲಿದ್ದ ಮೂವರ ಪೈಕಿ ಒಂದು ಶಿಶು ಮೃತಪಟ್ಟಿದೆ. ಉಳಿದ 25 ಶಿಶುಗಳು ಪ್ರಾಣಾಪಾಯದಿಂದ ಪಾರಾಗಿವೆ. ಅಗ್ನಿಶಾಮಕ ಸಿಬ್ಬಂದಿ ಕೈಗೊಂಡ ಮುನ್ನೆಚ್ಚರಿಕೆ ಕ್ರಮಗಳಿಂದಾಗಿ, ಹೆಚ್ಚಿನ ಅನಾಹುತ ತಪ್ಪಿದೆ.ಘಟನೆಯ ಬಗ್ಗೆ ತಿಳಿದ ತಕ್ಷಣ ಜಿಲ್ಲಾಧಿಕಾರಿ ರಾಜರ್ಷಿ ಶಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಅವರು ರಿಮ್ಸ್ ಆಸ್ಪತ್ರೆಗೆ ಧಾವಿಸಿದ್ದರು. ಅವರು ರಕ್ಷಣಾ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಿದರು ಮತ್ತು ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು. ಎರಡು ಶಿಶುಗಳ ಸಾವನ್ನು ದೃಢಪಡಿಸಿದ್ದಾರೆ ಮತ್ತು ಅಪಘಾತಕ್ಕೆ ಕಾರಣವನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.ಇನ್ಕ್ಯುಬೇಟರ್‌ಗಳಿಂದ ಶಿಶುಗಳನ್ನು ರಕ್ಷಿಸುವಲ್ಲಿ ಸ್ಥಳೀಯರು ತೋರಿದ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ತಪ್ಪಿದೆ. ರಾತ್ರಿಯಿಡೀ ಅಧಿಕಾರಿಗಳು ಮತ್ತು ಇತರರು ರಿಮ್ಸ್ ಆಸ್ಪತ್ರೆಯಲ್ಲೇ ಉಳಿದು, ಪರಿಹಾರ ಕಾರ್ಯಗಳಲ್ಲಿ ಪಾಲ್ಗೊಂಡರು ಹಾಗೂ ರೋಗಿಗಳು ಆತಂಕಪಡದಂತೆ ಧೈರ್ಯ ತುಂಬಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *