Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ನವದೆಹಲಿ: NEET-SS ಪ್ರವೇಶ ಕಟ್‌ಆಫ್ ಶೇ. 30ಕ್ಕೆ ಇಳಿಸಲು ಕೇಂದ್ರ ಸರ್ಕಾರದ ಸಮ್ಮತಿ – ಸುಪ್ರೀಂ ಕೋರ್ಟ್ ಒಪ್ಪಿಗೆ!

Spread the love

ಹೊಸದಿಲ್ಲಿ: ಸೂಪ‌ರ್ ಸ್ಪೆಷಾಲಿಟಿ ವೈದ್ಯಕೀಯ ಕೋರ್ಸ್ ಗಳ ಸುಮಾರು 2,000 ಖಾಲಿ ಸೀಟುಗಳನ್ನು ಭರ್ತಿ ಮಾಡಲು NEET-SS ಅರ್ಹತಾ ಕಟ್‌ಆಫ್ ಶೇಕಡಾ ಸ್ಥಾನವನ್ನು ಪ್ರಸ್ತುತ ಇರುವ 50ರಿಂದ 30ಕ್ಕೆ ಇಳಿಸಲು ಕೇಂದ್ರ ಸರ್ಕಾರ ಗುರುವಾರ ಒಪ್ಪಿಗೆ ಸೂಚಿಸಿದೆ.
ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಈ ಬದಲಾವಣೆ ಮಾಡಲಾಗಿದ್ದು ಶೀಘ್ರದಲ್ಲೇ ನಡೆಯಲಿರುವ ಉಳಿದ ಖಾಲಿ ಸೀಟುಗಳ ಕೌನ್ಸೆಲಿಂಗ್‌ ಸುತ್ತಿಗೆ ಇದು ಅನ್ವಯವಾಗಲಿದೆ.
ಸೀಟುಗಳು ಖಾಲಿ ಉಳಿದು ವ್ಯರ್ಥವಾಗುವುದನ್ನು ತಡೆಯಲು ಕಟ್‌ಆಫ್ ಇಳಿಸದಿರುವ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಕಳೆದ ವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠಕ್ಕೆ ಎರಡು ಪುಟಗಳ ಟಿಪ್ಪಣಿ ಸಲ್ಲಿಸಿದ ಕೇಂದ್ರ ಸರ್ಕಾರ, “ಸಂಬಂಧಪಟ್ಟ ಪಾಲುದಾರರೊಂದಿಗೆ ಸಮಾಲೋಚಿಸಿ ಈ ವಿಷಯವನ್ನು ಮರುಪರಿಶೀಲಿಸಲಾಗಿದೆ” ಎಂದು ತಿಳಿಸಿದೆ.

ಲಭ್ಯವಿರುವ ಸೂಪರ್ ಸ್ಪೆಷಾಲಿಟಿ ಸೀಟುಗಳು ಖಾಲಿ ಉಳಿಯದಂತೆ ನೋಡಿಕೊಳ್ಳುವುದು ಹಾಗೂ ತರಬೇತಿ ಸಾಮರ್ಥ್ಯವನ್ನು ಗರಿಷ್ಠವಾಗಿ ಬಳಸಿಕೊಳ್ಳುವ ಉದ್ದೇಶದಿಂದ ಅರ್ಹತಾ ಮಾನದಂಡವನ್ನು 50ನೇ ಪರ್ಸಂಟೈಲ್ಲಿಂದ 30ನೇ ಪರ್ಸಂಟೈ ಇಳಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ವಿವರಿಸಿದೆ.
ಆದರೆ, ಈಗಾಗಲೇ ಪ್ರವೇಶ ಪಡೆದಿರುವ ಅಭ್ಯರ್ಥಿಗಳಿಗೆ ಈ ವಿಶೇಷ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ. ಪ್ರಸ್ತುತ ಜಾರಿಯಲ್ಲಿರುವ ಉಳಿದ ಖಾಲಿ ಸೀಟುಗಳ ಕೌನ್ಸೆಲಿಂಗ್ ಸುತ್ತಿನ ನಿಯಮಗಳ ಪ್ರಕಾರವೇ ಈ ಪ್ರಕ್ರಿಯೆ ನಡೆಯಲಿದ್ದು, ಈಗಾಗಲೇ ಸೀಟು ಪಡೆದಿರುವ ಅಭ್ಯರ್ಥಿಗಳಿಗೆ ಕಾಲೇಜು ಅಥವಾ ಸೀಟು ಬದಲಾವಣೆ (ಅಪ್ಲೋಡ್) ಮಾಡಿಕೊಳ್ಳುವ ಅವಕಾಶ ಇರುವುದಿಲ್ಲ.
ಎರಡನೇ ಸುತ್ತಿನ ಕೌನ್ಸೆಲಿಂಗ್ ಮುಕ್ತಾಯಗೊಂಡ ಬಳಿಕವೂ 1,094 ಡಿಎಂ/ಎಂಸಿಎಚ್ (DM/MCh) ಮತ್ತು 763 ಡಿಎಸ್ಟಿ-ಎಸ್ಎಸ್ (DNB-SS) ಸೇರಿದಂತೆ ಒಟ್ಟು 1,857 ಸೂಪರ್ ಸ್ಪೆಷಾಲಿಟಿ ಸೀಟುಗಳು ಖಾಲಿ ಉಳಿದಿದ್ದವು. ಇವುಗಳಲ್ಲಿ ಹೆಚ್ಚಿನ ಸೀಟುಗಳು ಅತ್ಯುನ್ನತ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ವಿಭಾಗಗಳಿಗೆ ಸಂಬಂಧಿಸಿದ್ದಾಗಿವೆ.


Spread the love
Share:

administrator

Leave a Reply

Your email address will not be published. Required fields are marked *