Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಚಾಮರಾಜನಗರ: ಜಮೀನಿನಲ್ಲಿ ಹುಲ್ಲು ಕೊಯ್ಯುತ್ತಿದ್ದ ರೈತನ ಮೇಲೆ ಹುಲಿ ದಾಳಿ – ಬಸವಣ್ಣ ಸ್ಥಳದಲ್ಲೇ ಸಾ*ವು!

Spread the love

ಚಾಮರಾಜನಗರ, ಸೆಪ್ಟೆಂಬರ್ 15: ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ಜಮೀನಿನಲ್ಲಿ ರೈತರೊಬ್ಬರು ಹುಲ್ಲು ಕೊಯ್ಯುವಾಗ ಹುಲಿಯೊಂದು ಏಕಾಏಕಿ ಹುಲಿ ಮಾಡಿ ಕೊಂದು ಹಾಕಿರುವ ಘಟನೆ ನಡೆದಿದೆ.ಮೃತರನ್ನು 60 ವರ್ಷದ ಬಸವಣ್ಣ ಎಂದು ಗುರುತಿಸಲಾಗಿದೆ. ಇನ್ನು ಹುಲಿ ಬಸವಣ್ಣನವರ ದೇಹದ ಕಾಲು ಭಾಗವನ್ನು ಹುಲಿ ತಿಂದು ಹಾಕಿದೆ. ಹುಲಿ ದಾಳಿಯಿಂದ ಬಡಗಲಪುರ ಸುತ್ತಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಹುಲ್ಲು ಕೊಯ್ಯಲು ಜಮೀನಿಗೆ ತೆರಳಿದ್ದ ಬಸವಣ್ಣ ಕತ್ತಲಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕುತ್ತಾ ಜಮೀನಿಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಕುಟುಂಬಸ್ಥರು ಜಮೀನಿನಲ್ಲೇ ಶವದ ಬಳಿ ಕುಳಿತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದಾರೆ. ಬಿಳಿಗಿರಿ ಹುಲಿ ಸಂರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ. ಆತಂಕದಲ್ಲಿಯೇ ಮೃತನ ಕುಟುಂಬದವರು ಮತ್ತು ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *