Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಭಾರತದ ಮೊದಲ ಸ್ವದೇಶಿ ಬುಲೆಟ್‌ ರೈಲು: 2027ರ ಮೇ ಅಥವಾ ಜೂನ್‌ನಲ್ಲಿ ಹಳಿಗಿಳಿಸಿ ಪ್ರಾಯೋಗಿಕ ಸಂಚಾರ – ಸಚಿವ ಅಶ್ವಿನಿ ವೈಷ್ಣವ್!

Spread the love

ವಡೋದರ: ಭಾರತದಲ್ಲೇ ನಿರ್ಮಾಣವಾಗುತ್ತಿರುವ ದೇಶದ ಮೊದಲ ಸ್ವದೇಶಿ ಬುಲೆಟ್‌ ರೈಲು 2027ರ ಮೇ ಅಥವಾ ಜೂನ್‌ನಲ್ಲಿ ಹಳಿಗಿಳಿಸಿ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ

ವಡೋದರದಲ್ಲಿ ನಡೆದ ‘ನಮೋ ಫಾರ್ ವಿಕಸಿತ ಭಾರತ’ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು. ಬುಲೆಟ್‌ ರೈಲಿನ ಮೊದಲ ಬಾಡಿ ಫ್ರೇಮ್‌ ಸಿದ್ಧಗೊಂಡಿದ್ದು, ಅದನ್ನು ‘ಸ್ಕ್ವೀಸ್‌ ಟೆಸ್ಟ್‌’ಗೆ ಕಳುಹಿಸಲಾಗಿದೆ. ರೈಲಿನ ದೇಹದ ಚೌಕಟ್ಟು ನಿಗದಿತ ಒತ್ತಡ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆಯೇ? ಎಂಬುದನ್ನ ಪರೀಕ್ಷೆಯಲ್ಲಿ ಪರಿಶೀಲಿಸಲಾಗುತ್ತದೆ. ಪರೀಕ್ಷಾ ಹಂತ ಪೂರ್ಣಗೊಂಡ ಬಳಿಕ ರೈಲನ್ನ ಹಳಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.ಮುಂದಿನ ವರ್ಷ ಮೇ ಅಥವಾ ಜೂನ್‌ ಹಳಿ ಪರೀಕ್ಷೆ ಆರಂಭವಾದ ಬಳಿಕ 2 ರಿಂದ 4 ತಿಂಗಳ ಕಾಲ ಪರೀಕ್ಷೆ ನಡೆಸಲಾಗುತ್ತದೆ. ಆ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬುಲೆಟ್‌ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ ಎಂದು ವೈಷ್ಣವ್ ಹೇಳಿದ್ದಾರೆ.ಬುಲೆಟ್‌ ರೈಲು ಸೇವೆ ಆರಂಭವಾದ ಬಳಿಕ ವಡೋದರದಿಂದ ಮುಂಬೈಗೆ ಪ್ರಯಾಣಿಸಲು ಸುಮಾರು 1 ಗಂಟೆ 30 ನಿಮಿಷ ಮಾತ್ರ ಬೇಕಾಗಲಿದೆ. ಈ ಯೋಜನೆ ‘ಆತ್ಮನಿರ್ಭರ ಭಾರತ’ದ ದೃಷ್ಟಿಕೋನಕ್ಕೆ ಅನುಗುಣವಾಗಿ ದೇಶದಲ್ಲೇ ಹೈಸ್ಪೀಡ್‌ ರೈಲು ನಿರ್ಮಾಣ ಸಾಮರ್ಥ್ಯ ಅಭಿವೃದ್ಧಿಪಡಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *