Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಾಟ್ನಾ: ಅರ್ರಾ ನಿಲ್ದಾಣದಿಂದ ಹೊರಟ ಕೆಲವೇ ನಿಮಿಷಗಳಲ್ಲಿ ಮಹಾನಂದ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದ ಘಟನೆ; ತಪ್ಪಿದ ಭಾರಿ ಅನಾಹುತ!

Spread the love

ಪಾಟ್ನಾ: ಬಿಹಾರದ ಅರ್ರಾ ರೈಲು ನಿಲ್ದಾಣದಿಂದ ರವಿವಾರ ಬೆಳಗ್ಗೆ ಹೊರಟ ಕೆಲವೇ ನಿಮಿಷಗಳಲ್ಲಿ ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲಿನ ಎರಡು ಚಕ್ರಗಳು ಹಳಿ ತಪ್ಪಿದೆ. ಆದರೆ, ಈ ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ದಿಲ್ಲಿ ಕಡೆಗೆ ಪ್ರಯಾಣಿಸುತ್ತಿದ್ದ ರೈಲು ಸಂಖ್ಯೆ 15483 ಬೆಳಗ್ಗೆ ಸುಮಾರು 4.10ಕ್ಕೆ ಫ್ಲಾಟ್‌ಫಾರ್ಮ್ ಸಂಖ್ಯೆ 2ರಿಂದ ಹೊರಟಿತು. ಅದು ಪ್ಲಾಟ್‌ಫಾರ್ಮ್‌ನಿಂದ ಮುಂದೆ ಸಾಗುತ್ತಿದ್ದಂತೆ ಪ್ರಯಾಣಿಕರಿಗೆ ಭಾರಿ ಶಬ್ದ ಕೇಳಿಸಿತು ಮತ್ತು ಬಲವಾದ ಆಘಾತದ ಅನುಭವವಾಯಿತು.
ಈ ಸಂದರ್ಭ ಹಲವು ಪ್ರಯಾಣಿಕರು ನಿದ್ರೆಯಲ್ಲಿದ್ದರು. ಬೋಗಿಗಳಲ್ಲಿ ಕೆಲ ಕಾಲ ಆತಂಕ ಆವರಿಸಿತು. ನಂತರ ರೈಲಿನ ಎರಡು ಚಕ್ರಗಳು ಹಳಿಯಿಂದ ಕೆಳಗಿಳಿದಿರುವುದು ತಿಳಿದು ಬಂತು.
ರೈಲು ನಿಯಂತ್ರಿತ ವೇಗದಲ್ಲಿ ಚಲಿಸುತ್ತಿದ್ದುದು ದೊಡ್ಡ ಅಪಘಾತವನ್ನು ತಡೆಯಲು ಸಹಾಯ ಮಾಡಿತು ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ರೈಲು ಹಳಿ ತಪ್ಪಲು ಕಾರಣ ಏನು ಎಂಬುದು ತತ್‌ಕ್ಷಣ ತಿಳಿದು ಬಂದಿಲ್ಲ. ಹಳಿಯಲ್ಲಿನ ತಾಂತ್ರಿಕ ಸಮಸ್ಯೆ ರೈಲು ಅಥವಾ ಇನ್ನು ಯಾವುದೇ ಕಾರಣದಿಂದ ಈ ಘಟನೆ ನಡೆದಿದೆಯೇ ಎಂಬುದನ್ನು ರೈಲ್ವೆ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *