Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬ್ಯೂನಸ್‌ಐರಿಸ್: ಮೆಸ್ಸಿ ನಿವೃತ್ತಿ ಬಳಿಕ ಅರ್ಜೆಂಟೀನಾದ ಪ್ರಸಿದ್ಧ 10ನೇ ನಂಬರ್ ಜರ್ಸಿ ಭವಿಷ್ಯದ ಬಗ್ಗೆ ಗೊಂದಲ; ಫಿಫಾ ನಿಯಮ ಅಡ್ಡಿ!

Spread the love

ಬ್ಯೂನಸ್‌ಐರಿಸ್: ಅರ್ಜೆಂಟೀನದ ಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ ಬಳಿಕ ಅವರ ಪ್ರಸಿದ್ಧ 10ನೇ ನಂಬರ್ ಜರ್ಸಿ ಈಗ ಖಾಲಿಯಾಗಿದೆ. ಈ ಹಿಂದೆ ಈ ಸಂಖ್ಯೆಯ ಜರ್ಸಿಯನ್ನು ಡೀಗೊ ಮರಡೋನ ಕೂಡ ಧರಿಸಿದ್ದರು.
ಮೆಸ್ಸಿ ನಿರ್ಗಮನದ ನಂತರ ಈ ಜರ್ಸಿ ಸಂಖ್ಯೆಯನ್ನು ಮುಂದೆ ಯಾರಿಗೂ ನೀಡಬಾರದು ಎಂಬ ಕೂಗು ಜೋರಾಗಿದೆ. ಆದರೆ ಫಿಫಾದ ನಿಯಮವೊಂದು ಈ ನಿಟ್ಟಿನಲ್ಲಿ ಅಡ್ಡಿಯಾಗಿದೆ.
ಅಂತರ್‌ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ರಾಷ್ಟ್ರೀಯ ತಂಡಗಳು ಆಟಗಾರರಿಗೆ ಕ್ರಮಾಗತ ಸಂಖ್ಯೆಗಳನ್ನು ನೀಡಬೇಕು ಹಾಗೂ ಯಾವುದೇ ಸಂಖ್ಯೆಯನ್ನು ಬಿಡಬಾರದು ಎಂಬುದಾಗಿ ಫಿಫಾ ನಿಯಮ ಹೇಳುತ್ತದೆ.

ಫಿಫಾ ವಿಶ್ವಕಪ್ 2026ರಲ್ಲಿ ಪ್ರತಿಯೊಂದು ತಂಡ 26 ಆಟಗಾರರ ಬಳಗವನ್ನು ಹೊಂದಿತ್ತು ಹಾಗೂ ಆಟಗಾರರು 1ರಿಂದ 26ರವರೆಗಿನ ಜರ್ಸಿ ಸಂಖ್ಯೆಗಳನ್ನು ಮಾತ್ರ ಬಳಸಲು ಅವಕಾಶವಿತ್ತು. ಆದರೆ, ಈ ನಿಯಮವು ಅಧಿಕೃತ ಫಿಫಾ ಪಂದ್ಯಾವಳಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಹಾಗಾಗಿ, ಅರ್ಜೆಂಟೀನ ತನ್ನ ಸೌಹಾರ್ದ ಪಂದ್ಯಗಳಲ್ಲಿ 10ನೇ ನಂಬರ್ ಜರ್ಸಿಯನ್ನು ಖಾಲಿ ಬಿಡಲು ನಿರ್ಧರಿಸಬಹುದು. ಆದರೆ, 2028ರ ಕೋಪಾ ಅಮೆರಿಕಾ ಅಥವಾ 2030ರ ಫಿಫಾ ವಿಶ್ವಕಪ್‌ನಂತಹ ಅಧಿಕೃತ ಪಂದ್ಯಾವಳಿಗಳಲ್ಲಿ ಅರ್ಜೆಂಟೀನ ಹೀಗೆ ಮಾಡಲು ಫಿಫಾ ಅನುಮತಿಸುವ ಸಾಧ್ಯತೆ ತೀರಾ ಕಡಿಮೆ.

ವಿಶೇಷವೆಂದರೆ, ಮರಡೋನ ನಿವೃತ್ತಿ ಘೋಷಿಸಿದಾಗಲೂ ಅರ್ಜೆಂಟೀನ ಇಂಥದ್ದೇ ಪರಿಸ್ಥಿತಿಯನ್ನು ಎದುರಿಸಿತ್ತು. 2001ರಲ್ಲಿ ಅಂದಿನ ಅರ್ಜೆಂಟೀನ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಜೂಲಿಯೊ ಗ್ರಂಡೋನಾ ಈ ದಂತಕತೆ ಆಟಗಾರನ ಗೌರವಾರ್ಥವಾಗಿ 10ನೇ ನಂಬರ್ ಜರ್ಸಿಯನ್ನು ನಿವೃತ್ತಿಗೊಳಿಸಲು ಒಪ್ಪಿಕೊಂಡಿದ್ದರು. ಆದರೆ ಫಿಫಾ ಅದಕ್ಕೆ ಅವಕಾಶ ನೀಡಲಿಲ್ಲ. ಅಂತಿಮವಾಗಿ 2002ರ ವಿಶ್ವಕಪ್‌ನಲ್ಲಿ ಏರಿಯಲ್ ಒರ್ಟೆಗಾ ಆ ಪ್ರತಿಷ್ಠಿತ ಜರ್ಸಿಯನ್ನು ಧರಿಸಿ ಕಣಕ್ಕಿಳಿದಿದ್ದರು.
ಪಂದ್ಯದ ನಡುವೆ ಮೆಸ್ಸಿಗೆ ಗೌರವ
ಇತ್ತೀಚೆಗೆ ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿರುವ ಅರ್ಜೆಂಟೀನದ ತಾರೆ ಲಿಯೊನೆಲ್ ಮೆಸ್ಸಿಗೆ ಗೌರವ ಸಲ್ಲಿಸುವುದಕ್ಕಾಗಿ ಕೋಪ ಅರ್ಜೆಂಟೀನ ಪಂದ್ಯಾವಳಿಯ ವೆಲೆಝ್ ಸಾರ್ಸ್‌ ಫೀಲ್ಡ್ ಮತ್ತು ಬೊಕ ಜೂನಿಯರ್ಸ್‌ ತಂಡಗಳ ನಡುವಿನ ಪಂದ್ಯವನ್ನು 10ನೇ ನಿಮಿಷದಲ್ಲಿ ಕೊಂಚ ಸಮಯ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಟಾಡಿಯೊ ಮರಿಯೊ ಆಲ್ಬರ್ಟೊ ಕೆಂಪಸ್ ಸ್ಟೇಡಿಯಮ್‌ನಲ್ಲಿದ್ದ ಜನರು ಎದ್ದು ನಿಂತು ತಮ್ಮ ದೇಶದ ಫುಟ್ಬಾಲ್ ತಾರೆಗೆ ಚಪ್ಪಾಳೆ ತಟ್ಟಿ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಮೆಸ್ಸಿಯ ಮಾಜಿ ಅಂತರ್‌ರಾಷ್ಟ್ರೀಯ ಸಹ ಆಟಗಾರರಾದ ಲಿಯಾಂಡೊ ಪರೆಡಿಸ್ ಮತ್ತು ಮ್ಯಾನುಯೆಲ್ ಲಂಝಿನಿ ಉಪಸ್ಥಿತರಿದ್ದರು.
ಈ ಪಂದ್ಯವು ನಿಯಮಿತ ಅವಧಿಯಲ್ಲಿ ಗೋಲುರಹಿತವಾಗಿ ಮುಕ್ತಾಯಗೊಂಡಿತು. ಬಳಿಕ ನಡೆದ ಶೂಟೌಟ್‌ನಲ್ಲಿ ಬೊಕ ತಂಡವು 4-3ರಿಂದ ಜಯ ಗಳಿಸಿತು.


Spread the love
Share:

administrator

Leave a Reply

Your email address will not be published. Required fields are marked *