Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಧರ್ಮಸ್ಥಳ: ಪೊಸೊಳಿಕೆಯಲ್ಲಿ ಬೆಂಕಿ ಅವಘಡ; ಸಂಪೂರ್ಣ ಸುಟ್ಟು ಕರಕಲಾದ ಎರಡು ರಬ್ಬರ್ ಸ್ಮೋಕ್ ಹೌಸ್ ಕಟ್ಟಡಗಳು

Spread the love

ಬೆಳ್ತಂಗಡಿ: ಎರಡು ರಬ್ಬರ್ ಸ್ಮೋಕ್ ಹೌಸ್ ಕಟ್ಟಡವು ಬೆಂಕಿ ಅವಘಡದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸುಮಾರು 5-6 ಲಕ್ಷ ರೂಪಾಯಿವರೆಗೆ ನಷ್ಟ ಉಂಟಾದ ಘಟನೆ ಧರ್ಮಸ್ಥಳ ಗ್ರಾಮದ ಪೊಸೊಳಿಕೆ ಎಂಬಲ್ಲಿ ಬುಧವಾರ ಮುಂಜಾನೆ ಸಂಭವಿಸಿದೆ.

ಸ್ಥಳೀಯ ನಿವಾಸಿ ಪಿ.ಕೆ. ಜೋಬ್ ಅವರಿಗೆ ಸೇರಿದ ಈ ಎರಡು ಸ್ಮೋಕ್ ಹೌಸ್ ಗಳಲ್ಲಿ ಮುಂಜಾನೆ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯನ್ನು ನಿಯಂತ್ರಿಸಲು ಪ್ರಯತ್ನ ನಡೆಸಿದರೂ, ಎರಡೂ ಕಟ್ಟಡಗಳು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿವೆ ಎಂದು ತಿಳಿದುಬಂದಿದೆ.ಈ ಎರಡು ಸ್ಮೋಕ್ ಹೌಸ್ ಗಳು ಮನೆಯ ಸಮೀಪದಲ್ಲೇ ಇದ್ದವು.ಆಕಸ್ಮಿಕವಾಗಿ ಸಂಭವಿಸಿದ ಬೆಂಕಿಯಿಂದ ಎರಡೂ ಕಟ್ಟಡಗಳಿಗೆ ವ್ಯಾಪಕ ಹಾನಿಯಾಗಿದ್ದು, ಒಣಗಿಸಲು ಇರಿಸಲಾಗಿದ್ದ ರಬ್ಬರ್ ಶೀಟ್‌ಗಳು ಹಾಗೂ ಕಟ್ಟಡಗಳಲ್ಲಿ ಸಂಗ್ರಹಿಸಿಟ್ಟಿದ್ದ ಮರದ ದಿಮ್ಮಿಗಳು ಸಂಪೂರ್ಣ ಸುಟ್ಟುಹೋಗಿವೆ.ಘಟನೆಯಿಂದ ಸುಮಾರು 5-6 ಲಕ್ಷ ರೂಪಾಯಿವರೆಗೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *