ಕಲಬುರಗಿ: ಹೆಂಡತಿ ಮೇಲಿನ ಸಿಟ್ಟಿಗೆ 4 ವರ್ಷದ ಮಗುವನ್ನು ಜಲಾಶಯಕ್ಕೆ ಎಸೆದು ಹ*ತ್ಯೆ ಮಾಡಿದ ಕ್ರೂರಿ ತಂದೆ!

ಕಲಬುರಗಿ: ಹೆಂಡತಿ (Wife) ಮೇಲಿನ ಸಿಟ್ಟಿಗೆ ವ್ಯಕ್ತಿಯೊಬ್ಬ 4 ವರ್ಷದ ಮಗುವನ್ನು ನದಿಗೆ ಎಸೆದು ಹತ್ಯೆ ಮಾಡಿದ ಘಟನೆ ಚಿಂಚೋಳಿ ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ನಡೆದಿದೆ.

ಸೋಮರಾವ್ ಹೂಗಾರ್ ಮಗುವನ್ನು ಹತ್ಯೆಗೈದ ಆರೋಪಿಯಾಗಿದ್ದಾನೆ. ಈತ ಪತ್ನಿ ಕಲ್ಪನಾ ಜೊತೆ ಗಲಾಟೆ ಮಾಡಿಕೊಂಡಿದ್ದ. ಇದೇ ಸಿಟ್ಟಲ್ಲಿ ಕೆಲಕಾಲ ಮಗು ಗುಂಡೇಶ್‌ನನ್ನು ಎತ್ತಿಕೊಂಡು ಆಟವಾಡಿಸುತ್ತಾ ಕರೆದುಕೊಂಡು ಹೋಗಿ ನಾಗರಾಳ ಜಲಾಶಯಕ್ಕೆ ಎಸೆದಿದ್ದಾನೆ.
ಈ ವಿಷಯ ತಿಳಿದ ಬಳಿಕ ಗಂಡನ ವಿರುದ್ಧ ಪತ್ನಿ ಕಲ್ಪನಾ ದೂರು ದಾಖಲಿಸಿದ್ದಾಳೆ. ಬಳಿಕ ಪೊಲೀಸರು ಮಗುವಿನ ಮೃತದೇಹವನ್ನು ಜಲಾಶಯದಿಂದ ಹೊರತೆಗೆದಿದ್ದಾರೆ. ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ