ಬೆಂಗಳೂರು: ಉಡುಪಿ ಮೂಲದ ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದೆ ನಮೃತ ದೇವಾಡಿಗ ಆತ್ಮಹ*ತ್ಯೆ!

ಬೆಂಗಳೂರು : ಉಡುಪಿ ಜಿಲ್ಲೆಯ ನೀಲಾವರ ಮೂಲದ ಯುವ ಸ್ಯಾಕ್ಸೋಫೋನ್ ಕಲಾವಿದೆಯೊಬ್ಬರು ಬೆಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ. ನೀಲಾವರ ನಿವಾಸಿ ನಮೃತ ದೇವಾಡಿಗ ಮೃತಪಟ್ಟ ಯುವತಿ. ಇವರು ಉದಯೋನ್ಮುಖ ಸ್ಯಾಕ್ಸೋಫೋನ್ ಕಲಾವಿದೆಯಾಗಿದ್ದರು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನಮೃತ, ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವರದಿಯಾಗಿದೆ. ತಕ್ಷಣವೇ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರಿಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.