Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ದೆಹಲಿ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್: ಐರ್ಲ್ಯಾಂಡ್ ಆಟಗಾರ್ತಿಯನ್ನು ಮಣಿಸಿ ಶುಭಾರಂಭ ಮಾಡಿದ ಪಿ.ವಿ. ಸಿಂಧು!

Spread the love

ಹೊಸದಿಲ್ಲಿ: ಮಾಜಿ ಚಾಂಪಿಯನ್ ಪಿ.ವಿ. ಸಿಂಧು ಸೋಮವಾರ ರಾಷ್ಟ್ರರಾಜಧಾನಿಯ ಇಂದಿರಾ ಗಾಂಧಿ ಒಳಾಂಗಣ ಸ್ಟೇಡಿಯಂನಲ್ಲಿ ನಡೆದ ಆರಂಭಿಕ ಸುತ್ತಿನ ಪಂದ್ಯದಲ್ಲಿ ಅನನುಭವಿ ಐರ್ಲ್ಯಾಂಡ್ ಶಟ್ಲರ್ ಸೋಫಿಯಾ ನೊಲ್ಲೆ ಅವರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿ ಶುಭಾರಂಭ ಮಾಡಿದರು.
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಐದು ಬಾರಿ ಪದಕಗಳನ್ನು ಗೆದ್ದಿರುವ ಸಿಂಧು ಕೇವಲ 29 ನಿಮಿಷಗಳಲ್ಲಿ ಕೊನೆಗೊಂಡಿರುವ ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ವಿಶ್ವ ಚಾಂಪಿಯನ್ಶಿಪ್‌ನಲ್ಲಿ ಮೊದಲ ಬಾರಿ ಆಡಿದ ಸೋಫಿಯಾ ನೊಬ್ಲೆ ಅವರನ್ನು 21-7, 21-11 ಗೇಮ್‌ಗಳ ಅಂತರದಿಂದ ಮಣಿಸಿದರು.

ವಿಶ್ವದ 141ನೇ ರ್ಯಾಂಕಿನ 21ರ ಹರೆಯದ ಸೋಫಿಯಾ ಅವರು 10ನೇ ವಿಶ್ವ ಚಾಂಪಿಯನ್ಶಿಪ್ ಅಭಿಯಾನದಲ್ಲಿ ತೊಡಗಿರುವ ವಿಶ್ವದ ನಂ.9ನೇ ಆಟಗಾರ್ತಿ ಸಿಂಧುಗೆ ಯಾವುದೇ ರೀತಿಯಲ್ಲಿ ಸರಿಸಾಟಿಯಾಗಲಿಲ್ಲ. ಮೊದಲ ಗೇಮ್ನಲ್ಲಿ 8-0 ಮುನ್ನಡೆ ಪಡೆದಿದ್ದ ಸಿಂಧು ಆ ನಂತರ ಹಿಂತಿರುಗಿ ನೋಡಿಲ್ಲ.
ಸೋಫಿಯಾ ನೊಲ್ಲೆ ಎರಡನೇ ಗೇಮ್‌ ನ ಮಧ್ಯಂತರದಲ್ಲಿ ಕೇವಲ ಮೂರು ಪಾಯಿಂಟ್‌ಗಳಿಂದ ಮುನ್ನಡೆ ಸಾಧಿಸಿದ್ದರು. ಆದರೆ 31ರ ವಯಸ್ಸಿನ ಸಿಂಧು ಮುಂದಿನ 13 ಪಾಯಿಂಟ್‌ಗಳ ಪೈಕಿ 10ರಲ್ಲಿ ಜಯ ಸಾಧಿಸಿ ಐರ್ಲ್ಯಾಂಡ್ ಆಟಗಾರ್ತಿಯನ್ನು ಸುಲಭವಾಗಿ ಮಣಿಸಿದರು.

ಸಿಂಧು ಅಂತಿಮ-32ರ ಸುತ್ತಿನಲ್ಲಿ ಕೆನಡಾದ ವಿಶ್ವದ ನಂ.49ನೇ ಆಟಗಾರ್ತಿ ವೆನ್ ಯು ಝಾಂಗ್ರನ್ನು ಎದುರಿಸಲಿದ್ದಾರೆ.
ಟ್ರೇಸಾ, ಗಾಯತ್ರಿ ಗೆಲುವಿನಾರಂಭ: ಇದಕ್ಕೂ ಮೊದಲು ಮಹಿಳೆಯರ ಡಬಲ್ಸ್ ಜೋಡಿ ಟ್ರೇಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಹಾಗೂ ಪುರುಷರ ಡಬಲ್ಸ್ ಜೊಡಿ ಎಂ.ಆರ್. ಅರ್ಜುನ್ ಹಾಗೂ ಹರಿಹರನ್‌ ದ್ವಿತೀಯ ಸುತ್ತಿಗೆ ತೇರ್ಗಡೆಯಾದರು.
ಟ್ರೇಸಾ-ಗಾಯತ್ರಿ ಸ್ಪೇನ್‌ನ ಪೌಲಾ ಲೊಪೆಝ್ ಹಾಗೂ ಲುಸಿಯಾ ರೊಡ್ರಿಗಝನ್ನು 21-9, 21-13 ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಅಂತಿಮ-32ರ ಸುತ್ತಿನಲ್ಲಿ 16ನೇ ಶ್ರೇಯಾಂಕದ ಅಮೆರಿಕದ ಜೋಡಿ ಲೌರೆನ್ ಲ್ಯಾಮ್ ಹಾಗೂ ಅಲಿಸನ್ ಲೀ ಅವರ ಸವಾಲನ್ನು ಎದುರಿಸಲಿದ್ದಾರೆ.
ಐರ್ಲ್ಯಾಂಡ್ ಜೋಡಿ ಸ್ಕಾಟ್ ಗಿಲ್ಡಿಯಾ ಹಾಗೂ ಪೌಲ್ ರೇನಾಲ್ಡ್ ಗಾಯದಿಂದ ಹಿಂದೆ ಸರಿದಾಗ ಅರ್ಜುನ್-ಹರಿಹರನ್ 21-16, 6-4 ಅಂತರದಿಂದ ಮುನ್ನಡೆಯಲ್ಲಿದ್ದರು.
ಅರ್ಜುನ್-ಹರಿಹರನ್ ಮುಂದಿನ ಸುತ್ತಿನಲ್ಲಿ ಕೊರಿಯಾದ 15ನೇ ಶ್ರೇಯಾಂಕದ ಜೋಡಿ ಕಾಂಗ್ ಮಿನ್ ಹಿಯುಕ್ ಹಾಗೂ ಕಿ ಡಾಂಗ್ ಜು ಅವರನ್ನು ಎದುರಿಸಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *