ಪಂಜಾಬ್‌ನಲ್ಲಿ ಡ್ರಗ್ಸ್ ವ್ಯಸನ ಎಂದ ಹರ್ಭಜನ್ ಸಿಂಗ್: ವೈರಲ್ ಆದ ವಿಡಿಯೋ ರಾಜಸ್ಥಾನದ್ದು ಎಂದು ಬಯಲು ಮಾಡಿದ ಪಂಜಾಬ್ ಪೊಲೀಸರು!

ಚಂಡೀಗಢ : ಬಿಜೆಪಿ ರಾಜ್ಯಸಭಾ ಸಂಸದ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಡ್ರಗ್ಸ್ ಪ್ರಭಾವಕ್ಕೆ ಸಂಬಂಧಿಸಿದ ಪಂಜಾಬ್‌ನದ್ದು ಎಂದು ಹೇಳಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ವೊಂದರ ಸತ್ಯಾಸತ್ಯತೆಯನ್ನು ಪಂಜಾಬ್ ಪೊಲೀಸರು ಪರಿಶೀಲಿಸಿದ್ದು, ಈ ವಿಡಿಯೊ ಬಿಜೆಪಿ ಆಡಳಿತವಿರುವ ರಾಜಸ್ಥಾನದ್ದು ಎಂದು ಬಯಲಿಗೆಳೆದಿದ್ದಾರೆ. ಇದರಿಂದ ಪಂಜಾಬ್‌ನ ಆಪ್ ಸರಕಾರವನ್ನು ಹರಿಹಾಯಲು ಹೋಗಿ ಅರ್ಭಜನ್ ಸಿಂಗ್ ಬಿಜೆಪಿಗರಿಗೇ ಮುಜುಗರ ತಂದಿದ್ದಾರೆ.
ಹರ್ಭಜನ್ ಸಿಂಗ್ ಪೋಸ್ಟ್ ನಲ್ಲಿ ಏನಿದೆ?
‘ಝಾಂಬಿ ಡ್ರಗ್’ ಪ್ರಭಾವಕ್ಕೊಳಗಾದಂತೆ ರಸ್ತೆಬದಿಯಲ್ಲಿ ಅಸಹಜವಾಗಿ ವರ್ತಿಸುತ್ತಿರುವ ತಲೆಯ ಮೇಲೆ ಪೇಟ ಧರಿಸಿರುವ ಇಬ್ಬರು ವ್ಯಕ್ತಿಗಳ ವೀಡಿಯೊವನ್ನು ಹರ್ಭಜನ್ ಸಿಂಗ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದರು. ಪಂಜಾಬ್‌ನ ಯುವಕರಲ್ಲಿ ಹೆಚ್ಚುತ್ತಿರುವ ಮಾದಕದ್ರವ್ಯ ಚಟದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ಪಂಜಾಬ್‌ನ ಯುವಕರನ್ನು ರಕ್ಷಿಸಲು ತುರ್ತು ಕ್ರಮಕ್ಕೆ ಆಗ್ರಹಿಸಿದ್ದರು.
“ಪಂಜಾಬ್‌ನ ಪರಿಸ್ಥಿತಿಯನ್ನು ನೋಡಿ ತುಂಬಾ ದುಃಖವಾಗುತ್ತಿದೆ. ಪಂಜಾಬ್ ಮತ್ತು ಅಲ್ಲಿನ ಯುವಕರು ಇದಕ್ಕಿಂತ ಉತ್ತಮವಾದ ಪರಿಸ್ಥಿತಿಗೆ ಅರ್ಹರು. ಈ ಸಮಸ್ಯೆಯನ್ನು ನಿರಾಕರಿಸುವ ಬದಲು ಪ್ರಾಮಾಣಿಕತೆ, ಹೊಣೆಗಾರಿಕೆ ಮತ್ತು ತುರ್ತು ಕ್ರಮದ ಅಗತ್ಯವಿದೆ ಎಂದು ಹೇಳಿದ್ದರು.
ಪೊಲೀಸರಿಂದ ಸ್ಪಷ್ಟನೆ
ಈ ಘಟನೆ ನಡೆದ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿದ್ದಾರೆ. ಬಳಿಕ ಪಂಜಾಬ್ ಪೊಲೀಸರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಈ ವೀಡಿಯೊ ಪಂಜಾಬ್‌ನದ್ದಲ್ಲ, ರಾಜಸ್ಥಾನದ ಶ್ರೀ ಗಂಗಾನಗರದ್ದು ಎಂದು ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಪಂಜಾಬಿ ಆಡಿಯೋ ಇರುವುದರಿಂದ ಮಾತ್ರ ಘಟನೆ ಪಂಜಾಬ್‌ನಲ್ಲಿ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಪೊಲೀಸರಿಂದ ಸ್ಪಷ್ಟನೆ
ಈ ಘಟನೆ ನಡೆದ ಸ್ಥಳದ ಬಗ್ಗೆ ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿದ್ದಾರೆ. ಬಳಿಕ ಪಂಜಾಬ್ ಪೊಲೀಸರು ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ್ದಾರೆ. ಈ ವೀಡಿಯೊ ಪಂಜಾಬ್‌ನದ್ದಲ್ಲ, ರಾಜಸ್ಥಾನದ ಶ್ರೀ ಗಂಗಾನಗರದ್ದು ಎಂದು ಸ್ಪಷ್ಟಪಡಿಸಿದ್ದಾರೆ. ವಿಡಿಯೋದಲ್ಲಿ ಪಂಜಾಬಿ ಆಡಿಯೋ ಇರುವುದರಿಂದ ಮಾತ್ರ ಘಟನೆ ಪಂಜಾಬ್‌ನಲ್ಲಿ ನಡೆದಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಆಪ್ ನಾಯಕರಿಂದ ಆಕ್ರೋಶ
ಪೊಲೀಸರ ಸ್ಪಷ್ಟಿಕರಣದ ಬಳಿಕ ಹರ್ಭಜನ್ ಸಿಂಗ್ ಪೋಸ್ಟ್ ರಾಜಕೀಯ ವಿವಾದಕ್ಕೆ ತಿರುಗಿದೆ. ಮಾದಕ ದ್ರವ್ಯ ಸಮಸ್ಯೆಯ ವಿಚಾರದಲ್ಲಿ ಆಪ್ ಆಡಳಿತದ ಪಂಜಾಬ್ ರಾಜ್ಯಕ್ಕೆ ಕೆಟ್ಟ ಹೆಸರು ತರಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.
ಇಂತಹ ವಿಡಿಯೋವನ್ನು ಹಂಚಿಕೊಳ್ಳುತ್ತಿರುವುದು ಯಾವುದಾದರೂ ಸಂಘಟಿತ ಪ್ರಚಾರದ ಭಾಗವೇ? ಎಂದು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರವಾಲ್ ಪ್ರಶ್ನಿಸಿದ್ದಾರೆ.
ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು, ಪಂಜಾಬ್ ಮತ್ತು ಅಲ್ಲಿನ ಯುವಕರಿಗೆ ಕೆಟ್ಟ ಹೆಸರು ತರಲು ಬಿಜೆಪಿ ನಕಲಿ, ಕಟ್ಟುಕಥೆಯ ಹಾಗೂ ತಿರುಚಿದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದೆ ಎಂದು ಆರೋಪಿಸಿದರು.