Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಉಡುಗೆ ಟ್ರೋಲ್: ಸ್ಪಷ್ಟನೆ ನೀಡಿದ ಕಾಸ್ಟ್ಯೂಮ್ ಡಿಸೈನರ್‌ಗಳು!

Spread the love

ರಾಮಾಯಣ ಚಿತ್ರದ ಟ್ರೈಲರ್‌ನಲ್ಲಿ (Ramayana Film) ಸಾಯಿ ಪಲ್ಲವಿಯ (Sai Pallavi) ಉಡುಗೆಗೆ ಸೋಷಿಯಲ್‌ ಮೀಡಿಯಾದಲ್ಲಿ (Social Media) ಬಾರೀ ಟ್ರೋಲ್‌ ಕೇಳಿಬರುತ್ತಿದ್ದು, ಈ ಕುರಿತು ಸ್ವತಃ ಸಿನಿಮಾದ ಕಾಸ್ಟ್ಯೂಮ್‌ ಡಿಸೈನರ್‌ಗಳಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ.

ಟ್ರೈಲರ್‌ ಬಿಡುಗಡೆಯಾದ ಬಳಿಕ ಸಾಯಿ ಪಲ್ಲವಿ ಮತ್ತು ಲಾರಾ ದತ್ತ ಅವರ ಪಾತ್ರಗಳ ಉಡುಗೆ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ವಿಶೇಷವಾಗಿ ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಧರಿಸಿರುವ ಉಡುಗೆ ಆಧುನಿಕ ಶೈಲಿಯಲ್ಲಿದೆ ಎಂದು ಹಲವರು ಟೀಕೆ ಮಾಡಿದ್ದರು. ಕೆಲವರು ಈ ಲುಕ್ ಪೌರಾಣಿಕ ಪಾತ್ರಕ್ಕೆ ಹೊಂದಿಕೆಯಾಗಿಲ್ಲ ಎಂದೂ ಕಾಮೆಂಟ್ ಮಾಡಿದ್ದರು.

ಇದೀಗ ಈ ಟೀಕೆಗಳಿಗೆ ಚಿತ್ರದ ಕಾಸ್ಟ್ಯೂಮ್ ಡಿಸೈನರ್‌ಗಳಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಸ್ಪಷ್ಟನೆ ನೀಡಿದ್ದಾರೆ. ಈ ರೀತಿಯ ಪ್ರತಿಕ್ರಿಯೆಗಳು ಬರುತ್ತವೆ ಎಂಬುದು ಮೊದಲೇ ಗೊತ್ತಿತ್ತು. ಆದರೆ, ನಾವು ಪಾರಂಪರ್ಯತೆಗೆ ಧಕ್ಕೆ ಬಾರದಂತೆ ಸಾಕಷ್ಟು ಅಧ್ಯಯನ ಮಾಡಿ ಉಡುಗೆಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದು ಹೇಳಿದ್ದಾರೆ.

ಸೀತೆಯ ಉಡುಗೆ ಬಗ್ಗೆ ಮಾತನಾಡಿದ ರಿಂಪಲ್, ಪುರಾಣಗಳಲ್ಲಿ ಇರುವ ಚಿತ್ರಗಳನ್ನು ಮಾತ್ರ ನೋಡಲಿಲ್ಲ. ನಾನು ಪೂಜಿಸುವ ಸೀತಾ ದೇವಿಯನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಈ ವಿನ್ಯಾಸ ಮಾಡಿದ್ದೇನೆ. ಹೊಸತನ ತರಬೇಕು ಎನ್ನುವ ಉದ್ದೇಶದಿಂದಲೇ ಈ ಲುಕ್ ರೂಪಿಸಿದ್ದೇವೆʼ ಎಂದು ಹೇಳಿದರು. ಸಂಶೋಧನೆಯೇ ನಮ್ಮ ಕೆಲಸದ ಅಡಿಪಾಯ. ಆದರೆ, ಅದರ ಜೊತೆ ಕಲಾತ್ಮಕ ದೃಷ್ಟಿಕೋನವೂ ಮುಖ್ಯ. ರಾಮಾಯಣವನ್ನು ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ರೀತಿಯಲ್ಲಿ ಚಿತ್ರಿಸಲಾಗಿದೆ. ಇದು ನಮ್ಮ ದೃಷ್ಟಿಕೋನದ ರಾಮಾಯಣ ಎಂದು ವಿವರಿಸಿದರು


Spread the love
Share:

administrator

Leave a Reply

Your email address will not be published. Required fields are marked *