ಶಿವಮೊಗ್ಗ: ದೇವಸ್ಥಾನದ ಲಿಫ್ಟ್ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ 80 ವರ್ಷದ ನಿವೃತ್ತ ಇಂಜಿನಿಯರ್ ಸಾ*ವು!

ಶಿವಮೊಗ್: ನಗರದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್ನಲ್ಲಿ ಸಿಲುಕಿ ಅಸ್ವಸ್ಥಗೊಂಡಿದ್ದ ನಿವೃತ್ತ ಇಂಜಿನಿಯರ್ ಸಾವನ್ನಪ್ಪಿದ್ದಾರೆ.

ಕುಮಾರಸ್ವಾಮಿ (80) ಸಾವಿಗೀಡಾದ ನಿವೃತ್ತ ಇಂಜಿನಿಯರ್. ಭಾನುವಾರ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ. ಲಿಫ್ಟ್ನಲ್ಲಿ ಮೇಲೆ ತೆರಳಲು ಬಟನ್ ಒತ್ತಿ ಒಳಹೋದಾಗ, ಮೇಲಿಂದ ಬಂದ ಲಿಫ್ಟ್ನಲ್ಲಿ ಅವರು ಸಿಲಿಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಅವರನ್ನು ರಕ್ಷಿಸಿದ್ದರು.
ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ. ಜಯನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗದೆ.