ಬಿಜೆಪಿಬಿಜೆಪಿ ಸಂಸದನ ಪುತ್ರನಿಂದ ವೇಷಮರೆಸಿ ಪ್ರತಿಭಟನೆ: ವಿಡಿಯೋ ವೈರಲ್ ಸಂಸದನ ಪುತ್ರನಿಂದ ವೇಷಮರೆಸಿ ಪ್ರತಿಭಟನೆ: ವಿಡಿಯೋ ವೈರಲ್

ಹೊಸದಿಲ್ಲಿ: ಸಿಜೆಪಿ (CJP) ನೇತೃತ್ವದಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಬ್ಬ ತಾನು ದಿಲ್ಲಿಯ ಬಿಜೆಪಿ ರಾಜ್ಯಸಭಾ ಸಂಸದರ ಪುತ್ರ ಎಂದು ಹೇಳಿಕೊಂಡು, ತಂದೆಯ ರಾಜಕೀಯ ಗುರುತಿನ ಆಧಾರದ ಮೇಲೆ ತನ್ನನ್ನು ಟ್ರೋಲ್ ಮಾಡಬಾರದು ಎಂದು ಸಾರ್ವಜನಿಕರಿಗೆ ಮನವಿ ಮಾಡಿದ್ದಾನೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರತಿಷ್ಠಿತ ರಾಷ್ಟ್ರೀಯ ಮಾಧ್ಯಮಗಳು ವೀಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಬಳಸಿಕೊಂಡಿವೆ.
ಹುಡುಗಿಯ ಉಡುಪಿನಲ್ಲಿ ಮುಖವನ್ನು ಸಂಪೂರ್ಣ ಮರೆಮಾಚಿ ಕಾಣಿಸಿಕೊಂಡಿರುವ ಆತ, ತಾನು ಎರಡನೇ ಹಂತದ ಟಿಬಿ ರೋಗಿಯಾಗಿದ್ದು, ಈ ಹಿಂದೆ ಪೊಲೀಸರು ತನ್ನ ಮೇಲೆ ಬಲಪ್ರಯೋಗ ಮಾಡಿದ್ದಾರೆ. ಹುಡುಗಿಯರಿಗೆ ಕಡಿಮೆ ಹೊಡೆಯುತ್ತಾರೆ ಅನ್ನುವ ಕಾರಣಕ್ಕೆ ನಾನು ಈ ವೇಷ ಧರಿಸಿ ಬಂದಿರುವುದಾಗಿ ಆತ ಹೇಳಿಕೊಂಡಿದ್ದಾನೆ.”ನನ್ನ ತಂದೆ ಬಿಜೆಪಿಯ ರಾಜ್ಯಸಭಾ ಸಂಸದರು. ಅವರು ಶಿಕ್ಷಣ ಸಂಬಂಧಿ ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಯಾವುದೇ ಪ್ರತಿಭಟನೆಯಲ್ಲಿ ಇಷ್ಟು ಕೆಟ್ಟ ಪರಿಸ್ಥಿತಿಯನ್ನು ತಾವು ಎಂದಿಗೂ ನೋಡಿಲ್ಲ ಎಂದು ನನ್ನ ತಂದೆ ಹೇಳಿದ್ದಾರೆ. ಅವರು ಈಗಲೂ ನಮ್ಮೊಂದಿಗೆ ಸೇರಲು ಬಯಸಿದರೂ ಕೆಲವು ನಿರ್ಬಂಧಗಳಿಂದ ಅದು ಸಾಧ್ಯವಾಗುತ್ತಿಲ್ಲ. ನಮ್ಮ ಮನೆಯ ಹೊರಗೆ ಬ್ಯಾರಿಕೇಡ್ ಗಳನ್ನು ಹಾಕಲಾಗಿದ್ದು, ಪ್ರತಿಭಟನೆಗಳು ನಡೆಯುತ್ತಿವೆ” ಎಂದು ಹೇಳಿದ್ದಾನೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದರಿಂದಲೇ ಸಮಸ್ಯೆ ಬಗೆಹರಿಯುವುದಿಲ್ಲ. ಈ ವಿಚಾರವು ಒಬ್ಬ ಸಚಿವರ ಮಟ್ಟವನ್ನು ಮೀರಿದ, ಹೆಚ್ಚು ಆಳವಾದ ಸಮಸ್ಯೆಯಾಗಿದೆ ಎಂದು ಆತ ಅಭಿಪ್ರಾಯಪಟ್ಟಿದ್ದಾನೆ.ರಾಮ್ಯಾಸ್ ಕಾಲೇಜಿನ ವಿದ್ಯಾರ್ಥಿಯಾಗಿರುವ ತಾನು ಕಾಲೇಜಿಗೆ ಸೇರುವುದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದರೂ, ತನ್ನ ತಂದೆ ಬಿಜೆಪಿಯಲ್ಲಿದ್ದಾರೆ ಎಂಬ ಕಾರಣಕ್ಕೆ ಸಹಪಾಠಿಗಳಿಂದ ನಿರಂತರ ಟ್ರೋಲಿಂಗ್ ಮತ್ತು ಸಾಮಾಜಿಕ ಬಹಿಷ್ಕಾರವನ್ನು ಎದುರಿಸಬೇಕಾಯಿತು ಎಂದು ಆತ ಹೇಳಿಕೊಂಡಿದ್ದಾನೆ.
“ಯಾರಾದರೂ ತಪ್ಪು ಮಾಡಿದ್ದಾರೆ ಎಂದು ನೀವು ಭಾವಿಸಿದರೆ, ಅದರ ಹೊಣೆಯನ್ನು ಅವರ ಮಕ್ಕಳ ಮೇಲೆ ಹಾಕಬೇಡಿ. ನನ್ನ ತಂದೆಯ ರಾಜಕೀಯ ನಿಲುವಿಗಾಗಿ ನನ್ನನ್ನು ಗುರಿಯಾಗಿಸಬೇಡಿ” ಎಂದು ಆತ ಮನವಿ ಮಾಡಿದ್ದಾನೆ.
ತಾನು ಅಸ್ತಮಾ ಮತ್ತು ಎರಡನೇ ಹಂತದ ಕ್ಷಯರೋಗದಿಂದ (ಟಿಬಿ) ಬಳಲುತ್ತಿದ್ದರೂ, ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ.
ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಆತ ಹೇಳಿದ್ದಾನೆ.ಕಳೆದ ಪ್ರತಿಭಟನೆಯ ವೇಳೆ ಪೊಲೀಸರು ತನ್ನ ಮೇಲೂ ಬಲಪ್ರಯೋಗ ನಡೆಸಿದ್ದರು. ಈ ಬಾರಿ ಮಹಿಳೆಯರ ಮೇಲೆ ಕಡಿಮೆ ಬಲಪ್ರಯೋಗ ಮಾಡಲಾಗುತ್ತಿದೆ ಎಂಬ ಕಾರಣದಿಂದ, ಪೊಲೀಸರು ತನ್ನನ್ನು ಹುಡುಗಿ ಎಂದು ಭಾವಿಸಿ ಕಡಿಮೆ ಹಲ್ಲೆ ನಡೆಸಬಹುದು ಎಂಬ ನಿರೀಕ್ಷೆಯಲ್ಲಿ ಈ ರೀತಿಯ ಉಡುಗೆ ಧರಿಸಿ ಪ್ರತಿಭಟನೆಗೆ ಬಂದಿದ್ದೇನೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.
