Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಉಕ್ರೇನ್: ರಷ್ಯಾ ಕ್ಷಿಪಣಿ ದಾಳಿಗೆ ಸರಕು ಹಡಗು ಭಸ್ಮ; ಕಾಸರಗೋಡಿನ ಯುವ ನಾವಿಕ ಸೇರಿ 10 ಮಂದಿ ಸಾ*ವು!

Spread the love

ಕಾಸರಗೋಡು:ಉಕ್ರೇನ್‌ನ ದಕ್ಷಿಣ ಬಂದರು ನಗರ ಒಡೆಸಾ ಕರಾವಳಿಯಲ್ಲಿ ಸರಕು ಹಡಗಿನ ಮೇಲೆ ರಷ್ಯಾ ನಡೆಸಿದ ಭೀಕರ ಕ್ಷಿಪಣಿ ದಾಳಿಯಲ್ಲಿ ಕಾಸರಗೋಡಿನ ನಾವಿಕ ಯುವಕ ಸೇರಿದಂತೆ 10 ನಾವಿಕರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತ ಭಾರತೀಯ ನಾವಿಕನನ್ನು ಕಾಸರಗೋಡು ವೆಲ್ಲರಿಕುಂಡು ನಿವಾಸಿ ಅಖಿಲ್ ಜೋಯನ್ (26) ಎಂದು ಗುರುತಿಸಲಾಗಿದೆ.
ಜೋಳದ ಸರಕು ಸಾಗಿಸುತ್ತಿದ್ದ ಟರ್ಕಿಶ್ ಮೂಲದ ಕಂಪನಿಗೆ ಸೇರಿದ ಹಡಗು ‘ಗೋಲ್ಡನ್ ಲಿಯೋ’ ಮೇಲೆ ರಷ್ಯಾ ಕ್ಷಿಪಣಿಗಳನ್ನು ಹಾರಿಸಿತು.
ಉಕ್ರೇನ್‌ನಿಂದ ಜೋಳ ತುಂಬಿಕೊಂಡು ಹೋಗುತ್ತಿದ್ದ ಹಡಗಿನ ಮೇಲೆ ರವಿವಾರ ತಡರಾತ್ರಿ ದಾಳಿ ನಡೆದಿದೆ. ಕ್ಷಿಪಣಿಗಳು ನೇರವಾಗಿ ಹಡಗಿನ ಸ್ಟಾರ್‌ಬೋರ್ಡ್ ಬದಿಗೆ ಬಡಿದು ಇಡೀ ಹಡಗಿನಲ್ಲಿ ಭಾರಿ ಬೆಂಕಿಯನ್ನು ಉಂಟು ಮಾಡಿತು. ಹಡಗಿನಲ್ಲಿದ್ದ ಒಟ್ಟು 17 ನಾವಿಕರಲ್ಲಿ 9 ಸಿಬ್ಬಂದಿ ಮತ್ತು ಉಕ್ರೇನ್‌ನ ಒಬ್ಬ ಪೈಲಟ್ ಸೇರಿದಂತೆ ಒಟ್ಟು 10 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನಿಯನ್ ಕರಾವಳಿ ಕಾವಲು ಪಡೆ ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ಗಂಭೀರವಾಗಿ ಗಾಯಗೊಂಡಿದ್ದ 8 ಮಂದಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿತು.
ಮೃತ ಅಖಿಲ್ ಜೋಯನ್ ಕಳೆದ ಆರು ವರ್ಷಗಳಿಂದ ಮರ್ಚೆಂಟ್ ನೇವಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದುಬಂದಿದೆ.


Spread the love
Share:

administrator

Leave a Reply

Your email address will not be published. Required fields are marked *