Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೊಸ ದಾಖಲೆ: ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯಕ್ಕೆ ಸಜ್ಜಾದ ಲಿಯೊನೆಲ್ ಮೆಸ್ಸಿ!

Spread the love

ಕಾನ್ಸಾಸ್ ಸಿಟಿ: ಲಿಯೊನೆಲ್ ಮೆಸ್ಸಿ ಅಂತರ್ರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಎರಡು ದಶಕಗಳಿಗೂ ಅಧಿಕ ಸಮಯ ಕಳೆದಿದ್ದು, ಬ್ರೆಝಿಲ್‌ನಿಂದ ಫ್ರಾನ್ಸ್ ತನಕ ಪ್ರತೀ ವಿಶ್ವಕಪ್ ವಿಜೇತ ತಂಡವನ್ನು ಎದುರಿಸಿದ್ದಾರೆ. ಆದರೆ ಪ್ರಮುಖ ಎದುರಾಳಿ ಇಂಗ್ಲೆಂಡ್ ತಂಡವನ್ನು ಈ ತನಕ ಎದುರಿಸಿಲ್ಲ.
ಅರ್ಜೆಂಟೀನ ತಂಡವು ಗುರುವಾರ ಜುಲೈ 16ರಂದು ಅಟ್ಲಾಂಟಾದಲ್ಲಿ ನಡೆಯುವ ಎರಡನೇ ಸೆಮಿ ಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ. 39ರ ವಯಸ್ಸಿನ ಮೆಸ್ಸಿ ತನ್ನ ವೃತ್ತಿಜೀವನದಲ್ಲಿ ಬ್ರೆಝಿಲ್, ಉರುಗೈ, ಜರ್ಮನಿ, ಇಟಲಿ, ಸ್ಪೇನ್ ಹಾಗೂ ಫ್ರಾನ್ಸ್ ತಂಡಗಳನ್ನು ಎದುರಿಸಿದ್ದಾರೆ, ಆದರೆ ಇಂಗ್ಲೆಂಡ್ ತಂಡವನ್ನು ಮುಖಾಮುಖಿಯಾಗಿಲ್ಲ.
ಮೆಸ್ಸಿ 2005ರ ನವೆಂಬರ್‌ನಲ್ಲಿ ಜಿನೇವಾದಲ್ಲಿ ಇಂಗ್ಲೆಂಡ್ ವಿರುದ್ಧ ಸೌಹಾರ್ದ ಪಂದ್ಯವನ್ನಾಡುವ ಅವಕಾಶ ಪಡೆದಿದ್ದರು. ಉಭಯ ತಂಡಗಳು ಕೊನೆಯ ಬಾರಿ ಈ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ವೇಯ್ಡ್ ರೂನಿ ಹಾಗೂ ಮೈಕಲ್ ಓವೆನ್ ನೆರವಿನಿಂದ ಇಂಗ್ಲೆಂಡ್ ತಂಡವು ಅರ್ಜೆಂಟೀನವನ್ನು 3-2 ಅಂತರದಿಂದ ಸೋಲಿಸಿತ್ತು. ಅದೇ ವರ್ಷದ ಆರಂಭದಲ್ಲಿ ಹಂಗೇರಿ ತಂಡದ ವಿರುದ್ಧ ತನ್ನ ಚೊಚ್ಚಲ ಅಂತರ್ರಾಷ್ಟ್ರೀಯ ಪಂದ್ಯವನ್ನಾಡಿದ್ದ ಮೆಸ್ಸಿ ಇಂಗ್ಲೆಂಡ್ ವಿರುದ್ಧ ಪಂದ್ಯವನ್ನು ಆಡಿರಲಿಲ್ಲ.
“ಇದು ವಿಶೇಷವಾದುದು, ಏಕೆಂದರೆ, ಇಂಗ್ಲೆಂಡ್ ಶ್ರೇಷ್ಠ ತಂಡ, ಪವರ್ ಹೌಸ್ ಆಗಿದೆ. ಆ ತಂಡದ ವಿರುದ್ಧ ಆಡುವುದು ಯಾವಾಗಲೂ ಖುಷಿಯ ವಿಚಾರ.” ಎಂದು ಸ್ವಿಟ್ಸರ್ಲ್ಯಾಂಡ್ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ಗೆದ್ದ ನಂತರ ಮೆಸ್ಸಿ ಸುದ್ದಿಗಾರರಿಗೆ ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *