ಇರಾನ್ ಮೇಲೆ ಅಮೆರಿಕದ ಮತ್ತೊಂದು ದಾಳಿ: ಅಕ್ಕಾಲಾ ನಗರದ ರೈಲ್ವೆ ಸೇತುವೆ ಗುರಿಯಾಗಿಸಿ ದಾಳಿ!

ಟೆಹ್ರಾನ್: ಈಶಾನ್ಯ ಇರಾನ್ನ ಗೋಲೆಸ್ತಾನ್ ಪ್ರಾಂತ್ಯದ ಅಕ್ಕಾಲಾ ನಗರದ ಹೊರವಲಯದಲ್ಲಿರುವ ಅಕ್ ಟೆಕೆಕ್ ಖಾನ್ ರೈಲ್ವೆ ಸೇತುವೆ ಮೇಲೆ ಅಮೆರಿಕ ಪಡೆಗಳು ವಾಯುದಾಳಿ ನಡೆಸಿವೆ ಎಂದು ಇರಾನ್ನ ಸರ್ಕಾರಿ ಮಾಧ್ಯಮ ಸಂಸ್ಥೆ IRIB ವರದಿ ಮಾಡಿದೆ.
IRIB ವರದಿಯ ಪ್ರಕಾರ, ಸ್ಥಳೀಯ ಕಾಲಮಾನ ಬುಧವಾರ ರಾತ್ರಿ ಸುಮಾರು 1.30 ಗಂಟೆಗೆ (ಭಾರತೀಯ ಕಾಲಮಾನ ಬೆಳಗಿನ ಜಾವ 3:30) ಸೇತುವೆಯನ್ನು ಗುರಿಯಾಗಿಸಿ ಏಳು ಸ್ಫೋಟಕಗಳನ್ನು ಎಸೆಯಲಾಗಿದೆ. ಇರಾನ್ ಈ ಸ್ಫೋಟಕಗಳನ್ನು “ಶತ್ರು ದಾಳಿ” ಎಂದು ಬಣ್ಣಿಸಿದೆ.
ಏಳು ಸ್ಫೋಟಕಗಳಲ್ಲಿ ಎರಡು ರೈಲ್ವೆ ಹಳಿಯ ಮೇಲೆಯೇ ಸ್ಫೋಟಗೊಂಡಿದ್ದು, ಇದರಿಂದ ಹಳಿಗೆ ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
