Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮರ್ಕೊಸ್ ಗಿರೊನ್ ಮಣಿಸಿ ಅಂತಿಮ 16ರ ಸುತ್ತಿಗೆ ಲಗ್ಗೆ; ಮಹಿಳಾ ಸಿಂಗಲ್ಸ್‌ನಲ್ಲಿ ಮ್ಯಾಡಿಸನ್ ಕೀಸ್‌ಗೆ ಜಯ!

Spread the love

ಲಂಡನ್: ಮೂರನೇ ಸುತ್ತಿನ ಪಂದ್ಯದಲ್ಲಿ ಮರ್ಕೊಸ್ ಗಿರೊನ್‌ರನ್ನು ಮಣಿಸಿದ ಫ್ರೆಂಚ್ ಓಪನ್ ಚಾಂಪಿಯನ್ ಅಲೆಕ್ಸಾಂಡರ್ ಝರೆವ್ ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿ ಕ್ವಾರ್ಟರ್ ಫೈನಲ್ ತಲುಪಲು ಸಜ್ಜಾಗಿದ್ದಾರೆ.
ಶನಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಝರೆವ್ ಅವರು 92ನೇ ರ್ಯಾಂಕಿನ ಗಿರೊನ್‌ರನ್ನು6-2, 7-6(7/4), 6-4 ಸೆಟ್‌ಗಳ ಅಂತರದಿಂದ ಮಣಿಸಿದರು. ಅಂತಿಮ-16ರ ಸುತ್ತಿನಲ್ಲಿ ಝಕ್‌ನ 13ನೇ ಶ್ರೇಯಾಂಕದ ಜಿರಿ ಲೆಹೆಕಾರನ್ನು ಎದುರಿಸಲಿದ್ದಾರೆ.

ಜರ್ಮನಿಯ ಆಟಗಾರ ಝರೆವ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಹಿಂದಿನ 9 ಪ್ರಯತ್ನಗಳಲ್ಲಿ ಒಂದು ಬಾರಿಯೂ ನಾಲ್ಕನೇ ಸುತ್ತನ್ನು ದಾಟಿಲ್ಲ. ಈ ಬಾರಿ ಕ್ವಾರ್ಟರ್ ಫೈನಲ್ ತಲುಪುವ ವಿಶ್ವಾಸದಲ್ಲಿದ್ದಾರೆ.
ಮ್ಯಾಡಿಸನ್‌ ಕೀಸ್‌ಗೆ ಜಯ : ಅಮೆರಿಕದ ಆಟಗಾರ್ತಿ ಮ್ಯಾಡಿಸನ್ ಕೀಸ್ ತಮ್ಮದೇ ದೇಶದ ಅಮಂಡಾ ಅನಿಸಿಮೋವಾರನ್ನು ಮಣಿಸಿ ನಾಲ್ಕನೇ ಸುತ್ತು ತಲುಪಿದರು.
26ರ ವಯಸ್ಸಿನ ಮ್ಯಾಡಿಸನ್ 3-6, 6-2, 6-3 ಸೆಟ್‌ಗಳ ಅಂತರದಿಂದ ಜಯಶಾಲಿಯಾಗಿ ಮುಂದಿನ ಸುತ್ತಿಗೇರಿದರು.
31ರ ವಯಸ್ಸಿನ ಮಾಜಿ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಮ್ಯಾಡಿಸನ್ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಝಕ್‌ನ 9ನೇ ಶ್ರೇಯಾಂಕದ ಲಿಂಡಾ ನೊಸ್ಕೋವಾರನ್ನು ಎದುರಿಸಲಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *